logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

landless
ಗುಣವಾಚಕ
ಭೂರಹಿತ; ಭೂಮಿಯಿಲ್ಲದ; ಜಮೀನಿಲ್ಲದ.

landloper
ನಾಮವಾಚಕ
(ಮುಖ್ಯವಾಗಿ ಸ್ಕಾಟ್ಲಂಡ್‍) ಅಲೆಮಾರಿ; ಅಂಡಲೆಯುವವನು; ಕೆಲಸ ಕಾರ್ಯವಿಲ್ಲದೆ ಪೋಲಿ ತಿರುಗುವವ.

landlord
ನಾಮವಾಚಕ
  • ಜಮೀನುದಾರ; ಹಿಡುವಳಿದಾರ; ಭೂಮಾಲೀಕ; ಜಮೀನಿನ ಒಡೆಯ.
  • ಮಾಲೀಕ; ಒಡೆಯ; ಜಮೀನು, ಮನೆ, ಮನೆಯ ಒಂದು ಭಾಗ, ಮೊದಲಾದವನ್ನು ಬಾಡಿಗೆದಾರನಿಗೆ ಬಾಡಿಗೆಯ ಮೇಲೆ ಕೊಡುವವನು.
  • (ಹೋಟೆಲು, ವಸತಿಗೃಹ, ಮೊದಲಾದವುಗಳ) ಒಡೆಯ; ಮಾಲೀಕ.

  • landlordism
    ನಾಮವಾಚಕ
  • ಜಮೀನ್ದಾರಿ ಪದ್ಧತಿ; ಗೇಣಿದಾರರಿಂದ ಗೊತ್ತಾದ ಗುತ್ತಿಗೆ ಪಡೆದು, ಭೂಸ್ವಾಮ್ಯ ಅನುಭವಿಸುವ ವ್ಯವಸ್ಥೆ, ಪದ್ಧತಿ.
  • ಈ ವಾದದ ಪ್ರತಿಪಾದನೆ.

  • landmark
    ನಾಮವಾಚಕ
  • ಹೆಗ್ಗುರುತು; ಒಂದು ಪ್ರಾಂತ ಮೊದಲಾದವುಗಳಲ್ಲಿ ಕಣ್ಣಿಗೆ ಎದ್ದು ಕಾಣುವ ವಸ್ತು.
  • (ಒಂದು ದೇಶ, ಜಮೀನು, ಮೊದಲಾದವುಗಳ ಬಾಂದು ಮೊದಲಾದ) ಎಲ್ಲೆ ಗುರುತು; ಗಡಿಗುರುತು.
  • (ಇತಿಹಾಸದ) ಸ್ಥಿತ್ಯಂತರ ಸೂಚಕ, ಯುಗವರ್ತಕ – ಘಟನೆ ಯಾ ಬದಲಾವಣೆ; ಇತಿಹಾಸದ ಗತಿಯಲ್ಲಿ ಆಗುವ ಸ್ಥಿತ್ಯಂತರಗಳನ್ನು ಸೂಚಿಸುವ ಘಟನೆ.

  • landocracy
    ನಾಮವಾಚಕ
    (ಹಾಸ್ಯ ಪ್ರಯೋಗ) ಭೂಶಾಹಿ; ಜಮೀನುಶಾಹಿ; ಜಮೀನುದಾರರ ವರ್ಗ.

    landocrat
    ನಾಮವಾಚಕ
    ಜಮೀನುದಾರ; ಭೂಸ್ವಾಮಿವರ್ಗದವನು.

    landowner
    ನಾಮವಾಚಕ
    ಭೂಮಾಲೀಕ; ಭೂಸ್ವಾಮಿ; ಜಮೀನ್ದಾರ; ಜಮೀನಿನ ಸ್ವಾಮ್ಯವುಳ್ಳವನು.

    landowning
    ಗುಣವಾಚಕ
    ಜಮೀನಿರುವ; ಜಮೀನು ಹೊಂದಿರುವ.

    landowning
    ನಾಮವಾಚಕ
    ಭೂಮಾಲಿಕತ್ವ; ಜಮೀನುದಾರಿಕೆ; ಜಮೀನು ಹೊಂದಿರುವುದು.


    logo