logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

dead coal
ನಾಮವಾಚಕ
ಇದ್ದಿಲು; ಆರಿದ ಕೆಂಡ.

dead duck
ನಾಮವಾಚಕ
(ಅಶಿಷ್ಟ) ಅಪ್ರಯೋಜಕ; ನಿಷ್ಪ್ರಯೋಜಕ; ನಿರುಪಯುಕ್ತ; ಯಶಸ್ವಿಯಾಗದ, ಕೆಲಸಕ್ಕೆ ಬಾರದ, ಉಪಯೋಗವಿಲ್ಲದ – ವ್ಯಕ್ತಿ ಯಾ ವಸ್ತು.

dead end
ನಾಮವಾಚಕ
  • ಕುರುಡು ತುದಿ; ನಿಲುಕೊನೆ; ರೈಲು ಮಾರ್ಗದ ಕವಲಿನ ಕೊನೆ, ತುದಿ.
  • ಮೊಂಡು ತುದಿ; ಕುರುಡುತುದಿ; ಮುಚ್ಚಿದ ತುದಿ; ಮೂಗೋಣಿ; ಕುರುಡು – ನಾಳ, ರಸ್ತೆ; ಒಂದು ತಿದಿ ಬಂದಾಗಿರುವ ರಸ್ತೆ, ನೀರಿನ ಪೈಪು, ಮೊದಲಾದವು.
  • (ರೂಪಕವಾಗಿ) (ಉದ್ಯೋಗ, ಕಾರ್ಯನೀತಿ, ಮೊದಲಾದವುಗಳ ವಿಷಯದಲ್ಲಿ) ಕುರುಡು ಕೊನೆ; ಕುರುಡು ತುದಿ; ಪ್ರಗತಿ ಅಸಾಧ್ಯವೆಂದು ತೋರುವ, ಮುಂದಿನ ಹೆಜ್ಜೆ ಕಾಣದ ಸ್ಥಿತಿ.

  • dead fence
    ನಾಮವಾಚಕ
    ಒಣ ಬೇಲಿ; ಒಣಗಿದ ಮರ ಮೊದಲಾದವುಗಳಿಂದ ಹಾಕಿದ ಬೇಲಿ.

    dead freight
    ನಾಮವಾಚಕ
    ದಂಡದ ಬಾಡಿಗೆ; ಖಾಲಿ ಬಾಡಿಗೆ; ಹಡಗನ್ನು ಬಾಡಿಗೆಗೆ ತೆಗೆದುಕೊಂಡು, ಗೊತ್ತು ಮಾಡಿದಷ್ಟು ಸಾಮಾನು ತುಂಬಲಾಗದಿದ್ದಾಗ ಹಾಗೆ ಖಾಲಿ ಬಿದ್ದ ಜಾಗಕ್ಕೆ ತೆರಬೇಕಾದ ಬಾಡಿಗೆ.

    dead gold
    ನಾಮವಾಚಕ
    ಪುಟವಿಡದ ಚಿನ್ನ; ಮೆರುಗಿಡದ ಬಂಗಾರ.

    dead ground
    ನಾಮವಾಚಕ
    ಸುರಕ್ಷಿತ ಪ್ರದೇಶ; ಕೋಟೆ ಫಿರಂಗಿ, ಪದಾತಿಯ ಬಂದೂಕು, ಮೊದಲಾದವುಗಳ ಗುಂಡಿನೇಟಿಗೆ ಸಿಕ್ಕದಷ್ಟು ದೂರದ ಪ್ರದೇಶ.

    dead hand
    ನಾಮವಾಚಕ
  • (ಚರ್ಚು ಕೂಟಗಳ ಸ್ವಾಧೀನದಲ್ಲಿರುವ) ಪರಭಾರೆ ಮಾಡಲಾಗದ ಜಈನು.
  • (ರೂಪಕವಾಗಿ) ಕಾಣದ ಕೈ; ಅಗೋಚರ, ಹಸ್ತ; ಬದುಕಿರುವವರ ಮೇಲೆ ಸತ್ತವರ, ಯಾ ಇಂದಿನವರ ಮೇಲೆ ಹಿಂದಿನವರ (ಮುಖ್ಯವಾಗಿ ಹೊರೆಯಾಗಿ ಕಾಣುವ) – ಪ್ರಭಾವ, ನಿಯಂತ್ರಣ.

  • dead heat
    ನಾಮವಾಚಕ
  • (ರೇಸಿನಲ್ಲಿ) ಸರಿಸಮ; ಸರಿ ಸಮವಾಗಿರುವಿಕೆ.
  • ಸರಿಸಮ – ರೇಸು, ಪಂದ್ಯ; ಇಬ್ಬರು, ಮೂವರು ಸ್ಪರ್ಧಿಗಳು ಒಂದೇ ಸಮಯದಲ್ಲಿ ಗುರಿಯನ್ನು ಮುಟ್ಟುವ ಪಂದ್ಯ.

  • dead hours
    ನಾಮವಾಚಕ
    (ರಾತ್ರಿಯ) ನಿಶ್ಯಬ್ದ ಕಾಲ; ಸ್ತಬ್ಧಕಾಲ; ನೀರವ ಸಮಯ.


    logo