logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

accessory
ನಾಮವಾಚಕ ಪದಗುಚ್ಛ
  • ಪರಿಕರಗಳು; ಉಪಸಾಮಗ್ರಿ; ಗೌಣ ಸಾಮಗ್ರಿ; ಸಹಕಾರಿಗಳು: accessories of a bicycle ಸೈಕಲ್ಲಿನ ಪರಿಕರಗಳು, ಉದಾಹರಣೆಗೆ ಪಂಪು, ದೀಪ, ಮೊದಲಾದವು.
  • ಅನುಬಂಧ; ಸಣ್ಣಪುಟ್ಟ ಜೋಡಣೆಗಳು: the accessories of a house ಮನೆಯ ಸಣ್ಣಪುಟ್ಟ ಜೋಡಣೆಗಳು (ಉದಾಹರಣೆಗೆ ರೇಡಿಯೊ, ಹ್ಯಾನು, ಮೊದಲಾದವು)
  • (ಮುಖ್ಯವಾಗಿ ಹೆಂಗಸಿನ) ಉಡುಗೆಯ ಪರಿಕರಗಳು (ಕೈಚೀಲ, ಕರವಸ್ತ್ರ, ಮೊದಲಾದವು)
  • = 1accessary.

  • acciaccatura
    ನಾಮವಾಚಕ
    (ಸಂಗೀತ) (ಎತ್ತುಗಡೆಯ) ಹುಸಿ ಸ್ವರ; ಗೀತದ ಎತ್ತುಗಡೆಗಿಂತ ಮುಂಚೆ ಹಾಡುವ ಯಾ ನುಡಿಸುವ, ತಾಳದ ಲೆಕ್ಕಕ್ಕೆ ಸೇರಿಸದ ಸ್ವರ.

    accidence
    ನಾಮವಾಚಕ
  • ವಿಭಕ್ತಿ ಪ್ರಕರಣ; ವಿಭಕ್ತಿ ಪ್ರತ್ಯಯಗಳನ್ನೂ ಆಖ್ಯಾತ ಪ್ರತ್ಯಯಗಳನ್ನೂ ವಿವರಿಸುವ ವ್ಯಾಕರಣ ಭಾಗ.
  • (ಯಾವುದೇ ವಿಷಯದ) ಮೂಲಾಂಶಗಳು; ಮೂಲಸೂತ್ರಗಳು.

  • accident
    ನಾಮವಾಚಕ ಪದಗುಚ್ಛ
  • ಆಕಸ್ಮಿಕ; ಅನಿರೀಕ್ಷಿತ ಘಟನೆ; ಯಾದೃಚ್ಛಿಕ ಘಟನೆ.
  • ಅಪಘಾತ; ವಿಪತ್ತು; ಪ್ರಮಾದ.
  • ಅದೃಷ್ಟ; ದೈವಯೋಗ.
  • (ಭೂದೃಶ್ಯ ಮೊದಲಾದವುಗಳ ಮೇಲ್ಮೈ ವಿಷಯದಲ್ಲಿ) ಕ್ರಮರಹಿತ–ವಿನ್ಯಾಸ, ರಚನೆ; ಉಬ್ಬು ತಗ್ಗು: accidents of the moon ಚಂದ್ರನ ಮೇಲ್ಮೈಯ ಉಬ್ಬು ತಗ್ಗು.
  • ಆಗಂತುಕ ಲಕ್ಷಣ; ಪದಾರ್ಥವೊಂದರ ಸ್ವರೂಪದ ಭಾಗವಲ್ಲವೆಂದು ಭಾವಿತವಾಗಿರುವ ಅಂಶ ಯಾ ಗುಣ, ಉದಾಹರಣೆಗೆ ಪ್ರಭುಭೋಜನ ಕೂಟದಲ್ಲಿ ಪ್ರಸಾದವಾಗಿ ನೀಡುವ ಬ್ರೆಡ್ಡು ಮತ್ತು ಮದ್ಯ ಏಸುಕ್ರಿಸ್ತನ ದೇಹ ಮತ್ತು ರಕ್ತವಾಗಿ ರೂಪಾಂತರಗೊಂಡಾಗ ಅವುಗಳಲ್ಲಿ ಉಳಿದುಕೊಂಡಿರುವ ಭೌತಿಕದ್ರವ್ಯದ ಅಂಶಗಳು ಯಾ ಲಕ್ಷಣಗಳು.
  • ಗೌಣಾಂಶ; ಅಮುಖ್ಯಾಂಶ; ಅಪ್ರಧಾನಾಂಶ.
  • ದುರದೃಷ್ಟಕರ ಘಟನೆ; ದುರ್ಘಟನೆ; ಮುಖ್ಯವಾಗಿ ಹಾನಿಯನ್ನು ಯಾ ನಷ್ಟವನ್ನು ಉಂಟುಮಾಡುವ ಘಟನೆ.

