(ಜ್ಞೇಯ ವಿಷಯವಲ್ಲದ) ಜ್ಞಾತೃ; ವಿಷಯಿ; ಅಹಂ; (ಯಾವುದನ್ನು ಕುರಿತು ಚಿಂತಿಸುತ್ತೇವೋ ಅದರಿಂದ ಭಿನ್ನವಾದ, ಯಾವುದು ಅದನ್ನು ಕುರಿತು ಚಿಂತಿಸುತ್ತದೆಯೋ ಆ) ನಾನು.
(ಮನಶ್ಶಾಸ್ತ್ರ) ಅಹಂ; ಅಹಂತೆ; ವ್ಯವಸ್ಥಿತವಾಗಿದ್ದು, ತನ್ನ ವ್ಯಕ್ತಿತ್ವದ ಅರಿವನ್ನು ಪಡೆದಿರುವ, ಮನಸ್ಸಿನ ಭಾಗ, ಸ್ತರ; ‘ಇಡ್’ ಯಾ ಮನುಷ್ಯನ ಮೂಲಭೂತ ಸಹಜ ಪ್ರತ್ತಿಗಳಿಂದ ಭಿನ್ನವಾದುದು.
(ಲಘುವಾಗಿ) ಅಹಂಕಾರ; ಗರ್ವ; ಜಂಬ; ಪ್ರತಿಷ್ಠೆ: her ego becomes unbearable each day ದಿನದಿನಕ್ಕೂ ಅವಳ ಅಹಂಕಾರ ಅಸಹನೀಯವಾಗುತ್ತಿದೆ.
(ಲಘುವಾಗಿ) ಸ್ವಾಭಿಮಾನ; ಆತ್ಮಗೌರವ: your criticism injured her ego ನಿನ್ನ ಟೀಕೆ ಅವಳ ಸ್ವಾಭಿಮಾನವನ್ನು ಚುಚ್ಚಿತು.
ego-ideal
ನಾಮವಾಚಕ
(ಮನಶ್ಶಾಸ್ತ್ರ) ವೈಯಕ್ತಿಕಾದರ್ಶ; ಸ್ವಂತ ಆದರ್ಶ; ಸಮಾಜದ ಮಾನ್ಯತೆ ಪಡೆದ ಮೌಲ್ಯಗಳ ಆಧಾರದ ಮೇಲೆ ವ್ಯಕ್ತಿಯು ಬಯಸುವ ಆದರ್ಶ ವ್ಯಕ್ತಿತ್ವ.
ಸ್ವಯಮಾದರ್ಶ; ತನ್ನನ್ನು ತಾನೇ ಆದರ್ಶೀಕರಿಸುವುದು.
ego-trip
ನಾಮವಾಚಕ
(ಆಡುಮಾತು) ಸ್ವಕೇಂದ್ರಿತ ಕ್ರಿಯೆ; ಸ್ವಾರ್ಥಸಾಧನೆ; ತನ್ನ ಆಸಕ್ತಿ ಯಾ ಭಾವನೆಗಳಿಗೇ ಸಂಪೂರ್ಣವಾಗಿ ಮೀಸಲಾಗಿಟ್ಟಿರುವ ಚಟುವಟಿಕೆ, ಕೆಲಸ, ಮೊದಲಾದವು.
egocentric
ಗುಣವಾಚಕ
ವ್ಯಕ್ತಿಕೇಂದ್ರಿತ; ವ್ಯಕ್ತಿಬದ್ಧ; ವ್ಯಕ್ತಿನಿಷ್ಠ; ಸಮಾಜಕ್ಕಿಂತ ಹೆಚ್ಚಾಗಿ ವ್ಯಕ್ತಿಗೆ ಸಂಬಂಧಿಸಿದ.
(ತತ್ತ್ವಶಾಸ್ತ್ರ) ಸ್ವಾತ್ಮಕೇಂದ್ರಿತ; ಸ್ವಕೇಂದ್ರಿತ; ಜ್ಞಾತವಾದ ಜಗತ್ತಿಗೆಲ್ಲ ತಾನೇ ಕೇಂದ್ರವೆಂದು ಭಾವಿಸುವ.