logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dead pan
ನಾಮವಾಚಕ
(ಅಶಿಷ್ಟ) ನಿರ್ಲಿಪ್ತ ಮೋರೆ; ಭಾವ ರಹಿತ, ಭಾವಶೂನ್ಯ, ನಿರ್ಭಾವ – ಮುಖ.

dead point
ನಾಮವಾಚಕ
= dead centre.

dead reckoning
ನಾಮವಾಚಕ
  • (ನೌಕಾಯಾನ) ಸ್ಥಾನಗಣನೆ; ಸ್ಥಾನನಿರ್ದೇಶನ; ಮಳೆ, ಮೋಡ, ಮೊದಲಾದವುಗಳ ಕಾರಣ ಸೂರ್ಯ, ನಕ್ಷತ್ರ, ಮೊದಲಾದವುಗಳನ್ನು ನೋಡಿ ಹಡಗಿನ ಸ್ಥಾನ ಗೊತ್ತು ಮಾಡಲು ಸಾಧ್ಯವಿಲ್ಲದಾಗ ದಿಕ್ಸೂಚಿ, ವೇಗಸೂಚಿ, ಮೊದಲಾದವುಗಳಿಂದ ಅದನ್ನು ಕಂಡುಹಿಡಿಯುವುದು.
  • ಹಾಗೆ ಕಂಡುಹಿಡಿದ ಸ್ಥಾನ.

  • Dead Sea
    ನಾಮವಾಚಕ
    ಮೃತ ಸರೋವರ; ಪ್ಯಾಲೆಸ್ತೈನಿನಲ್ಲಿರುವ ಅತಿ ಉಪ್ಪು ನೀರಿನ, ಜಲಚರಗಳು ವಾಸಿಸಲು ಸಾಧ್ಯವಿಲ್ಲದ, ದೊಡ್ಡಸರೋವರ.

    Dead Sea apple
    ನಾಮವಾಚಕ
  • ಮೃತಸರಸ್ಸಿನ – ಫಲ, ಹಣ್ಣು; ಪ್ರಾಚೀನ ಲೇಖಕರು ವರ್ಣಿಸಿರುವ, ಸುಂದರವಾಗಿರುವ, ಆದರೆ ಮುಟ್ಟಿದರೆ ಬೂದಿಯಾಗುವ ಹಣ್ಣು.
  • (ರೂಪಕವಾಗಿ) ಗಗನ ಕುಸುಮ; ಪೊಳ್ಳು, ಮಿಥ್ಯೆ; ಭ್ರಮೆ; ಮೇಲೆ ಸುಂದರವಾಗಿ ತೋರಿದರೂ, ವಾಸ್ತವದಲ್ಲಿ ನಿರಾಶೆಯನ್ನುಂಟುಮಾಡುವ ಯಾವುದೇ ವಸ್ತು, ವಿಷಯ.

  • Dead Sea fruit
    ನಾಮವಾಚಕ
    = Dead Sea apple.

    Dead Sea Scrolls
    ನಾಮವಾಚಕ
    ಮೃತ ಸರೋವರದ ಸುರುಳಿಗಳು; ಮೃತ ಸರೋವರದ ಬಳಿ ಗುಹೆಗಳಲ್ಲಿ ದೊರೆತ, ಕ್ರಿಸ್ತಪೂರ್ವ100ರಿಂದ ಕ್ರಿಸ್ತಶಕ 135ರ ಒಳಗಿನ, ಹೀಬ್ರೂ ಮತ್ತು ಆರಮೇಯಿಕ್‍ ಭಾಷೆಗಳಲ್ಲಿರುವ ಹಳೆ ಒಡಂಬಡಿಕೆಯ, ಮತ್ತು ಇತರ ಗ್ರಂಥಗಳ ಚರ್ಮದ ಮತ್ತು ತಾಮ್ರದ ತಗಡುಗಳ ಲಿಖಿತ ಸುರುಳಿ ಪತ್ರಗಳು.

    dead season
    ನಾಮವಾಚಕ
    ಸ್ಥಗಿತಕಾಲ; ಚಟುವಟಿಕೆಯಿಲ್ಲದ, ಕಾರ್ಯಾಚರಣೆಯಿಲ್ಲದ, ಏನೂ ಜರುಗದ – ಕಾಲ.

    dead set
    ನಾಮವಾಚಕ
  • ದೃಢಭಂಗಿ; ಬೇಟೆಯ ಇರವನ್ನು ಮತ್ತು ಅದು ಇರುವ ಜಾಗವನ್ನು ಸೂಚಿಸುವಾಗ ಬೇಟೆ ನಾಯಿಯು ಸೆಟೆದು ನಿಲ್ಲುವ ಭಂಗಿ ಯಾ ನಿಲುವು.
  • ತೀವ್ರ ಪ್ರಯತ್ನ.

  • dead sound
    ನಾಮವಾಚಕ
    ಸಪ್ಪೆದನಿ; ಅನುರಣನವಿಲ್ಲದ ಧ್ವನಿ.


    logo