ಸುಲಭಲಭ್ಯ; ಸುಲಭವಾಗಿ–ಪಡೆಯಬಲ್ಲ, ನೋಡಬಲ್ಲ, ಸಂಧಿಸಬಲ್ಲ, ದೊರೆಯುವ, ಸಿಗುವ: accessible to everyone ಎಲ್ಲರಿಗೂ ಸುಲಭವಾಗಿ ಸಿಗುವ. accessible evidence ಸುಲಭವಾಗಿ ದೊರೆಯುವ ಪುರಾವೆ.
ಸುಲಭವಶ್ಯ; ಪ್ರಭಾವವಶ್ಯ; ಪ್ರಭಾವಕ್ಕೆ–ಒಳಗಾಗುವ, ಮಣಿಯುವ, ಬಗ್ಗುವ: accessible to flattery ಮುಖಸ್ತುತಿಗೆ ವಶವಾಗುವ.
ವಯಸ್ಸಿಗೆ ಬರುವುದು; ಪ್ರಾಪ್ತ ವಯಸ್ಕನಾ(ಳಾ)ಗುವುದು: accession to womanhood ಪ್ರಾಪ್ತವಯಸ್ಕಳಾಗುವುದು. on his accession to the estate ಅವನು ವಯಸ್ಸಿಗೆ ಬರುತ್ತಲೇ.
ಕೂಡಿಕೆ; ಸೇರ್ಪಡೆ; ಸೇರಿಕೆ; ದಾಖಲಾತಿ: accession of native states to the Indian Government ಭಾರತ ಸರ್ಕಾರಕ್ಕೆ ದೇಶೀಯ ಸಂಸ್ಥಾನಗಳ ಸೇರ್ಪಡೆ.
(ಒಪ್ಪಂದ ಮೊದಲಾದವುಗಳಿಗೆ ವಿಧಿವತ್ತಾದ) ಒಪ್ಪಿಗೆ; ಸಮ್ಮತಿ; ಅಂಗೀಕಾರ; ಅನುಮೋದನೆ: accession to a demand ಬೇಡಿಕೆಗೆ ಒಪ್ಪಿಗೆ.
ಸೇರಿಸಿದ್ದು; ದಾಖಲಾದದ್ದು: an accession to the library ಗಂಥಾಲಯಕ್ಕೆ ಸೇರಿಸಿದ್ದು (ಪುಸ್ತಕ).
(ನ್ಯಾಯಶಾಸ್ತ್ರ) ಆಸ್ತಿಯ ವೃದ್ಧಿ ಯಾ ಬೆಳೆವಣಿಗೆ; ಸ್ವತ್ತನ್ನು ರೂಢಿಸಿಕೊಳ್ಳುವುದು ಯಾ ಅದರ ಸ್ವಾಭಾವಿಕ ಅಭಿವೃದ್ಧಿ.
accession
ಸಕರ್ಮಕ ಕ್ರಿಯಾಪದ
(ಗ್ರಂಥಾಲಯಕ್ಕೆ ಹೊಸ ಪುಸ್ತಕಗಳನ್ನು) ಸೇರಿಸು; ದಾಖಲು ಮಾಡು; ಗ್ರಂಥಾಲಯಕ್ಕೆ ಬಂದ ಹೊಸ ಪುಸ್ತಕಗಳನ್ನು ದಾಖಲಾತಿ ಪುಸ್ತಕದಲ್ಲಿ ನಮೂದಿಸು.
accession number
ನಾಮವಾಚಕ
ಸೇರಿಕೆ ಕ್ರಮಾಂಕ; ಪ್ರಾಪ್ತ ಕ್ರಮಾಂಕ; ದಾಖಲೆ ಸಂಖ್ಯೆ; (ಗ್ರಂಥಾಲಯ ಮೊದಲಾದವುಗಳಲ್ಲಿ) ಹೊಸದಾಗಿ ಸೇರಿಸಿದ ಪುಸ್ತಕ ಮೊದಲಾದವುಗಳ ಮೇಲೆ ಹಾಕುವ ಕ್ರಮಾಂಕ.
accessorize
ಸಕರ್ಮಕ ಕ್ರಿಯಾಪದ
(ಆನುಷಂಗಿಕ ಸಾಮಗ್ರಿಗಳನ್ನು) ಜೋಡಿಸು; ಸೇರಿಸು; ಒದಗಿಸು: a hanky to accessorize a costume ಉಡುಪಿಗೆ ಆನುಷಂಗಿಕವಾಗಿರಲು ಒಂದು ಕರವಸ್ತ್ರ.
accessory
ಗುಣವಾಚಕ
ಸೇರಿಸಿದ; ಅಧಿಕವಾದ; ಅನುಬಂಧವಾದ; ಮಿಗಿಲಾದ.
(ವಸ್ತು, ಉಪಕರಣ, ಮೊದಲಾದವುಗಳ ವಿಷಯದಲ್ಲಿ) ಗೌಣ; ಅಪ್ರಧಾನ; ಉಪ; ಮುಖ್ಯವಲ್ಲದ; ಆನುಷಂಗಿಕ: accessory buildings ಉಪ ಕಟ್ಟಡಗಳು; ಪ್ರಧಾನ ಕಟ್ಟಡಕ್ಕೆ ಸಂಬಂಧಿಸಿದ ಚಿಕ್ಕ ಕಟ್ಟಡಗಳು.