logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oedematose
ಗುಣವಾಚಕ
ಇಡೀಮಯುಕ್ತ; ಇಡೀಮವುಳ್ಳ; ದ್ರವಶೋಥಯುಕ್ತ; ದ್ರವಶೋಥಪೂರಿತ.

oedematous
ಗುಣವಾಚಕ
= oedematose.

oedematously
ಕ್ರಿಯಾವಿಶೇಷಣ
ಇಡೀಮ ತುಂಬಿ; ದ್ರವಶೋಥಗೂಡಿ; ದ್ರವಶೋಥ ತುಂಬಿ.

Oedipal
ಗುಣವಾಚಕ
(ಮನಶ್ಶಾಸ್ತ್ರ) ಈಡಿಪಸ್‍ ಮನೋವಿಕಾರದ (Oedipus complex) ಯಾ ಅದಕ್ಕೆ ಸಂಬಂಧಿಸಿದ.

Oedipus
ನಾಮವಾಚಕ
  • ಸಮಸ್ಯಾಭೇದಕ; ಒಗಟುಗಳನ್ನು, ಸಮಸ್ಯೆಗಳನ್ನು–ಬಿಡಿಸುವವನು.
  • = Oedipus complex.

  • Oedipus complex
    ನಾಮವಾಚಕ
    (ಮನಶ್ಶಾಸ್ತ್ರ) ಈಡಿಪಸ್‍ (ಮನೋ)ವಿಕಾರ:
  • ಹ್ರಾಯ್ಡ್‍ ಎಂಬ ಮನೋವಿಶ್ಲೇಷಣಶಾಸ್ತ್ರಜ್ಞನ ಮತ್ತು ಅವನ ಪಂಥದವರ ಅಭಿಪ್ರಾಯದಂತೆ, 3 ರಿಂದ 6 ವರ್ಷ ವಯಸ್ಸಿನ ಅವಧಿಯಲ್ಲಿ ಒಂದು ಮಗುವಿನ (ಮುಖ್ಯವಾಗಿ ಗಂಡುಮಗುವಿನ) ಮನಸ್ಸಿನಲ್ಲಿ ತನ್ನ ತಾಯಿತಂದೆಗಳ ಪೈಕಿ ಭಿನ್ನಲಿಂಗದ ವ್ಯಕ್ತಿಯಲ್ಲಿ (ಮುಖ್ಯವಾಗಿ ತಾಯಿಯಲ್ಲಿ) ಅನುರಾಗವು, ಸಲಿಂಗ ವ್ಯಕ್ತಿಯಲ್ಲಿ (ತಂದೆಯಲ್ಲಿ, ತನಗೆ ಪ್ರತಿಸ್ಪರ್ಧಿಯೆಂಬ ಭಾವನೆಯಿಂದ) ದ್ವೇಷವೂ ಹುಟ್ಟುವಂತೆ ಮಾಡುವ ಮನಃಪ್ರವೃತ್ತಿ.
  • 3 ರಿಂದ 6 ವರ್ಷ ವಯಸ್ಸಿನ ಅವಧಿಯಲ್ಲಿ ಒಂದು ಮಗುವಿನ ಮನಸ್ಸಿನಲ್ಲಿ ತನ್ನ ಮಾತಾಪಿತೃಗಳ ಪೈಕಿ ಸಲಿಂಗದ ವ್ಯಕ್ತಿಯಲ್ಲಿ (ತನಗೆ ಪ್ರತಿಸ್ಪರ್ಧಿಯೆಂಬ ಭಾವನೆಯಿಂದ) ಹುಟ್ಟಿದ ದ್ವೇಷವನ್ನು ಶಿಕ್ಷೆಯ ಭಯದಿಂದ ಅದುಮಿ ಇಟ್ಟುಕೊಂಡಿದ್ದರಿಂದ ವಯಸ್ಕ ಸ್ಥಿತಿ ಬಂದ ಮೇಲೂ ಒಳಗೆ ಉಳಿದುಕೊಂಡಿರುವ ಮಾನಸಿಕ ರೋಗ.

  • oeillade
    ನಾಮವಾಚಕ
    (ಮುಖ್ಯವಾಗಿ ಪ್ರೇಮದ) ಕಟಾಕ್ಷ; ಕುಡಿನೋಟ; ಕಡೆಗಣ್ಣಿನ ನೋಟ.

    oenological
    ಗುಣವಾಚಕ
    ವೈನ್‍ ಯಾ ಮದ್ಯ ಶಾಸ್ತ್ರದ ಯಾ ಅದಕ್ಕೆ ಸಂಬಂಧಿಸಿದ; ವೈನ್‍ ಶಾಸ್ತ್ರದ ಯಾ ಅದಕ್ಕೆ ಸಂಬಂಧಿಸಿದ.

    oenologist
    ನಾಮವಾಚಕ
    ಮದ್ಯಶಾಸ್ತ್ರಜ್ಞ; ವೈನುಗಳ ಅಧ್ಯಯನ ಮಾಡಿದವ.

    oenology
    ನಾಮವಾಚಕ
    ಮದ್ಯಶಾಸ್ತ್ರ; ವೈನ್‍ಗಳ ಅಧ್ಯಯನ ಯಾ ಜ್ಞಾನ.


    logo