logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

balladry
ನಾಮವಾಚಕ
  • ಲಾವಣಿ – ರಚನೆ, ಕಲೆ.
  • ಲಾವಣಿಗಳು; ಲಾವಣಿಕಾವ್ಯ.

  • ballast
    ನಾಮವಾಚಕ ಪದಗುಚ್ಛ
    in ballast
  • ವಜ್ಜೆ; ವಜನು; ನಿಲು, ಸ್ಥಿರ – ಭಾರ; ಹಡಗು ಯಾ ಬಲೂನ್‍ – ಕಾರು ಓಲಾಡದಂತೆ ಸ್ಥಿರಗೊಳಿಸಲು ತುಂಬಿಡುವ ತೂಕದ ವಸ್ತು.
  • (ವ್ಯಕ್ತಿತ್ವಕ್ಕೆ) ದೃಢತೆ ಕೊಡುವ ಅನುಭವ, ತತ್ತ್ವ, ಮೊದಲಾದವುಗಳು.
  • (ರೈಲು ದಾರಿಯ ಯಾ ರಸ್ತೆಯ ತಳಭಾಗಕ್ಕೆ ಭದ್ರವಾಗಿರಲು ಹಾಕುವ) ಕಿಟ್ಟ, ಜಲ್ಲಿ, ಮೊದಲಾದವುಗಳು.
  • (ವಿದ್ಯುದ್ವಿಜ್ಞಾನ) ಸ್ಥಿರಕಾರಿ; (ಆರ್ಕ್‍ದೀಪ, ಮರ್ಕ್ಯುರಿ ದೀಪ, ಮೊದಲಾದವುಗಳ ಮಂಡಲದಲ್ಲಿ ವಿದ್ಯುತ್ತು) ಸ್ಥಿರವಾಗಿರುವಂತೆ ಮಾಡಲು ಬಳಸುವ ನಿರೋಧಕ ಯಾ ಸಾಧನ.

  • ballast
    ಸಕರ್ಮಕ ಕ್ರಿಯಾಪದ
  • ನಿಲುಭಾರ ಹಾಕು; ಸ್ಥಿರಭಾರ ತುಂಬು; ವಜನು ಒದಗಿಸು.
  • ಸ್ಥಿರಗೊಳಿಸು; ಓಲಾಡದಂತೆ ಯಾ ತೂಗಾಡದಂತೆ ಮಾಡು.
  • (ರೈಲುಹಾದಿಯ ತಳಭಾಗಕ್ಕೆ) ಜಲ್ಲಿ ಹಾಕು; ಜಲ್ಲಿ, ಮೊದಲಾದವನ್ನು ತುಂಬು.
  • (ರೂಪಕವಾಗಿ) (ಮನಸ್ಸು, ವರ್ತನೆ, ಮೊದಲಾದವನ್ನು) ಸ್ತಿಮಿತಗೊಳಿಸು; ಸ್ಥಿರಗೊಳಿಸು.

  • ballasting
    ನಾಮವಾಚಕ
    ವಜನು; ವಜ್ಜೆ; (ಸ್ಥಿರಗೊಳಿಸಲು ಬಳಸುವ ಕಿಟ್ಟ, ಜಲ್ಲಿ, ಮರಳು, ಮೊದಲಾದವು).

    ballboy
    ನಾಮವಾಚಕ
    ಚೆಂಡುಹುಡುಗ; ಟೆನಿಸ್‍ ಮೊದಲಾದ ಆಟಗಳಲ್ಲಿ ಚೆಂಡನ್ನು ಆಟಗಾರರಿಗೆ ತಂದುಕೊಡುವವನು.

    ballcock
    ನಾಮವಾಚಕ
    ಚೆಂಡು – ಬಿರಡೆ, ಕವಾಟ; ತೊಟ್ಟಿಯಲ್ಲಿ ನೀರು ತುಂಬಿದಾಗ ನೀರಿನ ಜೊತೆಯಲ್ಲಿಯೇ ಮೇಲೇರಿ ಕಂಡಿಯನ್ನು ಮುಚ್ಚುವಂತೆ ಮತ್ತು ನೀರು ಖರ್ಚಾದಾಗ ನೀರಿನ ಜೊತೆಯಲ್ಲೇ ಇಳಿದು ಕಂಡಿಯನ್ನು ತೆರೆಯುವಂತೆ ಕವಾಟದ ಪಟ್ಟಿಗೆ ಟೊಳ್ಳು ಚೆಂಡು ಜೋಡಿಸಿರುವ ವ್ಯವಸ್ಥೆ.

    ballerina
    ನಾಮವಾಚಕ ಪದಗುಚ್ಛ
    (ಮುಖ್ಯವಾಗಿ ಪ್ರಮುಖವಾದ ಐದು ಕ್ಲಾಸಿಕಲ್‍ ಸ್ತ್ರೀ ಪಾತ್ರಗಳಲ್ಲಿ ಒಂದನ್ನು ಅಭಿನಯಿಸುವ) ಬ್ಯಾಲೆ ನರ್ತಕಿ. prima ballerina ಪ್ರಧಾನ ಬ್ಯಾಲೆ ನರ್ತಕಿ.

    ballet
    ನಾಮವಾಚಕ
  • ಬ್ಯಾಲೆ; ಒಂದು ತೆರನ ಮಾರ್ಗ – ನೃತ್ಯ ಯಾ ನರ್ತನ.
  • ನೃತ್ಯ – ರೂಪಕ, ನಾಟಕ.
  • (ಗೀತನಾಟಕದ ನಡುವೆ) ಬಿಡಿಕುಣಿತ; ನರ್ತನ; ನೃತ್ಯ ಪ್ರಸಂಗ.
  • (ನೃತ್ಯರೂಪಕದ) ಸಂಗೀತ (ಭಾಗ)
  • ಬ್ಯಾಲೆ ಕಂಪನಿ; ಬ್ಯಾಲೆ ನೃತ್ಯಸಂಘ.

  • ballet master
    ನಾಮವಾಚಕ
    ಬ್ಯಾಲೆ – ಮಾಸ್ತರು, ನಾಟ್ಯಾಚಾರ್ಯ; ಬ್ಯಾಲೆ (ನರ್ತನ) ಶಿಕ್ಷಕ.

    balletic
    ಗುಣವಾಚಕ
    ಬ್ಯಾಲೆ ನೃತ್ಯದ; ಅದಕ್ಕೆ ಸಂಬಂಧಿಸಿದ ಯಾ ಅದನ್ನು ಹೋಲುವ.


    logo