logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

unciform
ಗುಣವಾಚಕ
= uncinate.

uncinate
ಗುಣವಾಚಕ
(ಅಂಗರಚನಾಶಾಸ್ತ್ರ ಮೊದಲಾದವು) ಕೊಕ್ಕೆಯಂತೆ ಬಾಗಿರುವ; ಕೊಕ್ಕೆಯಾಕಾರದ; ಕೊಂಕಾದ; ಡೊಂಕಾಗಿರುವ.

uncircumcised
ಗುಣವಾಚಕ
  • ಸುನತಿಯಾಗಿಲ್ಲದ.
  • (ರೂಪಕವಾಗಿ) ವಿಧರ್ಮಿಯಾದ; ಧರ್ಮಸಂಸ್ಕಾರ ರಹಿತ.

  • uncircumcision
    ನಾಮವಾಚಕ ಪದಗುಚ್ಛ
    ಸುನತಿಯಾಗಿಲ್ಲದಿರುವುದು. the uncircumcision (ಹೊಸ ಒಡಂಬಡಿಕೆ) ಸುನತಿ ಯಾಗಿಲ್ಲದವರು; ಯೆಹೂದ್ಯೇತರರು ಯಾ ಮುಸಲ್ಮಾನೇತರರು.

    uncivil
    ಗುಣವಾಚಕ
  • ಅನಾಗರಿಕ; ಅಸಭ್ಯ; ಒರಟುರೀತಿಯ.
  • ಸಾರ್ವಜನಿಕರ; ನಾಗರಿಕರ ಹಿತಾಸಕ್ತಿಗೆ ವಿರೋಧವಾದ; ನಾಗರಿಕ ವಿರೋಧಿ.

  • uncivilized
    ಗುಣವಾಚಕ
  • ಅನಾಗರಿಕ; ನಾಗರಿಕತೆ – ಇಲ್ಲದ, ಪಡೆದಿರದ.
  • ಒರಟು; ಅಸಂಸ್ಕೃತ; ಪ್ರಾಕೃತ.

  • uncivilly
    ಕ್ರಿಯಾವಿಶೇಷಣ
  • ಅನಾಗರಿಕವಾಗಿ; ಅಸಭ್ಯವಾಗಿ; ಒರಟು ರೀತಿಯಲ್ಲಿ.
  • ನಾಗರಿಕ ವಿರೋಧಿಯಾಗಿ.

  • unclad
    ಗುಣವಾಚಕ
    ವಿವಸ್ತ್ರವಾದ; ಬೆತ್ತಲೆ; ಬರಿಮೈಯ; ಬಟ್ಟೆ ತೊಡದ; ನಗ್ನ.

    unclaimed
    ಗುಣವಾಚಕ
    ವಾರಸುದಾರರಿಲ್ಲದ; ಹಕ್ಕುದಾರರಿಲ್ಲದ.

    unclasp
    ಸಕರ್ಮಕ ಕ್ರಿಯಾಪದ
  • ಚಿಲಕ, ಕೊಂಡಿ, ಬಂಧನಿ, ತೆಕ್ಕೆ, ಮೊದಲಾದವನ್ನು – ಸಡಿಲಿಸು, ತೆಗೆ.
  • ಹಿಡಿತ ಸಡಿಲಿಸು; ಹಿಡಿತ ತಪು , ತಪ್ಪಿಸು; ಕೈ ಮೊದಲಾದವುಗಳ ಮುಷ್ಟಿಯನ್ನು ಸಡಿಲಿಸು, ಬಿಡು.


  • logo