logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

maliciously
ಕ್ರಿಯಾವಿಶೇಷಣ
  • ಕೇಡಿಗ ಬುದ್ಧಿಯಿಂದ; ಹಗೆತನದಿಂದ; ದ್ವೇಷ ಬುದ್ಧಿಯಿಂದ; ಮತ್ಸರದಿಂದ.
  • ಪೀಡಿಸುವ, ಕಾಡುವ ಇಚ್ಛೆಯಿಂದ.
  • (ತಕ್ಸೀರುಗಳ ವಿಷಯದಲ್ಲಿ) ಬುದ್ಧಿಪೂರ್ವಕವಾಗಿ; ದುರುದ್ದೇಶದಿಂದ ಕೂಡಿ.

  • maliciousness
    ನಾಮವಾಚಕ
  • ಕೇಡಿಗ ಬುದ್ಧಿ.
  • ಪೀಡಿಸುವ, ಕಾಡುವ – ಇಚ್ಛೆ(ಯಿರುವಿಕೆ).
  • (ತಕ್ಸೀರುಗಳ ವಿಷಯದಲ್ಲಿ) ಬುದ್ಧಿಪೂರ್ವಕವಾಗಿರುವಿಕೆ; ದುರುದ್ದೇಶ.

  • malign
    ಗುಣವಾಚಕ
  • (ವಸ್ತುಗಳ ವಿಷಯದಲ್ಲಿ) ಕೇಡು ತರುವ; ಕೇಡುಂಟುಮಾಡುವ; ಹಾನಿಕರ.
  • (ರೋಗಿಗಳ ವಿಷಯದಲ್ಲಿ) = 1malignant.
  • = malevolent.

  • malign
    ಸಕರ್ಮಕ ಕ್ರಿಯಾಪದ
    (ಒಬ್ಬನ ವಿಷಯದಲ್ಲಿ) ಕೆಟ್ಟದ್ದನ್ನು ಆಡು, ಹೇಳು; ದೂಷಿಸು; ಅಪವಾದ ಹೊರಿಸು; ಹೆಸರು ಕೆಡಿಸು; ಅಪಪ್ರಚಾರ ಮಾಡು.

    malignancy
    ನಾಮವಾಚಕ
  • (ರೋಗದ ವಿಷಯದಲ್ಲಿ)
    1. ಉಗ್ರತೆ; ತೀವ್ರತೆ; ವಿಷಮತೆ.
    2. ಮಾರಕತೆ.
  • ಕೇಡಿಗತನ; ಹಾನಿಕರ – ಸ್ವಭಾವ, ಪ್ರವೃತ್ತಿ, ವರ್ತನೆ.
  • ಕಡು ಹಗೆತನ; ಬದ್ಧ ವೈರ; ಬದ್ಧ ದ್ವೇಷ.

  • malignant
    ಗುಣವಾಚಕ
  • (ರೋಗದ ವಿಷಯದಲ್ಲಿ)
    1. ಅತ್ಯುಗ್ರ; ಬಹಳ ತೀವ್ರವಾದ; ಕಡು ಸೋಂಕಿನ; ಅತಿ ಸಾಂಕ್ರಾಮಿಕ (ಈಗ ಸಾಮಾನ್ಯವಾಗಿ ಒಂದು ನಿರ್ದಿಷ್ಟ ರೋಗದ ವಿಷಯದಲ್ಲಿ): malignant cholera ಅತ್ಯುಗ್ರ ಕಾಲರಾ; ಮೃತ್ಯುಕಾರಕ ಯಾ ಮಾರಕ ಕಾಲರಾ; ಕಾಲರಾ ಮಾರಿ.
    2. ಮಾರಕ; ಪ್ರಾಣಾಪಾಯದ; ಕೊಲ್ಲುವ; ಸಾಯಿಸುವ; ಪ್ರಾಣಾಂತಕ; ಜೀವಾಂತಕ; ಮರಣಾಂತಿಕ.
  • (ದೇಹದಲ್ಲಿನ ಗೆಡ್ಡೆಯ ವಿಷಯದಲ್ಲಿ) ಕ್ಯಾನ್ಸರಿನ; ಕ್ಯಾನ್ಸರಿನಂಥ; ಅರ್ಬುದದಂಥ; ಆರೋಗ್ಯವಾಗಿರುವ ಅಂಗಾಂಶಗಳಿಗೆ ಹರಡುವ ಮತ್ತು ತೆಗೆದು ಹಾಕಿದರೆ ಮತ್ತೆ ಬೆಳೆಯುವ.
  • ಹಾನಿಕರ; ಕೇಡುಂಟು ಮಾಡುವ.
  • ಕಡುಹಗೆಯ; ಬದ್ಧ ದ್ವೇಷದ; ಬದ್ಧ ವೈರದ; ಕಡು ಹಗೆಯ ಭಾವನೆಯಿಂದ ಕೂಡಿದ ಯಾ ಕಡು ಹಗೆತನ ತೋರಿಸುವ ರೀತಿಯ; ಬದ್ಧ ವೈರ ಭಾವನೆಯಿಂದ ಕೂಡಿದ ಯಾ ಬದ್ಧ ವೈರ ತೋರಿಸುವ.

  • malignant
    ನಾಮವಾಚಕ
    (ಚರಿತ್ರೆ) ಪ್ರಜಾದ್ರೋಹಿ; ಪಾರ್ಲಿಮೆಂಟಿನ ವಿರುದ್ಧ (ಇಂಗ್ಲೆಂಡಿನ) ಒಂದನೆಯ ಚಾರ್ಲ್ಸ್‍ ದೊರೆಯ ಬೆಂಬಲಿಗ.

    malignant
    ಗುಣವಾಚಕ
    (ಚರಿತ್ರೆ) ಪಾರ್ಲಿಮೆಂಟಿನ ವಿರುದ್ಧವಾಗಿ (ಇಂಗ್ಲೆಂಡಿನ) ಒಂದನೆಯ ಚಾರ್ಲ್ಸ್‍ ದೊರೆಯನ್ನು ಬೆಂಬಲಿಸುವ.

    malignant pustule
    ನಾಮವಾಚಕ
    ಹಾನಿಕರ ಕುರು; ಮಾರಕ ಕುರು.

    malignantly
    ಕ್ರಿಯಾವಿಶೇಷಣ
  • (ರೋಗದ ವಿಷಯದಲ್ಲಿ)
    1. ಉಗ್ರವಾಗಿ; ವಿಷಮವಾಗಿ.
    2. ಮಾರಕವಾಗಿ; ಪ್ರಾಣಾಂತಕವಾಗಿ.
  • (ದೇಹದಲ್ಲಿನ ರೋಗದ ಗೆಡ್ಡೆಯ ವಿಷಯದಲ್ಲಿ) ಕ್ಯಾನ್ಸರಿನಂತೆ; ಅರ್ಬುದದಂತೆ.
  • ಕೇಡಿಗತನದಿಂದ; ಹಾನಿಕರ – ಸ್ವಭಾವದಿಂದ, ಪ್ರವೃತ್ತಿಯಿಂದ, ವರ್ತನೆಯಿಂದ.
  • ಕಡು ಹಗೆತನದಿಂದ; ಬದ್ಧ ದ್ವೇಷದಿಂದ.


  • logo