logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

immixture
ನಾಮವಾಚಕ
  • ಬೆರಸುವುದು; ಮಿಶ್ರಣ: the immixture of oil with colours ಬಣ್ಣಗಳೊಡನೆ ತೈಲದ ಮಿಶ್ರಣ.
  • ಸಿಕ್ಕಿಹಾಕಿಕೊಳ್ಳುವುದು; ಸಿಕ್ಕಿಕೊಳ್ಳುವುದು: immixture in political strife ರಾಜಕೀಯ ಸಂಘರ್ಷದಲ್ಲಿ ಸಿಕ್ಕಿಹಾಕಿಕೊಳ್ಳುವುದು.

  • immobile
    ಗುಣವಾಚಕ
  • ಚಲಿಸದ; ಅಚಲ; ಸ್ಥಾವರ.
  • ಚಲಿಸಲಾಗದ; ಚಲಿಸಲಾರದ; ಚಲಿಸುವಂತೆ ಮಾಡಲಾಗದ.
  • ನಿಶ್ಚಲ; ಸ್ತಬ್ಧ; ಸ್ಥಿರ; ಸ್ಥಾಯಿ; ಚಲನೆಯಿಲ್ಲದ; ಕದಲದ.

  • immobilise
    ಸಕರ್ಮಕ ಕ್ರಿಯಾಪದ
    = immobilize.

    immobility
    ನಾಮವಾಚಕ
    ನಿಶ್ಚಲತೆ; ಸ್ಥಿರತೆ; ಅಚಲತೆ; ಸ್ಥಾಯಿತ್ವ; ಸ್ಥಾವರತೆ; ಕದಲದಿರುವಿಕೆ.

    immobilization
    ನಾಮವಾಚಕ
  • ಸ್ತಂಭನ; ನಿಶ್ಚಲಗೊಳಿಸುವಿಕೆ.
  • (ಸೈನ್ಯ, ವಾಹನಗಳ ವಿಷಯದಲ್ಲಿ) ಸ್ತಂಭನ; ಚಲಿಸಲಾಗದಂತೆ ಮಾಡುವಿಕೆ.
  • (ನಾಣ್ಯದ ವಿಷಯದಲ್ಲಿ) ಚಲಾವಣೆ ನಿಲ್ಲಿಸುವಿಕೆ, ಸ್ಥಗಿತಗೊಳಿಸುವಿಕೆ; ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಳ್ಳುವಿಕೆ.

  • immobilize
    ಸಕರ್ಮಕ ಕ್ರಿಯಾಪದ
  • ನಿಶ್ಚಲಗೊಳಿಸು; ಅಚಲಗೊಳಿಸು; ಕದಲದಂತೆ, ಚಲಿಸದಂತೆ – ಮಾಡು.
  • (ಸೈನ್ಯಪಡೆಗಳನ್ನು, ವಾಹನಗಳನ್ನು) ಚಲಿಸಲಾಗದಂತೆ, ಕದಲದಂತೆ ಮಾಡು; ಸ್ಥಳಾಂತರಗೊಳ್ಳದಂತೆ ಮಾಡು; ಸ್ಥಗಿತಗೊಳಿಸು: the enemy was immobilized by lack of transport ವಾಹನಸೌಕರ್ಯದ ಅಭಾವದಿಂದ ಶತ್ರುಸೈನ್ಯ ಕದಲದಂತಾಯಿತು.
  • (ಚಿಕಿತ್ಸೆಯಲ್ಲಿ ರೋಗಿಯನ್ನು ಯಾ ಅವಯವವನ್ನು) ನಿಶ್ಚಲಗೊಳಿಸು; ಕದಲದಂತೆ ಇರಿಸು: immobilizing a fractured bone ಮುರಿದ ಮೂಳೆಯನ್ನು ಕದಲದಂತೆ ಇರಿಸು.
  • (ವ್ಯಕ್ತಿ ಮೊದಲಾದವರ) ಚಲಿಸುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸು, ನಿಯಂತ್ರಿಸು, ಹದ್ದು ಬಸ್ತಿನಲ್ಲಿಡು.
  • (ನಾಣ್ಯದ ವಿಷಯದಲ್ಲಿ) ಚಲಾವಣೆ ನಿಲ್ಲಿಸು; ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊ.

  • immoderate
    ಗುಣವಾಚಕ
    ಅತಿ(ಯಾದ); ಮಿತಿಈರಿದ; ಹಾಳತವಿಲ್ಲದ; ಹಿಡಿತವಿಲ್ಲದ; ಸಂಯಮರಹಿತ; ಹದ್ದುಈರಿದ; ಅಳತೆ ಈರಿದ: immoderate drinking ಮಿತಿಈರಿದ ಕುಡಿತ.

    immoderately
    ಕ್ರಿಯಾವಿಶೇಷಣ
    ಮಿತಿಈರಿ; ಅತಿಯಾಗಿ; ಹಾಳತವಿಲ್ಲದೆ; ಹಿಡಿತವಿಲ್ಲದೆ; ಸಂಯಮವಿಲ್ಲದೆ; ಹದ್ದುಈರಿ; ವಿಪರೀತವಾಗಿ.

    immoderateness
    ನಾಮವಾಚಕ
    ಅತಿ(ಯಾಗಿರುವಿಕೆ); ಸಂಯಮರಾಹಿತ್ಯ; ಅತಿರೇಕ; ಮಿತಿಈರಿದ – ಸ್ಥಿತಿ, ಲಕ್ಷಣ.

    immoderation
    ನಾಮವಾಚಕ
    = immoderateness.


    logo