ಅಸಮರ್ಪಕ – ಕೆಲಸ, ಕಾರ್ಯಚರಣೆ; ಸರಿಯಾಗಿ ಯಾ ತೃಪ್ತಿಕರವಾಗಿ ಕೆಲಸ ಮಾಡದಿರುವುದು.
malfunction
ಅಕರ್ಮಕ ಕ್ರಿಯಾಪದ
ಅಸಮರ್ಪಕವಾಗಿ – ಕೆಲಸಮಾಡು, ಕಾರ್ಯನಡೆಸು; ಸರಿಯಾಗಿ ಯಾ ತೃಪ್ತಿಕರವಾಗಿ ಕೆಲಸ ಮಾಡದಿರು.
mali
ನಾಮವಾಚಕ
(ಭಾರತ) ಮಾಲಿ; ತೋಟಗಾರ; ತೋಟದ ಕೆಲಸ ಮಾಡುವವ.
malic acid
ನಾಮವಾಚಕ
(ರಸಾಯನವಿಜ್ಞಾನ) ಮ್ಯಾಲಿಕ್ ಆಮ್ಲ; ಹುಳಿಸೇಬಿನಲ್ಲಿ ದೊರೆಯುವ, ಒಂದು ಹೈಡ್ರಾಕ್ಸಿಲ್ ಮತ್ತು ಎರಡು ಕಾರ್ಬಾಕ್ಸಿಲ್ ಗುಂಪುಗಳಿರುವ, ಒಂದು ಕಾರ್ಬನಿಕ ಆಮ್ಲ, ${\rm C}_4$ ${\rm H}_6$ ${\rm O}_5$.