logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

accipetral
ಗುಣವಾಚಕ
  • ಗಿಡುಗನಂಥ; ಗಿಡುಗದ ಸ್ವಭಾವದ.
  • ಗಿಡುಗಗಣ್ಣಿನ; ತೀಕ್ಷ್ಣ ದೃಷ್ಟಿಯ; ಚುರುಕುಗಣ್ಣಿನ.
  • ದೋಚುವ; ಅತ್ಯಾಸೆಯ.

  • acclaim
    ಸಕರ್ಮಕ ಕ್ರಿಯಾಪದ
  • ಉಗ್ಗಡಿಸು; ಉದ್ಘೋಷಿಸು; ‘ಭಲಾ’, ‘ಭೇಷ್‍’, ‘ಉಘೇ’ ಎನ್ನು.
  • (ರಾಜ, ಜಯಶಾಲಿ, ಉದ್ಧಾರಕ ಎಂದು) ಘೋಷಿಸು: acclaimed him king ಅವನನ್ನು ರಾಜನೊಂದು ಘೋಷಿಸಿದರು.
  • ಹೊಗಳು; ಪ್ರಶಂಸಿಸು: the book has been widely acclaimed by critics ಪುಸ್ತಕವು ವ್ಯಾಪಕವಾಗಿ ವಿಮರ್ಶಕರ ಪ್ರಶಂಸೆಗಳಿಸಿದೆ.

  • acclaim
    ನಾಮವಾಚಕ
  • ಉಗ್ಗಡಣೆ; ಜಯಘೋಷ; ಪ್ರಶಂಸಾಘೋಷ.
  • ಹೊಗಳಿಕೆ; ಪ್ರಶಂಸೆ.

  • acclamation
    ನಾಮವಾಚಕ
  • ಒಕ್ಕೊರಲಿನ ಅನುಮೋದನೆ: voted by acclamation ಒಕ್ಕೊರಲಿನಿಂದ ಅನುಮೋದಿತವಾಯಿತು.
  • ಉಗ್ಗಡಣೆ; ಉದ್ಘೋಷ; ಜಯಘೋಷ; ಪ್ರಶಂಸಾಘೋಷ.

  • acclimatation
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) = acclimatization.

    acclimate
    ಸಕರ್ಮಕ ಕ್ರಿಯಾಪದ
    (ಅಮೆರಿಕನ್‍ ಪ್ರಯೋಗ) = acclimatize ಸಕರ್ಮಕ ಕ್ರಿಯಾಪದ.

    acclimation
    ನಾಮವಾಚಕ
    = acclimatization.

    acclimatisation
    ನಾಮವಾಚಕ
    = acclimatization.

    acclimatise
    ಕ್ರಿಯಾಪದ
    = acclimatize.

    acclimatization
    ನಾಮವಾಚಕ
  • ಹೊಂದಿಸುವಿಕೆ; ಒಗ್ಗಿಸುವಿಕೆ; ಹೊಸ ವಾತಾವರಣಕ್ಕೆ ಯಾ ಸನ್ನಿವೇಶಕ್ಕೆ ಒಗ್ಗಿಸುವುದು.
  • ಹೊಂದಾಣಿಕೆ; ಒಗ್ಗಿಕೊಳ್ಳುವಿಕೆ; ಹೊಸ ವಾತಾವರಣಕ್ಕೆ ಯಾ ಸನ್ನಿವೇಶಕ್ಕೆ ಹೊಂದಿಕೊಳ್ಳುವುದು.
  • (ಸಸ್ಯವಿಜ್ಞಾನ) ಸನ್ನಿವೇಶಾನುಕೂಲನ; ಒಂದು ಸಸ್ಯಜಾತಿ ಬೇರೆ ವಾಯುಗುಣಕ್ಕೆ ಹೊಂದಿಕೊಳ್ಳಲು ಹಲವಾರು ತಲೆಮಾರುಗಳಲ್ಲಿ ಮಾರ್ಪಾಟು ಹೊಂದುವುದು.


  • logo