logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Ugli
ನಾಮವಾಚಕ
Proprietary name ಮಚ್ಚೆನಿಂಬೆ; ಚಕ್ಕೋತದ ಹಣ್ಣು ಮತ್ತು ಚಪ್ಪಟೆ ಕಿತ್ತಳೆಗಳ ಮಿಶ್ರತಳಿಯಾದ, ಮಚ್ಚೆಗಳಿರುವ ಹಸುರು ಮತ್ತು ಹಳದಿ ಬಣ್ಣದ ನಿಂಬೆಕುಲದ ಹಣ್ಣು.

uglify
ಸಕರ್ಮಕ ಕ್ರಿಯಾಪದ
ವಿಕಾರಗೊಳಿಸು; ಅಂದಗೆಡಿಸು: they uglified the hall with pews and a gallery ಪ್ರತ್ಯೇಕ ಪೀಠಾವರಣ ಮತ್ತು ಗ್ಯಾಲರಿಯನ್ನು ಜೋಡಿಸಿ ಹಜಾರವನ್ನು ಅಂದಗೆಡಿಸಿದ್ದರು

uglily
ಕ್ರಿಯಾವಿಶೇಷಣ
ವಿಕಾರವಾಗಿ; ಅಂದಗೇಡಾದ; ರೀತಿಯಲ್ಲಿ; ಅವಲಕ್ಷಣವಾಗಿ.

ugliness
ನಾಮವಾಚಕ
ವಿಕಾರತೆ; ಅಂದಗೇಡು; ಅವಲಕ್ಷಣ ಸ್ಥಿತಿ.

ugly
ಗುಣವಾಚಕ
  • (ನೋಡಲು ಯಾ ಕೇಳಲು) ಅಸಹ್ಯವಾದ; ಅವಲಕ್ಷಣದ; ಕುರೂಪವಾದ; ವಿಕಾರವಾದ: an ugly beast of a bulldog ಅವಲಕ್ಷಣದ ಗೂಳಿನಾಯಿ: an ugly scar ವಿಕಾರವಾದ ಗಾಯದ ಮಚ್ಚೆ.
  • ಅಹಿತವಾದ; ಅವಮಾನಕರವಾದ; ಅಗೌರವದ: ugly rumours are about ಅವಮಾನಕರವಾದ ವದಂತಿಗಳು ಎದ್ದಿವೆ.
  • ಬೆದರಿಕೆಯ; ಅಪಾಯಕರವಾದ: the cloud has an ugly look ಮೋಡ ಬೆದರಿಸುವಂತಿದೆ.
  • ಕೆಟ್ಟ; ದುಷ್ಟ; ಕುತ್ಸಿತ; ನೀತಿಗೆಟ್ಟ; ಹೇಯ; ಹೇಸಿಗೆಯ: ugly vices ದುರಭ್ಯಾಸಗಳು, ದುರಾಚಾರಗಳು.
  • ಅಹಿತ, ಅಶುಭ – ಸೂಚಕ; ನಿರಾಶಾದಾಯಕ: an ugly weather ಅಹಿತ ಹವೆ.

  • ugly customer
    ನಾಮವಾಚಕ
    ಅಸಾಧ್ಯ ಗಿರಾಕಿ; ತಕರಾರು ಗಿರಾಕಿ; ಒಪ್ಪಿಸಲು ಕಷ್ಟವಾದ, ಸುಲಭನಲ್ಲದ ಗಿರಾಕಿ.

    ugly duckling
    ನಾಮವಾಚಕ
    ಕಾಗೆಗೂಡಿನಲ್ಲಿನ ಕೋಗಿಲೆ ಮರಿ; ದಡ್ಡ ಯಾ ಅಷ್ಟಾವಕ್ರನಾಗಿ ಕಾಣುತ್ತಿದ್ದು ಕೊನೆಗೆ ಎಲ್ಲರ ನಿರೀಕ್ಷೆಗೆ ಮೀರಿ ಪ್ರಚಂಡನಾಗಿ ಯಾ ಚೆಲುವನಾಗಿ ಪರಿಣಮಿಸುವ ವ್ಯಕ್ತಿ.

    Ugrian
    ಗುಣವಾಚಕ
    ಊಗ್ರಿಯನ್‍ ಹಿನಿಕ್‍ ಜನಾಂಗದವರ ಪೂರ್ವಶಾಖೆಯ, ಮುಖ್ಯವಾಗಿ ಮಗ್ಯಾರ್‍ ಯಾ ಹಿನ್ಸ್‍ ಜನಾಂಗದವರ.

    Ugrian
    ನಾಮವಾಚಕ
  • ಊಗ್ರಿಯನ್‍ ಜನಾಂಗದವನು.
  • ಊಗ್ರಿಯನ್‍ ಭಾಷೆ.

  • Ugric
    ಗುಣವಾಚಕ
    = 1Ugrian.


    logo