ಭೂದೃಶ್ಯ; ಯಾವುದೇ ನೈಸರ್ಗಿಕ ಯಾ ಕಾಲ್ಪನಿಕ ಭೂಪ್ರದೇಶವೊಂದರ ಹೊರಮೈಯ ದೃಶ್ಯ.
ಭೂದೃಶ್ಯ ಚಿತ್ರ; ಯಾವುದೇ ಪ್ರದೇಶದ ಭೂದೃಶ್ಯದ ಚಿತ್ರ.
ಭೂದೃಶ್ಯ ಚಿತ್ರಣ (ಕಲೆ); ಯಾವುದೇ ಪ್ರದೇಶದ ಭೂದೃಶ್ಯವನ್ನು ಚಿತ್ರಿಸುವ ಕಲೆ ಯಾ ಕಲಾವಿಧಾನ.
(ನಕ್ಷಾ ನಮೂನೆ, ಚಿತ್ರಕಲೆ, ಮೊದಲಾದವಲ್ಲಿ) ಚಿತ್ರ ಮೊದಲಾದವುಗಳ ಅಗಲ ಎತ್ತರಕ್ಕಿಂತ ಹೆಚ್ಚಾಗಿರುವುದು.
landscape
ಸಕರ್ಮಕ ಕ್ರಿಯಾಪದ
( ಅಕರ್ಮಕ ಕ್ರಿಯಾಪದ ಸಹ)
ಭೂದೃಶ್ಯವಾಗಿಸು; ಭೂದೃಶ್ಯ ವಿನ್ಯಾಸಮಾಡು; ಮುಖ್ಯವಾಗಿ ವಿಶಾಲವಾದ ಭೂಪ್ರದೇಶವನ್ನು, ನೈಸರ್ಗಿಕ ದೃಶ್ಯವನ್ನು ಹೋಲುವಂತೆ ಮಾಡು; ಭೂದೃಶ್ಯ ಶಿಲ್ಪದ ಯಾ ತೋಟಗಾರಿಕೆಯ ಮೂಲಕ ಪ್ರದೇಶವೊಂದನ್ನು ಸುಂದರಗೊಳಿಸು.
ಭೂದೃಶ್ಯ ವಿನ್ಯಾಸ ಯಾ ಭೂದೃಶ್ಯ ತೋಟಗಾರಿಕೆ ಮಾಡು; ಆ ವೃತ್ತಿಗಳಲ್ಲಿ ತೊಡಗು.
landscape architect
ನಾಮವಾಚಕ
ಭೂದೃಶ್ಯಶಿಲ್ಪಿ; ಭೂದೃಶ್ಯ – ವಿನ್ಯಾಸಿ, ವಿನ್ಯಾಸಕಾರ; ಮುಖ್ಯವಾಗಿ ವಿಶಾಲವಾದ ಭೂಪ್ರದೇಶ, ನಗರಪ್ರದೇಶ, ಮೊದಲಾದವನ್ನು ನೈಸರ್ಗಿಕ ದೃಶ್ಯವಾಗಿ ಕಾಣುವಂತೆ ವಿನ್ಯಾಸ ಗೊಳಿಸುವವನು.
landscape architecture
ನಾಮವಾಚಕ
ಭೂದೃಶ್ಯಶಿಲ್ಪ; ವಿಶಾಲವಾದ ಭೂಪ್ರದೇಶ, ನಗರಪ್ರದೇಶ, ಮೊದಲಾದವನ್ನು, ನೈಸರ್ಗಿಕ ದೃಶ್ಯವನ್ನು ಹೋಲುವಂತೆ ವಿನ್ಯಾಸಗೊಳಿಸುವ ಕಲೆ, ವಾಸ್ತುಶಿಲ್ಪ ವಿಧಾನ.
landscape gardener
ನಾಮವಾಚಕ
ಭೂದೃಶ್ಯಮಾಲಿ; ನೈಸರ್ಗಿಕ ದೃಶ್ಯವನ್ನು ಹೋಲುವಂತೆ ವಿಶಾಲ ಪ್ರದೇಶ, ತೋಟ, ಜಮೀನು, ಮೊದಲಾದವನ್ನು ವಿನ್ಯಾಸಗೊಳಿಸುವವನು.
landscape gardening
ನಾಮವಾಚಕ
ಭೂದೃಶ್ಯ ತೋಟಗಾರಿಕೆ; ಪ್ರಕೃತಿದೃಶ್ಯಗಳನ್ನನುಕರಿಸಿ ಮಾಡಿದ ಉದ್ಯಾನರಚನೆ ಯಾ ಆ ಕಲೆ ಯಾ ಆ ವೃತ್ತಿ.
landscape-marble
ನಾಮವಾಚಕ
ಮರದಲ್ಲಿರುವಂತೆ ರೇಖಾವಿನ್ಯಾಸಗಳಿರುವ ಯಾ ಗೆರೆಗಳುಳ್ಳ ಒಂದು ಬಗೆಯ ಅಮೃತಶಿಲೆ; ವೃಕ್ಷಾಂಕಿತ ಅಮೃತಶಿಲೆ; ಮರದ ಗುರುತುಳ್ಳ ಹಾಲುಗಲ್ಲು.