(ಸಾಲ, ತೊಂದರೆ, ಆಲೋಚನೆ, ಮೊದಲಾದವುಗಳಲ್ಲಿ) ಮುಳುಗಿಸು; ತಲ್ಲೀನವಾಗಿಸು; ಮಗ್ನಗೊಳಿಸು: immerses himself completely in his work ಅವನು ತನ್ನ ಕೆಲಸದಲ್ಲಿ ಪೂರ್ತಿಯಾಗಿ ತಲ್ಲೀನಗೊಳಿಸಿಕೊಳ್ಳುತ್ತಾನೆ.
immersion
ನಾಮವಾಚಕ
(ದ್ರವದಲ್ಲಿ) ನಿಮಜ್ಜನ; ಅದ್ದುವುದು; ಮುಳುಗಿಕೆ ಯಾ ಮುಳುಗಿಸಿಕೆ; ಮುಳುಗುವುದು ಯಾ ಮುಳುಗಿಸುವಿಕೆ.
(ಇಡೀ ವ್ಯಕ್ತಿಯನ್ನು ನೀರಿನಲ್ಲಿ ಮುಳುಗಿಸಿ) ಜ್ಞಾನಸ್ನಾನ ಮಾಡಿಸುವುದು.
ವಲಸಿಗ, ಅಡ್ಡೊಕ್ಕಲು; ವಲಸೆಗಾರ; ವಲಸೆ – ಬಂದವನು, ಬರುವವನು.
immigrate
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ವ್ಯಕ್ತಿಯನ್ನು) ನೆಲಸಲು ಕರೆತರು; ವಲಸೆ ತರು: the expense of immigrating labour ಕೆಲಸಗಾರರನ್ನು ವಲಸೆ ತರುವ ಖರ್ಚು. (ಪರದೇಶಕ್ಕೆ) ನೆಲಸಲು ಬರು; ನೆಲೆನಿಲ್ಲಲು ಬರು; ವಲಸೆ ಬರು; ಗುಳೆ – ತೆಗೆ, ಹೋಗು; ಒಕ್ಕಲು ಬರು.