logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

accomplished
ಗುಣವಾಚಕ
  • ಈಡೇರಿಸಿದ; ನೆರವೇರಿಸಿದ; ಸಾಧಿಸಿದ; ನಿರ್ವಹಿಸಿದ: an accomplished fact ನಿರ್ವಹಿಸಿದ ಸಂಗತಿ.
  • ಮುಗಿಸಿದ; ಪೂರಯಿಸಿದ.
  • ನಿಪುಣ; ನೈಪುಣ್ಯ ಪಡೆದ; ಕುಶಲ; ತಜ್ಞ; ಚತುರ: an accomplished dancer ನಿಪುಣ ನರ್ತಕ.
  • ಸುಶಿಕ್ಷಿತ; ಸುಸಂಸ್ಕೃತ; ಸಂಭಾಷಣೆ, ಕಲೆ, ಸಂಗೀತ, ಸಭ್ಯ ಸಮಾಜದ ರೀತಿನೀತಿಗಳು, ಮೊದಲಾದವುಗಳಲ್ಲಿ ಶಿಕ್ಷಣ ಪಡೆದ.

  • accomplishment
    ನಾಮವಾಚಕ
  • ನೆರವೇರಿಕೆ; ಈಡೇರಿಕೆ; ನಿರ್ವಹಣ; ಸಾಧನೆ.
  • ಮುಗಿವು; ಪೂರಯಿಕೆ; ಪೂರ್ಣಗೊಳಿಕೆ.
  • ಸಾಧನೆ; ಮಾಡಿದ್ದು; ಪಡೆದದ್ದು; ಸಾಧಿಸಿದ್ದು.
  • ಸಂಸ್ಕೃತಿ; ಸುಶಿಕ್ಷಣ; ಮುಖ್ಯವಾಗಿ ಸಮಾಜದಲ್ಲಿ ಸುಸಂಸ್ಕೃತನೆನಿಸಲು ಪಡೆದಿರಬೇಕಾದ ಶಿಕ್ಷಣ, ಸಂಸ್ಕಾರ.
  • (ಹೀನಾರ್ಥಕ ಪ್ರಯೋಗ) ಥಳಕು; (ಮೇಲು ಮೇಲಿನ) ಮೆರಗು; ಬೆಡಗು ಬಿನ್ನಾಣ.
  • (ಯಾವುದೇ ವಿದ್ಯೆ ಯಾ ಕಲೆಯಲ್ಲಿ) ಕೌಶಲ; ಕುಶಲತೆ; ನೈಪುಣ್ಯ; ಸಂಪನ್ನತೆ: painting is one of her accomplishments ಅವಳ ಕುಶಲತೆಗಳಲ್ಲಿ ಚಿತ್ರಕಲೆಯೂ ಒಂದು.

  • accompt
    ಕ್ರಿಯಾಪದ
    account ಪದದ ಪ್ರಾಚೀನ ರೂಪಾಂತರ.

    accompt
    ನಾಮವಾಚಕ
    account ಪದದ ಪ್ರಾಚೀನ ರೂಪಾಂತರ.

    accomptant
    ನಾಮವಾಚಕ
    accountant ಪದದ ಪ್ರಾಚೀನ ರೂಪಾಂತರ.

