logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

acclimatize
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಹೊಸ ವಾಯುಗುಣಕ್ಕೆ ಯಾ ಸನ್ನಿವೇಶಕ್ಕೆ) ಒಗ್ಗಿಕೊ; ಹೊಂದಿಕೊ.
  • ಹೊಂದಿಸು; ಒಗ್ಗಿಸು; ಪಳಗಿಸು; ಹೊಸ ಸನ್ನಿವೇಶಕ್ಕೆ ಯಾ ವಾಯುಗುಣಕ್ಕೆ ಹೊಂದಿಕೊಳ್ಳುವಂತೆ ಮಾಡು.
  • (ರಸಾಯನವಿಜ್ಞಾನ) ಕಲಿಲ (ಕಲಾಯ್ಡ್‍) ದ್ರಾವಣಕ್ಕೆ ಒಂದು ಗರಣೆಕಾರಿಯನ್ನು ಸ್ವಲ್ಪ ಸ್ವಲ್ಪವಾಗಿ ಹಾಕುತ್ತಾ ಹೋಗುವುದರ ಮೂಲಕ ಆ ದ್ರಾವಣದ ಸ್ಥಿರತೆಯನ್ನು ಹೆಚ್ಚಿಸು.

  • acclivitous
    ಗುಣವಾಚಕ
    (ಗುಡ್ಡ, ಬೆಟ್ಟ, ನೆಲದ ವಿಷಯದಲ್ಲಿ) ಚಡಾವಿನ; ಏರುವೋರೆಯ.

    acclivity
    ನಾಮವಾಚಕ
    (ಗುಡ್ಡ, ಬೆಟ್ಟ, ನೆಲದ) ಚಡಾವು; ಏರುವೋರೆ; ದಿಬ್ಬ; ದಿಣ್ಣೆ; ಬೋರೆ; ತಿಟ್ಟು.

    accolade
    ನಾಮವಾಚಕ
  • ಪ್ರಶಸ್ತಿ ದಾನವಿಧಿ; ‘ನೈಟ್‍’ ಪದವಿಯ ಪ್ರದಾನ ಸಮಾರಂಭದಲ್ಲಿ ಭುಜದ ಮೇಲೆ ಮಾಡುವ ಖಡ್ಗ ಸ್ಪರ್ಶದ ಕ್ರಿಯೆ, ಸನ್ನೆ.
  • (ರೂಪಕವಾಗಿ) ಪ್ರಶಸ್ತಿ; ಗೌರವ; ಪುರಸ್ಕಾರ: highest national accolade ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ.
  • ಬಾಗಿಲು ಯಾ ಕಿಟಕಿ ಮೇಲಿನ ಸರ್ಪಾಕಾರದ (S) ಯಾ ಕಮಾನಿನಾಕಾರದ ಅಲಂಕಾರ. Figure: accolade
  • (ಸಂಗೀತ) (ಕೃತಿಯ ಲಿಪಿಯಲ್ಲಿ) ವಿವಿಧ ಸ್ಥಾಯಿಗಳ ಸ್ತರಗಳನ್ನು ಒಟ್ಟುಗೂಡಿಸುವ ಲಂಬರೇಖೆ.

  • accommodate
    ಸಕರ್ಮಕ ಕ್ರಿಯಾಪದ
  • (ಒಂದು ವಸ್ತುವನ್ನಾಗಲಿ, ವ್ಯಕ್ತಿಯನ್ನಾಗಲಿ ಮತ್ತೊಂದಕ್ಕೆ) ಸರಿಹೊಂದಿಸು; ಹೊಂದಿಕೆ ಮಾಡು.
  • (ಹೇಳಿಕೆ, ವಾದ, ಮೊದಲಾದವುಗಳನ್ನು) ಸಮನ್ವಯ ಮಾಡು.
  • (ವ್ಯಕ್ತಿಗಳ ನಡುವೆ) ಸಾಮರಸ್ಯ ಏರ್ಪಡಿಸು; ಭಿನ್ನಾಭಿಪ್ರಾಯ ಪರಿಹರಿಸು.
  • ದೊರಕಿಸಿ ಕೊಡು; ಒದಗಿಸಿಕೊಡು; ಹವಣಿಸಿಕೊಡು: the bank will accommodate him with a loan ಬ್ಯಾಂಕು ಅವನಿಗೆ ಸಾಲವನ್ನು ಒದಗಿಸಿಕೊಡುತ್ತದೆ.
  • (ಮುಖ್ಯವಾಗಿ ಯಾವುದೇ ಆಧಾರ ಯಾ ಜಾಮೀನು ಇಲ್ಲದೆ) ಸಾಲ ಕೊಡು.
  • ಉಪಕರಿಸು; ಸಹಾಯ ಮಾಡು.
  • ಸ್ಥಳ ಕೊಡು; ಅವಕಾಶ ಒದಗಿಸು; ವಸತಿ ಕಲ್ಪಿಸು; ತಾವು ಕೊಡು; ಎಡೆ ಮಾಡಿಕೊಡು.

