logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

table manners
ನಾಮವಾಚಕ
ಭೋಜನ ವಿಧಿ; ಊಟದ ಶಿಷ್ಟಾಚಾರ; ಊಟಕ್ಕೆ ಕುಳಿತಾಗ ಅನುಸರಿಸಬೇಕಾದ ಸರಿಯಾದ ನಡವಳಿಕೆ.

table salt
ನಾಮವಾಚಕ
(ಊಟ ಮಾಡುವಾಗ ಬಳಸುವ) ಪುಡಿ ಉಪ್ಪು; ಸುಭವಾಗಿ ಪುಡಿಯಾಗುವ ಉಪ್ಪು.

table talk
ನಾಮವಾಚಕ
ಊಟದ ಹರಟೆ; ಭೋಜನ ಗೋಷ್ಠಿಯ ಸಲ್ಲಾಪ; ಊಟ ಮಾಡುವಾಗಿನ ಮಾತುಕತೆ.

table tennis
ನಾಮವಾಚಕ
ಟೇಬಲ್‍ ಟೆನಿಸ್‍(ಆ); ಲಾನ್‍ ಟೆನಿಸ್‍ನಂತೆಯೇ, ಆದರೆ ಮೇಜಿನ ಮೇಲೆ ಚಿಕ್ಕ ದಾಂಡುಗಳು ಮತ್ತು ಚೆಂಡಿನೊಡನೆ ಆಡುವ, ಮೇಜಿನ ಮಧ್ಯಭಾಗದಲ್ಲಿ ನೆಟ್‍ ಯಾ ಬಲೆ ಕಟ್ಟಿ ಆಡುವ ಆಟ.

table wine
ನಾಮವಾಚಕ
ಟೇಬಲ್‍ ವೈನ್‍; ಊಟದ ವೈನು; ಊಟ ಮಾಡುವಾಗ ಕುಡಿಯುವ ದ್ರಾಕ್ಷಾ ಮದ್ಯ.

table-cut
ಗುಣವಾಚಕ
(ರತ್ನಗಳ ವಿಷಯದಲ್ಲಿ) ಚಪ್ಪಟೆತಲದ; ಚಪ್ಪಟೆಮೇಲ್ಮೈಯ; ಮೇಲ್ಮುಖವಾಗಿರುವಂತೆ ಕಡೆದ.

table-flap
ನಾಮವಾಚಕ
ಮೇಜಿನ ಮಡಿಚುಹಲಗೆ; ಮೇಜಿಗೆ ಕೀಲಿಸಿದ್ದು, ಉಪಯೋಗಿಸದೆ ಇರುವಾಗ ಕೆಳಕ್ಕೆ ಇಳಿಯಬಿಡಬಹುದಾದ ಮಡಿಚುಹಲಗೆ.

table-leaf
ನಾಮವಾಚಕ
  • (ಮೇಜಿನ) ಹೆಚ್ಚುವರಿ ಹಲಗೆ; ಮೇಜಿನ ಉದ್ದ ಹೆಚ್ಚಿಸಬೇಕಾದಾಗ ಬಳಸುವ ಒಳಹಲಗೆ.
  • = table-flap.

  • table-lifting
    ನಾಮವಾಚಕ
    (ಭೂತಚೇಷ್ಟೆ, ಪ್ರೇತವ್ಯವಹಾರ, ಮೊದಲಾದವುಗಳ ವಿಷಯದಲ್ಲಿ) ಮೇಜು ಎತ್ತುವುದು ಮೊದಲಾದ ಅಲೌಕಿಕ ಘಟನೆ.

    table-mat
    ನಾಮವಾಚಕ
    ಮೇಜು ಚಾಪೆ; ಬಿಸಿ ಪಾತ್ರೆ ಮೊದಲಾದವುಗಳಿಂದ ಮೇಜಿನ ಮೇಲ್ಮೈಯನ್ನು ರಕ್ಷಿಸಲು ಬಳಸುವ ಪುಟ್ಟ ಚಾಪೆ ಮೊದಲಾದವು.


    logo