logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

myxoedema
ನಾಮವಾಚಕ
(ರೋಗಶಾಸ್ತ್ರ) ಮಿಕ್ಸೊಡೀಮ; ತೈರಾಯಿಡ್‍ ಗ್ರಂಥಿ ಸರಿಯಾಗಿ ಕೆಲಸ ಮಾಡದಿರುವುದರಿಂದ ಚರ್ಮದ ಕೆಳಗಿನ ಊತಕಗಳು ದಪ್ಪನಾಗಿ, ದೈಹಿಕ ತೂಕ ಹೆಚ್ಚಿ, ಬುದ್ಧಿಮಾಂದ್ಯ, ನಿತ್ರಾಣ ಮತ್ತು ಚಳಿಯನ್ನು ತಡೆದುಕೊಳ್ಳಲಾಗದಿರುವಿಕೆ ಮೊದಲಾದವು ಉಂಟಾಗುವ ಒಂದು ರೋಗ.

myxoma
ನಾಮವಾಚಕ
ಮಿಕ್ಸೋಮ; ಲೋಳೆಗಡ್ಡೆ; ಹೊಕ್ಕುಳ ಬಳ್ಳಿಯಲ್ಲಿ ಕಂಡುಬರುವಂಥ ಲೋಳೆಯ ಯಾ ಜೆಲೆಟಿನ್‍ನಂಥ ಊತಕಗಳ ಸೌಮ್ಯವಾದ, ಮಾರಕವಲ್ಲದ ಗೆಡ್ಡೆ.

myxomatosis
ನಾಮವಾಚಕ
ಮಿಕ್ಸಮಟೋಸಿಸ್‍; ಮಿಕ್ಸೋಮ ಗೆಡ್ಡೆಗಳು ಕಾಣಿಸಿಕೊಳ್ಳುವ, (ಮುಖ್ಯವಾಗಿ ಮೊಲಗಳಿಗೆ ಬರುವ) ಒಂದು ವೈರಸ್‍ ರೋಗ.

myxomatous
ಗುಣವಾಚಕ
ಮಿಕ್ಸೋಮ ರೋಗದ ಯಾ ಅದಕ್ಕೆ ಸಂಬಂಧಿಸಿದ ಲೋಳೆ ಗೆಡ್ಡೆಯ ಯಾ ಅದಕ್ಕೆ ಸಂಬಂಧಿಸಿದ.

myxomycete
ನಾಮವಾಚಕ
ತೇವ ಪ್ರದೇಶಗಳಲ್ಲಿ ಜೀವಿಸುವ, ಸಣ್ಣ ಅಕೋಶೀಯ ಜೀವಿಗಳ ತಂಡ.

myxovirus
ನಾಮವಾಚಕ
ಮಿಕ್ಸೋವೈರಸ್‍; ಇನ್‍ಹ್ಲುಎನ್‍ಸಾ ಜ್ವರದ ವೈರಸ್‍ಗಳನ್ನು ಒಳಗೊಂಡ ವರ್ಗಗಳಲ್ಲಿ ಒಂದು.


logo