logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

landslide
ನಾಮವಾಚಕ
  • ನೆಲಕುಸಿತ; ನೆಲಸರಿತ; ಭೂಕುಸಿತ; ಭೂಪಾತ; ಇಳಿಜಾರು ಪ್ರದೇಶದಲ್ಲಿ, ಪರ್ವತ, ಕಡಿಬಂಡೆ, ಮೊದಲಾದವುಗಳಿಂದ ಅನಾಮತ್ತಾಗಿ ಭೂಮಿ ಕುಸಿಯುವುದು, ಕೊಚ್ಚಿ ಬೀಳುವುದು.
  • ಭಾರಿ, ಪ್ರಚಂಡ – ಬಹುಮತ; ಮುಖ್ಯವಾಗಿ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಅನಿರೀಕ್ಷಿತವಾಗಿ ಪ್ರಚಂಡ ಬಹುಮತ ದೊರೆಯುವಿಕೆ.

  • landslip
    ನಾಮವಾಚಕ
    = landslide(1).

    landsman
    ನಾಮವಾಚಕ
    ಅನಾವಿಕ; ನಾವಿಕನಲ್ಲದವನು; ನೆಲವಾಸಿ.

    landward
    ಗುಣವಾಚಕ
  • (ಸ್ಕಾಟ್ಲಂಡ್‍) ಗ್ರಾಮೀಣ; ಗ್ರಾಮಕ್ಕೆ ಸಂಬಂಧಿಸಿದ: landward-population ಹಳ್ಳಿಗಾಡಿನ ಜನತೆ.
  • ಭೂಪ್ರದೇಶದ – ಕಡೆ ಇರುವ, ದಿಕ್ಕಿನಲ್ಲಿರುವ: on the landward side, Madras is surrounded by plains ಭೂಪ್ರದೇಶದ ಕಡೆ ಮದ್ರಾಸು ಮೈದಾನ ಪ್ರದೇಶಗಳಿಂದ ಸುತ್ತುವರಿದಿದೆ.

  • landward
    ಕ್ರಿಯಾವಿಶೇಷಣ
    ಭೂಪ್ರದೇಶದ ಕಡೆ ಯಾ ದಿಕ್ಕಿನಲ್ಲಿ.

    landwards
    ಕ್ರಿಯಾವಿಶೇಷಣ
    = 2landward.

    landwind
    ನಾಮವಾಚಕ
    ನೆಲಗಾಳಿ; ಭೂವಾಯು; ಭೂಮಾರುತ; ಭೂಮಿಯಿಂದ ಸಮುದ್ರದತ್ತ ಬೀಸುತ್ತಿರುವ ಗಾಳಿ.

    lane
    ನಾಮವಾಚಕ ಪದಗುಚ್ಛ ನುಡಿಗಟ್ಟು
    it’s a long lane that has no turning ಬದಲಾವಣೆ – ಬಂದೇ ಬರಬೇಕು, ಆಗಿಯೇ ಆಗಬೇಕು, ಅನಿವಾರ್ಯವೇ.
  • (ಸಾಮಾನ್ಯವಾಗಿಬೇಲಿಗಳ ನಡುವಣ) ಓಣಿ; ಕಿರುದಾರಿ.
  • (ಸಾಮಾನ್ಯವಾಗಿ ಹಳ್ಳಿಯ) ಕಿರುಬೀದಿ; ಗಲ್ಲಿ; ಓಣಿ; ಸಂದಿ; ಇಕ್ಕಟ್ಟಾದ ಬೀದಿ.
  • ಜನರ ಸಾಲುಗಳ ನಡುವಣ ಹಾದಿ.
  • (ರಸ್ತೆಯಲ್ಲಿ ಒಬ್ಬರ ಹಿಂದೆ ಒಬ್ಬರು ಯಾ ವಾಹನಗಳು ಒಂದರ ಹಿಂದೆ ಒಂದು ಸಂಚರಿಸಲು ಗುರುತಿಸಿದ) ಓಣಿ; ಪಟ್ಟೆ; ಸೀಳು – ಹಾದಿ, ದಾರಿ; three-lane highway ಮೂರು ಓಣಿಗಳ ಹೆದ್ದಾರಿ.
  • (ಪಂದ್ಯದಲ್ಲಿ ಓಟಗಾರ, ಹುಟ್ಟು ಹಾಕುವವನು, ಈಜುಗಾರ, ಮೊದಲಾದವರು ಹೋಗುವ) ಓಣಿ; ಪಟ್ಟಿ; ನೆಲ ಯಾ ಜಲ – ಪಥ.
  • ನೌಕಾಪಥ; ಹಡಗುಹಾದಿ; ಹಡಗಿನ ದಾರಿ; ದೊಡ್ಡ ಜಹಜುಗಳ ಸಂಚಾರಕ್ಕಾಗಿ ಕಡಲಲ್ಲಿ ಗೊತ್ತುಮಾಡಿರುವ ದಾರಿ: ocean lane ಸಾಗರ ಪಥ.
  • ವಿಮಾನಪಥ; ವಿಮಾನವು ಸಾಮಾನ್ಯವಾಗಿ ಸಂಚರಿಸುವ ಪಥ.

  • lang syne
    ಕ್ರಿಯಾವಿಶೇಷಣ
    (ಸ್ಕಾಟ್ಲಂಡ್‍) ಹಳೆಯ ದಿನಗಳಲ್ಲಿ; ಹಳೆಗಾಲದಲ್ಲಿ; ಹಳೆಯ ಕಾಲದಲ್ಲಿ; ಹಿಂದಿನ – ದಿನಗಳಲ್ಲಿ, ಕಾಲದಲ್ಲಿ.

    lang syne
    ನಾಮವಾಚಕ
    (ಸ್ಕಾಟ್ಲಂಡ್‍) ಹಳೆಯ – ದಿನಗಳು, ಕಾಲ; ಹಿಂದಿನ – ದಿನಗಳು, ಕಾಲ.


    logo