    accord
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಮುಖ್ಯವಾಗಿ ವಸ್ತುಗಳ ವಿಷಯದಲ್ಲಿ) ಹೊಂದಿಕೊಂಡಿರು; ಸಮರಸವಾಗಿರು; ಅನುಗುಣವಾಗಿರು: his behaviour does not accord with his principles ಅವನ ನಡವಳಿಕೆ ಅವನ ತತ್ತ್ವಗಳಿಗೆ ಅನುಗುಣವಾಗಿಲ್ಲ.
  • (ಸ್ವಾಗತ ಮೊದಲಾದವನ್ನು) ನೀಡು; ಕೊಡು: to accord welcome ಸ್ವಾಗತ ನೀಡು.
  • (ಪ್ರಶಸ್ತಿ ಮೊದಲಾದವನ್ನು) ಪ್ರದಾನ ಮಾಡು, ನೀಡು: the President accorded him an honorary title ಅಧ್ಯಕ್ಷರು ಆತನಿಗೆ ಗೌರವ ಬಿರುದನ್ನು ನೀಡಿದರು.
  • ಸರಿಹೊಂದಿಸು; ಅನುರೂಪಗೊಳಿಸು; ಸಂಗತಗೊಳಿಸು; ಸಮನ್ವಯಗೊಳಿಸು: the various conclusions can be accorded by calm reasoning ಶಾಂತವಾಗಿ ವಿವೇಚಿಸಿದರೆ ಆ ವಿವಿಧ ನಿರ್ಣಯಗಳನ್ನು ಸಮನ್ವಯಗೊಳಿಸಬಹುದು.

  • accord
    ನಾಮವಾಚಕ ನುಡಿಗಟ್ಟು
    with one accord ಏಕಾಭಿಪ್ರಾಯದಿಂದ; ಸರ್ವಸಮ್ಮತಿಯಿಂದ; ಯಾರೂ ವಿರೋಧಿಸದೆ.
  • ಒಮ್ಮನಸ್ಸು; (ಪರಸ್ಪರ) ಒಪ್ಪಿಗೆ; ಸಮ್ಮತಿ; ಅನುಮತಿ; ಏಕಾಭಿಪ್ರಾಯ: with one accord ಎಲ್ಲರ ಒಪ್ಪಿಗೆಯಿಂದ; ಏಕಮತದಿಂದ; ಒಮ್ಮತದಿಂದ.
  • (ಶಾಂತಿಯ) ಸಂಧಿ; ಕೌಲು; ಕರಾರು; ಒಡಂಬಡಿಕೆ.
  • (ಬಣ್ಣ, ರಾಗ, ಸ್ವರ–ಇವುಗಳ) ಹೊಂದಿಕೆ; ಹೊಂದಾಣಿಕೆ; ಮೇಳ; ಸಾಮರಸ್ಯ.
  • ಇಷ್ಟ; ಇಚ್ಛೆ; ಪ್ರೇರಣೆ: he came of his own accord ಅವನು ಸ್ವಯಂ ಪ್ರೇರಣೆಯಿಂದ, ಸ್ವಂತ ಇಚ್ಛೆಯಿಂದ–ಬಂದ.

  • accordance
    ನಾಮವಾಚಕ ಪದಗುಚ್ಛ
    in accordance with ಅನುಗುಣವಾಗಿ; ಪ್ರಕಾರ; ಅನುಸಾರವಾಗಿ; ಮೇರೆಗೆ: in accordance with custom ಸಂಪ್ರದಾಯಕ್ಕೆ ಅನುಸಾರವಾಗಿ.
  • ಹೊಂದಿಕೆ; ಅನುಗುಣವಾಗಿರುವಿಕೆ; ಆನುಗುಣ್ಯ; ಅನುರೂಪತೆ; ಆನುರೂಪ್ಯ.
  • ಕೊಡುಗೆ; ನೀಡಿಕೆ; ಪ್ರದಾನ: accordance of this right is not a mistake ಈ ಹಕ್ಕು ಕೊಟ್ಟದ್ದು ತಪ್ಪಲ್ಲ.

  • accordant
    ಗುಣವಾಚಕ
    ಹೊಂದಿಕೊಳ್ಳುವ; ಒಪ್ಪುವ; ಅನುಗುಣವಾದ: a place perfectly accordant with man’s nature ಮಾನವನ ಸ್ವಭಾವಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುವ ಸ್ಥಳ.

    accordantly
    ಕ್ರಿಯಾವಿಶೇಷಣ
    ಹೊಂದಿಕೊಳ್ಳುವಂತೆ; ಒಪ್ಪುವಂತೆ; ಅನುಗುಣವಾಗಿ.


    logo