logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

immigration
ನಾಮವಾಚಕ
ಗುಳೆ; ವಲಸೆ; ವಲಸೆಗಾರಿಕೆ; ವಲಸೆ ಬರುವಿಕೆ.

immigratory
ಗುಣವಾಚಕ
ಗುಳೆಯ; ವಲಸೆಯ ಯಾ ವಲಸೆಗೆ ಸಂಬಂಧಿಸಿದ.

imminence
ನಾಮವಾಚಕ
  • ಸನ್ನಿಹಿತತೆ; ಆಸನ್ನತೆ; ಸದ್ಯದಲ್ಲೇ – ಆಗಲಿರುವಿಕೆ, ಸಂಭವಿಸಲಿರುವಿಕೆ: imminence of war ಸದ್ಯದಲ್ಲೇ ಯುದ್ಧದ ಸಂಭವ.
  • (ಪ್ರಾಚೀನ ಪ್ರಯೋಗ) ಮುಂಚಾಚು; ಮುಂಚಾಚಿರುವಿಕೆ.

  • imminent
    ಗುಣವಾಚಕ
  • (ಘಟನೆಗಳ, ಮುಖ್ಯವಾಗಿ ಅಪಾಯಗಳ ವಿಷಯದಲ್ಲಿ) ಸನ್ನಿಹಿತ; ಆಸನ್ನ; ಸಈಪಿಸಿರುವ; ಹತ್ತಿರಕ್ಕೆ ಬಂದ; ಇನ್ನೇನು – ಆಗುವ, ಆಗಲಿರುವ; ಸದ್ಯದಲ್ಲೇ ಸಂಭವಿಸುವಂತಿರುವ: imminent death ಸನ್ನಿಹಿತ ಮರಣ; ಆಸನ್ನ ಮೃತ್ಯು.
  • (ಪ್ರಾಚೀನ ಪ್ರಯೋಗ) ಮುಂಚಾಚಿರುವ; ಮೇಲೆ ಚಾಚಿರುವ; ತಲೆಯ ಮೇಲೆ ತೂಗಿರುವ.

  • imminently
    ಕ್ರಿಯಾವಿಶೇಷಣ
  • ಸನ್ನಿಹಿತವಾಗಿ; ಆಸನ್ನವಾಗಿ; ಸಈಪವಾಗಿ; ಇನ್ನೇನು ಆಗುವಂತೆ, ಆಗಲಿರುವಂತೆ; ಸದ್ಯದಲ್ಲೇ ಸಂಭವಿಸಲಿರುವಂತೆ.
  • (ಪ್ರಾಚೀನ ಪ್ರಯೋಗ) ತಲೆಯ ಮೇಲೆ ತೂಗಿರುವಂತೆ.

  • immiscibility
    ನಾಮವಾಚಕ
    ಅಸಂಕರತೆ; ಅಸಾಂಕರ್ಯ; ಅಮಿಶ್ರಣೀಯತೆ; ಬೆರಸಲಾಗದಿರುವಿಕೆ; ಬೆರಕೆಯಾಗದಿರುವಿಕೆ.

    immiscible
    ಗುಣವಾಚಕ
    ಬೆರಸಲಾಗದ; ಸಂಕರ ಮಾಡಲಾಗದ; ಬೆರಕೆಯಾಗದ; ಮಿಶ್ರಣ ಮಾಡಲಾಗದ; ಅಮಿಶ್ರಣೀಯ.

    immiscibly
    ಕ್ರಿಯಾವಿಶೇಷಣ
    ಬೆರಸಲಾಗದಂತೆ; ಬೆರಕೆಯಾಗದಂತೆ; ಅಮಿಶ್ರಣೀಯವಾಗಿ.

    immitigable
    ಗುಣವಾಚಕ
    ತಗ್ಗಿಸಲಾಗದ; ಅನುಪಶಾಮ್ಯ; ಅಪ್ರಶಾಮ್ಯ; ಸೌಮ್ಯ ಮಾಡಲಾಗದ; ಶಮನಮಾಡಲಾಗದ; ಕಡಿಮೆ ಮಾಡಲಾಗದ; ತೀವ್ರತೆ ಇಳಿಸಲಾರದ: the pain was immitigable ನೋವು ಕಡಿಮೆ ಮಾಡಲಾಗದ್ದಾಗಿತ್ತು.

    immitigably
    ಕ್ರಿಯಾವಿಶೇಷಣ
    ತಗ್ಗಿಸಲಾರದಷ್ಟು; ಅಪ್ರಶಾಮ್ಯವಾಗಿ; ಕಡಿಮೆ ಮಾಡಲಾರದಷ್ಟು; ಶಮನಮಾಡಲಾಗದ – ರೀತಿಯಲ್ಲಿ, ಪ್ರಮಾಣದಲ್ಲಿ.


    logo