(ರೋಗಶಾಸ್ತ್ರ) (ನರದ) ನುಲಿಸೆಳೆಬೇನೆ; ಅದಿರುವಾಯು; ಅಂಗಗಳು ಯದ್ವಾತದ್ವಾ ಒದರಾಡುವ ಒಂದು ಬಗೆಯ ನರವ್ಯಾಧಿ.
ballismus
ನಾಮವಾಚಕ
= ballism.
ballista
ನಾಮವಾಚಕ
ದುಂಡು, ಬಂಡೆ – ಕವಣೆ; ಕಲ್‍ಸಿಡಿಬಿಲ್ಲು; ದೊಡ್ಡ ದೊಡ್ಡ ಬಂಡೆ ಮೊದಲಾದವುಗಳನ್ನು ಎಸೆಯಲು ಯುದ್ಧಕಾಲದಲ್ಲಿ ಉಪಯೋಗಿಸುತ್ತಿದ್ದ, ಬಿಲ್ಲಿನ ಆಕಾರದ ಸಮರಯಂತ್ರ.
ballistic
ಗುಣವಾಚಕ
ಬೀರುಗುಂಡಿನ; ಕ್ಷಿಪಣಿಗೆ ಸಂಬಂಧಿಸಿದ.
ಪ್ರಕ್ಷೇಪಕ; ಪ್ರಕ್ಷೇಪಣ – ಶಕ್ತಿಯ, ಶಕ್ತಿಯುಳ್ಳ.
ಗುರುತ್ವಾಕರ್ಷಣ ಬಲವೊಂದರಿಂದಲೇ ಚಲಿಸುತ್ತಿರುವ.
ballistic missile
ನಾಮವಾಚಕ
(ರಾಕೆಟ್ ವಿಜ್ಞಾನ) ಎಸೆಗವಣಿ; ಕ್ಷಿಪ್ತಕ್ಷಿಪಣಿ; ಪ್ರಾರಂಭದಲ್ಲಿ ಇಂಧನ ತುಂಬಿ ಮತ್ತು ಮಾರ್ಗದರ್ಶನ ಮಾಡಿ ಹಾರಿಸಿದ, ನಂತರ ಗುರುತ್ವಾಕರ್ಷಣ ಬಲದಿಂದಲೇ ಚಲಿಸುವ ಕ್ಷಿಪಣಿ.
ballistic pendulum
ನಾಮವಾಚಕ
(ಭೌತವಿಜ್ಞಾನ) ಪ್ರಕ್ಷೇಪ ಲೋಲಕ; ಉತ್‍ಕ್ಷೇಪಲೋಲಕ; ವೇಗವಾಗಿ ಹಾರಿಬಂದ ಕಾಯದ ಬಡಿತದಿಂದ ಭಾರವಾದ ಲೋಲಕದ ಗುಂಡು ದೂಡಲ್ಪಟ್ಟ ದೂರವನ್ನು ಅಳೆದು, ಹಾರಿಬಂದ ಕಾಯದ ವೇಗವನ್ನು ನಿರ್ಧರಿಸಬಹುದಾದ ಸಾಧನ.
ballistics
ನಾಮವಾಚಕ
ಕ್ಷಿಪಣಿಶಾಸ್ತ್ರ; ಕ್ಷಿಪಣಿ ವಿಜ್ಞಾನ:
ಮುಖ್ಯವಾಗಿ ಫಿರಂಗಿ, ಬಂದೂಕು ಮೊದಲಾದ ಅಗ್ನಿಶಸ್ತ್ರಗಳಿಂದ ಹಾರಿಸಿದ ಕ್ಷಿಪಣಿಗಳ ಗತಿ, ಪಥ, ಪರಿಣಾಮ, ಮೊದಲಾದವುಗಳ ಅಧ್ಯಯನ.
ಹೆಚ್ಚು ಪರಿಣಾಮಕಾರಿಯಾದ ಕ್ಷಿಪಣಿಗಳ ರೂಪಣದ ಕಲೆ, ವಿಜ್ಞಾನ.