(ಜೀವರಸಾಯನ ವಿಜ್ಞಾನ) ಸಿಇನ್; ಮೆಕ್ಕೆಜೋಳದ ಪ್ರಧಾನ ಪ್ರೋಟೀನು.
Zeitgeist
ನಾಮವಾಚಕ
German ಯುಗಧರ್ಮ; ಕಾಲಗುಣ; ಕಾಲಮಹಾತ್ಮೆ; ಒಂದು ಕಾಲದ ಜನರ ಮನೋಭಾವ, ವಿಚಾರ, ಪ್ರಭಾವ.
zemindar
ನಾಮವಾಚಕ
ಜಮೀನುದಾರ:
(ಚರಿತ್ರೆ) (ಮೊಗಲರ ಕಾಲದಲ್ಲಿ) ಜಿಲ್ಲಾಧಿಕಾರಿ.
ಬ್ರಿಟಿಷ್ ಸರ್ಕಾರಕ್ಕೆ ಜಮೀನು ಕಂದಾಯ ಕೊಡುತ್ತಿದ್ದ ಜಮೀನು ಮಾಲೀಕರು.
Zen
ನಾಮವಾಚಕ
ಸೆನ್ (ಬೌದ್ಧ)ಧರ್ಮ; ಧ್ಯಾನ ಮತ್ತು ಅಂತರ್ಬೋಧಗಳಿಂದ ಮಾತ್ರ ಜ್ಞಾನೋದಯ ಆಗುವುದೆಂದು, ಹೇಳುವ ಬೌದ್ಧಮತದ ಒಂದು ಪಂಥ.
zenana
ನಾಮವಾಚಕ
ಪದಗುಚ್ಛ
ಜನಾನ; ಪೆಂಡವಾಸ; ಅಂತಃಪುರ; (ಇಂಡಿಯಾ, ಇರಾನ್, ಮೊದಲಾದ ದೇಶಗಳಲ್ಲಿ, ಪರದಾ ಪದ್ಧತಿಯ ಶ್ರೀಮಂತರ ಮನೆಗಳಲ್ಲಿ) ಹೆಂಗಸರಿರುವ ಭಾಗ. zenana mission (ಚರಿತ್ರೆ) ಜನಾನ – ನಿಯೋಗ, ಮಂಡಲಿ; ವೈದ್ಯಕೀಯ ಮತ್ತಿತರ ಸುಧಾರಣೆಗಳನ್ನು ಕುರಿತು ಪ್ರಚಾರ ಮಾಡಲು ಹೆಂಗಸರು ನಾನಾಗಳಿಗೆ ಹೋಗುತ್ತಿದ್ದ ಪ್ರಚಾರಕ ಮಂಡಲಿ.
Zend
ನಾಮವಾಚಕ
ಸೆಂಡ್ ಅವೆಸ್ತ ಗ್ರಂಥದ ವಿವಿಧ ಖಂಡಗಳ ಮೇಲಿನ ವ್ಯಾಖ್ಯಾನ.
Zend-Avesta
ನಾಮವಾಚಕ
ಜರತುಷ್ಟ್ರ ಧರ್ಮದ ಪವಿತ್ರ ಗ್ರಂಥಗಳು; ಪಾರಸಿಗಳ ಪವಿತ್ರ ಗ್ರಂಥದ ಪಾಠ ಮತ್ತು ಅದರ ಮೇಲಿನ ವ್ಯಾಖ್ಯಾನಗಳು.
Zener cards
ನಾಮವಾಚಕ
ಸಿನರ್ ಕಾರ್ಡುಗಳು; (ಅತೀಂದ್ರಿಯ ಅನುಭವದ ಸಂಶೋಧನೆಯಲ್ಲಿ ಬಳಸುವ) ಐದು ಬೇರೆಬೇರೆ ಸಂಕೇತಗಳಿರುವ ಇಪ್ಪತ್ತೈದು ಕಾರ್ಡುಗಳ ಸೆಟ್ಟು, ತಂಡ.
Zenist
ನಾಮವಾಚಕ
= Zennist.
zenith
ನಾಮವಾಚಕ
ಖಮಧ್ಯ; ವೀಕ್ಷಕನ ನೆತ್ತಿಯ ನೇರಕ್ಕಿರುವ ಖಗೋಳಬಿಂದು.
(ಅಧಿಕಾರ, ಏಳಿಗೆ, ಉಚ್ಛ್ರಾಯ, ಮೊದಲಾದವುಗಳ) ಶಿಖರ; ತುತ್ತತುದಿ: is at his zenith ಅವನು ಏಳಿಗೆಯ ಶಿಖರದಲ್ಲಿದ್ದಾನೆ.