  • accommodating
    ಗುಣವಾಚಕ
  • ಉಪಕಾರಶೀಲ; ಸಹಾಯಮಾಡುವ–ಪ್ರವೃತ್ತಿಯ, ಸ್ವಭಾವದ.
  • ವ್ಯವಹರಿಸಲು ಸುಲಭವಾದ.
  • ಸುಲಭವಾಗಿ ಹೊಂದಿಕೊಂಡು ಹೋಗುವ.
  • (ಭ್ರಷ್ಟಾಚಾರ ಮೊದಲಾದವುಗಳಿಗೆ) ಸುಲಭವಾಗಿ–ಬಗ್ಗುವ, ವಶವಾಗುವ, ಬೀಳುವ.

  • accommodatingly
    ಕ್ರಿಯಾವಿಶೇಷಣ
    ಸೌಕರ್ಯವಾಗುವಂತೆ; ಸಹಾಯಕವಾಗಿ; ಅನುಕೂಲವಾಗುವ ರೀತಿಯಲ್ಲಿ.

    accommodation
    ನಾಮವಾಚಕ ಪದಗುಚ್ಛ
    accommodation unit ಮನೆ; ವಸತಿ.
  • ಹೊಂದಿಕೆ; ಹೊಂದಾಣಿಕೆ; ಸರಿಹೊಂದಿಸಿಕೊಳ್ಳುವುದು: the accommodation of the eye to the distinct vision of distant objects ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಕಣ್ಣನ್ನು ಸರಿಹೊಂದಿಸಿಕೊಳ್ಳುವುದು.
  • (ಯಾವುದೇ ವಸ್ತುವನ್ನು ಮೂಲಕ್ಕಿಂತ ಭಿನ್ನವಾದ ಒಂದು ಉದ್ದೇಶಕ್ಕೆ ಹಾಗೂ ಪದ, ವಾಕ್ಯ, ಮೊದಲಾದವುಗಳನ್ನು ಮೂಲಕ್ಕಿಂತ ಭಿನ್ನವಾದ ಒಂದು ಅರ್ಥಕ್ಕೆ) ಹೊಂದಿಸಿಕೊಳ್ಳುವುದು.
  • ಹೊಂದಿಕೊಳ್ಳುವುದು.
  • ರಾಜಿ; ಒಪ್ಪಂದ: the question of reaching an accommodation with Japan ಜಪಾನಿನೊಡನೆ ರಾಜಿಗೆ ಬರುವ ಪ್ರಶ್ನೆ.
  • ಆನುಕೂಲ್ಯ; ಸೌಕರ್ಯ: providing fans for the accommodation of passengers ಪ್ರಯಾಣಿಕರ ಸೌಕರ್ಯಕ್ಕಾಗಿ ಹ್ಯಾನುಗಳನ್ನು ಒದಗಿಸುವುದು.
  • (ಹಣದ) ಸಾಲ.
  • ತಾವು; ಎಡೆ; ಅವಕಾಶ; ವಸತಿ; ಸ್ಥಳ; ಜಾಗ.
  • (ಅಮೆರಿಕನ್‍ ಪ್ರಯೋಗ, ಬಹುವಚನದಲ್ಲಿ)
    1. ವಸತಿ.
    2. ಊಟ ಮತ್ತು ವಸತಿ.
    3. (ವಾಹನ ಮೊದಲಾದವುಗಳಲ್ಲಿ) ಆಸನ; ಜಾಗ.

  • accommodation address
    ನಾಮವಾಚಕ
    ಸೌಕರ್ಯದ ವಿಳಾಸ; ಅನುಕೂಲ ವಿಳಾಸ; ವಿಳಾಸವನ್ನು ತಿಳಿಸಲು ಆಗದ ಯಾ ಇಚ್ಛಿಸದ ವ್ಯಕ್ತಿಗೆ ಬರೆಯುವ ಕಾಗದಗಳ ಮೇಲೆ ನಮೂದಿಸುವ ವಿಳಾಸ.

    accommodation bill
    ನಾಮವಾಚಕ
    ಉಪಕಾರದ ಹುಂಡಿ; ಇನ್ನೊಬ್ಬರ ಸಹಾಯಕ್ಕಾಗಿ ಕೊಟ್ಟ ಚೆಕ್ಕು, ಡ್ರಾಹು, ಮೊದಲಾದ ಹುಂಡಿ.


    logo