logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calyptrate
ಗುಣವಾಚಕ
(ಸಸ್ಯವಿಜ್ಞಾನ) ಗವುಸುಳ್ಳ; ಹೊದಿಕೆಯಿರುವ; ಟೋಪಿಯುಳ್ಳ.

calyptriform
ಗುಣವಾಚಕ
(ಸಸ್ಯವಿಜ್ಞಾನ) ಗವುಸಿನಂಥ; ಟೋಪಿಯಾಕಾರದ.

calyx
ನಾಮವಾಚಕ
  • (ಸಸ್ಯವಿಜ್ಞಾನ) ಹೂಬಟ್ಟಲು; ಪುಷ್ಪಪಾತ್ರ; ಹೂವಿನ ಹೊರಗಡೆ ಇರುವ, ಸಾಮಾನ್ಯವಾಗಿ ಹಸಿರು ಬಣ್ಣದ ದಳಗಳ ಹೊದಿಕೆ. Figure: calyx
  • =calix.

  • cam
    ನಾಮವಾಚಕ
    (ಯಂತ್ರಶಾಸ್ತ್ರ) ಕ್ಯಾಮ್‍; ಯಂತ್ರಗಳಲ್ಲಿ ವೃತ್ತಚಲನೆಯನ್ನು ಅಂಡಾಕಾರದ ಯಾ ಇತರ ವಿಧದ ಚಲನೆಯನ್ನಾಗಿ ಪರಿವರ್ತಿಸುವುದಕ್ಕೆ ತಕ್ಕ ಆಕಾರ ಹೊಂದಿರುವ, ಚಕ್ರ, ಉರುಳೆ ಮೊದಲಾದವುಗಳ ಚಾಚು ಭಾಗ.

    camaraderie
    ನಾಮವಾಚಕ
    ನಿಕಟಸ್ನೇಹ; ನಿಕಟಮೈತ್ರಿ; ಆಪ್ತಗೆಳೆತನ; ಗಾಢಸ್ನೇಹ; ಒಡನಾಡಿಕೆ; ಒಡನಾಡಿತನ; ಜೊತೆಗಾರರಲ್ಲಿ ಪರಸ್ಪರವಾಗಿರುವ ಸಲಿಗೆ, ವಿಶ್ವಾಸ, ನಂಬಿಕೆ, ಮೈತ್ರಿ.

    camarilla
    ನಾಮವಾಚಕ
    (ಸ್ಪೇನ್‍) ಪಿತೂರಿ ಗುಂಪು; ಗುಪ್ತತಂಡ; ಸಂಚುಕೂಟ.

    camaron
    ನಾಮವಾಚಕ
    ಕ್ಯಾಮರೋನು; ಸೀನೀರು ಸೀಗಡಿ; ಸಿಹಿನೀರಿನಲ್ಲಿ ವಾಸಿಸುವ ಒಂದು ತೆರನ ದೊಡ್ಡ ಸೀಗಡಿ.

    Camb.
    ಸಂಕ್ಷಿಪ್ತ
    Cambridge.

    camber
    ನಾಮವಾಚಕ
  • ಕಿರಿಯುಬ್ಬು; ಕಿರಿಬಾಗು; ಕಿರುಕಮಾನು; ರಸ್ತೆ, ಮಾಳಿಗೆ, ತೊಲೆ, ದಕ್ಕೆ, ವಿಮಾನದ ರೆಕ್ಕೆ ಮೊದಲಾದವುಗಳು ಕಮಾನಿನಂತೆ ಸ್ವಲ್ಪ ಉಬ್ಬಿಕೊಂಡಿರುವಿಕೆ.
  • ಚಕ್ರದ ವಾಲಿಕೆ; ಮೋಟಾರು ವಾಹನದ ಚಕ್ರವು ಪಕ್ಕಕ್ಕೆ ವಾಲಿಕೊಂಡಿರುವುದು.

  • camber
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ದೂಲ ಮೊದಲಾದವನ್ನು) ತುಸು ಉಬ್ಬಿಸು; ತುಸು–ಬಾಗಿಸು, ಕಮಾನಾಗಿಸು. (ದೂಲ ಮೊದಲಾದವು) ತುಸು ಉಬ್ಬು; ತುಸು–ಬಾಗು, ಕಮಾನಾಗು, ಕಮಾನಾಗಿರು.


    logo