logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ballon
ನಾಮವಾಚಕ
(ಬ್ಯಾಲೆ ನರ್ತನದಲ್ಲಿ) ತೇಲು, ಮೆಲು – ಗತಿ; ಪ್ಲವನ.

ballon d'essai
ನಾಮವಾಚಕ
ಇಂಗಿತ, ಪ್ರತಿಕ್ರಿಯೆ – ಪರೀಕ್ಷೆ; ಯಾವುದೇ ಒಂದು ಹೊಸ ತತ್ತ್ವ, ಧೋರಣೆ, ಮೊದಲಾದವುಗಳ ವಿಷಯದಲ್ಲಿಸಾರ್ವಜನಿಕರ ಯಾ ಬೇರೆ ದೇಶದವರ ಅಭಿಪ್ರಾಯ, ಪ್ರತಿಕ್ರಿಯೆ ಏನೆಂದು ತಿಳಿಯಲು ನಡೆಸುವ ಪ್ರಯೋಗ, ಪರೀಕ್ಷೆ.

ballonet
ನಾಮವಾಚಕ
(ಪ್ಲಾವಕ ಅನಿಲ ಹೊರಬಿದ್ದಂತೆಲ್ಲಾ, ಒತ್ತಡ, ಮೊದಲಾದವನ್ನು ನಿಯಂತ್ರಿಸುವ) ಬಲೂನಿನ ಯಾ ಆಕಾಶನಾವೆಯ ಒಳಗಿರುವ ಅನಿಲಕೋಶ.

balloon
ನಾಮವಾಚಕ ನುಡಿಗಟ್ಟು
when the balloon goes up ಯಾವುದೇ (ಕೆಲಸ ಯಾ ತೊಂದರೆ) ಪ್ರಾರಂಭವಾದಾಗ, ಶುರುವಾದಾಗ.
  • (ವಾಸ್ತುಶಿಲ್ಪ) ಶಿಖರ ಗುಂಡು; ಂಗಗೋಳ; ಕಂಬ, ಗೋಪುರ ಮೊದಲಾದವುಗಳ ತುದಿಯಲ್ಲಿರುವ ದೊಡ್ಡಗುಂಡು.
  • ಬಲೂನು; ಆಕಾಶಬುಟ್ಟಿ; ಸಾಮಾನ್ಯ ಗಾಳಿಗಿಂತ ಹಗುರವಾದ ಬಿಸಿಗಾಳಿ ಯಾ ಬೇರೆ ಅನಿಲವನ್ನು ತುಂಬಿರುವುದರಿಂದ ಆಕಾಶದ ಕಡೆಗೆ ಏರಲು ಸಾಧ್ಯವಾದ, ಗಾಳಿಹೊಗದ, ಗುಂಡಾಗಿ ಯಾ ಸುಮಾರಾಗಿ ಗೋಳಾಕಾರದಲ್ಲಿರುವ ಚೀಲ ಯಾ ಕೋಶ. Figure: balloon
  • ಬಲೂನು; ಉಸಿರುಬ್ಬಿ; ಆಟಕ್ಕಾಗಿ ಬಳಸುವ, ಗಾಳಿ ತುಂಬಿದ ರಬ್ಬರು ಚೀಲ.
  • ಗುಳ್ಳೆ; ಗೋಲ; ಬುರುಡೆ; ಯಾವುದೇ ಟೊಳ್ಳಾದ ಮತ್ತು ಉಬ್ಬಿರುವ ಪದಾರ್ಥ.
  • (ಆಡುಮಾತು) ಬಲೂನು ಲೇಖ; ವ್ಯಂಗ್ಯಚಿತ್ರದಲ್ಲಿ ಪಾತ್ರದ ಬಾಯಿಂದ ಹೊರಬಿದ್ದ ಮಾತುಗಳನ್ನು ಯಾ ಯೋಚನೆಗಳನ್ನು ಒಳಗೊಂಡಿರುವ ಬಲೂನಿನಾಕಾರದ ರೇಖೆ, ಗೆರೆ.
  • (ಕುಡಿಯಲು ಬಳಸುವ) ದೊಡ್ಡ ಗುಂಡು ಲೋಟ.

  • balloon
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಚೆಂಡು ಮೊದಲಾದವನ್ನು) ಮೇಲಕ್ಕೆ, ಎತ್ತರಕ್ಕೆ, ಆಕಾಶಕ್ಕೆ – ಹೊಡೆ, ಒದೆ.
  • ಬಲೂನಿನಲ್ಲೇರು; ಆಕಾಶಬುಟ್ಟಿಯಲ್ಲಿ ಮೇಲಕ್ಕೇರು.
  • (ಗವುಸು ಮೊದಲಾದವುಗಳ ವಿಷಯದಲ್ಲಿ) ಬಲೂನಾಗು; ಬಲೂನಿನಂತೆ ಉಬ್ಬು.
  • ಉಬ್ಬು; ಊದು; ಹೆಚ್ಚಾಗು; ಅಧಿಕವಾಗು: membership has ballooned beyond all expectations ಸದಸ್ಯ ಸಂಖ್ಯೆ ನಿರೀಕ್ಷೆಗಿಂತ ಹೆಚ್ಚಾಗಿ ಉಬ್ಬಿತು, ಹೆಚ್ಚಾಯಿತು.

  • balloon barrage
    ನಾಮವಾಚಕ
    ಬಲೂನು ತಡೆಸಾಲು; ಲಘು ವಿಮಾನಗಳಿಗೆ ಎದುರಾಗಿ ಉಕ್ಕಿನ ಹೊರಜಿಗಳಿಂದ ಕಟ್ಟಿ ನಿಲ್ಲಿಸುವ ಬಲೂನುಗಳ ಸಾಲು.

    balloon tire
    ನಾಮವಾಚಕ
    = balloon tyre.

    balloon tyre
    ನಾಮವಾಚಕ
    ಬಲೂನು ಟೈರು; ಕಡಮೆ ಗಾಳಿಯೊತ್ತಡದ, ಹೆಚ್ಚು ಅಗಲದ, ಮೋಟಾರು ವಾಹನ, ಮೊದಲಾದವುಗಳ ಟೈರು.

    balloon vine
    ನಾಮವಾಚಕ
    ಬಲೂನು ಬಳ್ಳಿ; ಅಮೆರಿಕದ ಉಷ್ಣವಲಯ ಪ್ರದೇಶದಲ್ಲಿ ಬೆಳೆಸುವ, ಬಲೂನಿನಂಥ ಬೀಜಕೋಶಗಳುಳ್ಳ ಒಂದು ಬಳ್ಳಿ.

    ballooner
    ನಾಮವಾಚಕ
    ಬಲೂನಿನವನು; ಪ್ರದರ್ಶನಕ್ಕಾಗಿ ಬಲೂನಿನಲ್ಲಿ ಹಾರುವವನು.


    logo