  • accident-prone
    ಗುಣವಾಚಕ
    ಅಪಘಾತ ಪ್ರವೃತ್ತಿಯ; ಸಮಾನವಾದ ಪರಿಸ್ಥಿತಿಗಳಲ್ಲಿ, ಸಾಧಾರಣ ವ್ಯಕ್ತಿಯು ಮಾಡುವುದಕ್ಕಿಂತ ಹೆಚ್ಚು ಅಪಘಾತ ಯಾ ಆಕಸ್ಮಿಕಗಳನ್ನು ಮಾಡುವ ಯಾ ಮಾಡುವ ಪ್ರವೃತ್ತಿಯಿರುವ.

    accidental
    ಗುಣವಾಚಕ
  • ಅಕಸ್ಮಾತ್ತಾದ; ಆಕಸ್ಮಿಕ(ವಾದ); ಅನಿರೀಕ್ಷಿತವಾದ.
  • ಪ್ರಾಸಂಗಿಕ; ಆನುಷಂಗಿಕ; ಸಾಂದರ್ಭಿಕ: accidental benefits ಆನುಷಂಗಿಕ–ಪ್ರಯೋಜನಗಳು, ಫಲಗಳು.
  • (ವಸ್ತುವಿನ ವಿಷಯದಲ್ಲಿ) ಅಮುಖ್ಯ; ಗೌಣ; ಆಗಂತುಕ; ಆನುಷಂಗಿಕ.
  • (ಸಂಗೀತ) ಸ್ವರ ನಕ್ಷೆಯಲ್ಲಿ ಮಂದ್ರ, ಮಧ್ಯಮ, ತಾರಸ್ಥಾಯಿಗಳ ಭೇದವನ್ನು ಸೂಚಿಸುವ ಯಾ ಸೂಚಿಸಲು ಹಾಕುವ ಚಿಹ್ನೆಯ: accidental sharp ತಾರಚಿಹ್ನೆ. accidental flat ಮಂದ್ರಚಿಹ್ನೆ. accidental natural ಮಧ್ಯಮ ಚಿಹ್ನೆ.

  • accidental
    ನಾಮವಾಚಕ
  • (ತರ್ಕಶಾಸ್ತ್ರ) ಗೌಣವಾದುದು; ಆಗಂತುಕ ಅಂಶ; ಆನುಷಂಗಿಕ ಗುಣ.
  • (ಸಂಗೀತ) ತಾರ, ಮಧ್ಯಮ, ಮಂದ್ರ ಸ್ಥಾಯಿಗಳ ಭೇದವನ್ನು ಸೂಚಿಸಲು ಒಂದು ಸ್ವರದ ಹಿಂದೆ ಸ್ವರನಕ್ಷೆಯಲ್ಲಿ ರೇಖಿಸುವ ಒಂದು ಬಗೆಯ ಚಿಹ್ನೆ.
  • (ಬಹುವಚನದಲ್ಲಿ) ಸೂರ್ಯನ ಬೆಳಕಲ್ಲದೆ ಬೇರೆ ಬಗೆಯ (ಉದಾಹರಣೆಗೆ ದೀಪ, ಬೆಂಕಿ ಮೊದಲಾದವುಗಳ) ಬೆಳಕಿನ ಪರಿಣಾಮಗಳನ್ನು ತೋರಿಸುವ ಚಿತ್ರಣ.
  • ಗೌಣವಾದುದು; ಅಮುಖ್ಯವಾದುದು; ಅಪ್ರಧಾನವಾದುದು.

  • accidentally
    ಕ್ರಿಯಾವಿಶೇಷಣ
    ಆಕಸ್ಮಿಕವಾಗಿ; ಅಕಸ್ಮಾತ್‍; ಅನಿರೀಕ್ಷಿತವಾಗಿ.

    accidie
    ನಾಮವಾಚಕ
    ಜಡತ್ವ; ಸೋಮಾರಿತನ; ಆಲಸ್ಯ; ತಂದ್ರತೆ.

    accipeter
    ನಾಮವಾಚಕ
  • ಗಿಡುಗಗಳ ಒಂದು ಕುಲ.
  • (ಶಸ್ತ್ರವೈದ್ಯ) ಗಿಡುಗಕಟ್ಟು; ಗಿಡುಗಪಟ್ಟಿ; ಗಿಡುಗದ ಪಂಜವನ್ನು ಹೋಲುವ ಮೂಗುಪಟ್ಟಿ, ಮೂಗಿಗೆ ಹಾಕುವ ಬ್ಯಾಂಡೇಜು.


  • logo