logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oarsman
ನಾಮವಾಚಕ
ಅಂಬಿಗ; ಹುಟ್ಟುಗಾರ; ಹುಟ್ಟು–ಹಾಕುವವನು, ಹೊಡೆಯುವವನು.

oarsmanship
ನಾಮವಾಚಕ
ಹುಟ್ಟುಹಾಕುವ ವಿದ್ಯೆ; ಹುಟ್ಟು ಹಾಕುವುದರಲ್ಲಿ ಪ್ರಾವೀಣ್ಯ, ಕುಶಲತೆ.

oarswoman
ನಾಮವಾಚಕ
ಅಂಬಿಗಿತ್ತಿ; ಹುಟ್ಟುಗಾತಿ; ಹುಟ್ಟು–ಹಾಕುವವಳು, ಹೊಡೆಯುವವಳು.

oarweed
ನಾಮವಾಚಕ
ಕಡಲ ತೀರಗಳಲ್ಲಿ ಬೆಳೆಯುವ, ಮುಖ್ಯವಾಗಿ ಲ್ಯಾಮಿನೇರಿಯ ಕುಲದ ಒಂದು ಬಗೆಯ ಸಮುದ್ರ ಶೈವಲ, ಕಡಲ ಪಾಚಿ.

OAS
ಸಂಕ್ಷಿಪ್ತ
  • Oraginazation of American States.
  • on active service.

  • oasis
    ನಾಮವಾಚಕ
    ಓಯಸಿಸ್‍:
  • ಮರಳುಗಾಡಿನಲ್ಲಿ ವಿರಳವಾಗಿ ಕಂಡುಬರುವ, ನೀರು ಸಿಗುವ ಫಲವತ್ತದ ಜಾಗ, ಪ್ರದೇಶ.
  • (ರೂಪಕವಾಗಿ) ಅಪರೂಪ ಸುಖ; ಅಪರೂಪವಾಗಿ ಸಿಗುವ ಹಿತ; ವಿರಳವಾಗಿ ದೊರಕುವ ಹಿತಕರ ವಿಷಯ ಯಾ ವಸ್ತು.

  • oast
    ನಾಮವಾಚಕ
    ಗೂಡೊಲೆ; ಮುಖ್ಯವಾಗಿ ಹಾಪ್‍ ಕಾಯಿಗಳನ್ನು ಮತ್ತು ಮೊಳೆ ಧಾನ್ಯಗಳು, ತಂಬಾಕು, ಮೊದಲಾದವನ್ನು ಒಣಗಿಸಲು ಬಳಸುವ ಬಿಸಿ ಗೂಡು.

    oast-house
    ನಾಮವಾಚಕ
    ಶಾಖಾಗಾರ; ಗೂಡೊಲೆ ಮನೆ; ಒಣಗಿಸುವ ಮನೆ; ಹಾಪ್‍ ಕಾಯಿಗಳು ಮೊದಲಾದವನ್ನು ಒಣಗಿಸುವ ಗೂಡೊಲೆಗಳುಳ್ಳ ಕಟ್ಟಡ, ಮನೆ.

    oat
    ನಾಮವಾಚಕ ಪದಗುಚ್ಛ
  • ಓಟ್‍:
    1. ತೋಕೆ ಗೋಧಿ; ಅವೆನ ಸ್ಯಾಟಿವ ಕುಲಕ್ಕೆ ಸೇರಿದ, ಶೀತವಲಯಗಳಲ್ಲಿ ಬೆಳೆಸುವ ಒಂದು ಧಾನ್ಯದ ಗಿಡ ಯಾ ಸಸ್ಯ.
    2. (ಬಹುವಚನದಲ್ಲಿ) ಅಹಾರವಾಗಿ ಬಳಸುವ, ಈ ಗಿಡದ ಧಾನ್ಯ.
    3. ಅವೆನ ಕುಲಕ್ಕೆ ಸೇರಿದ, ಯಾವುದೇ ಧಾನ್ಯ, ಮುಖ್ಯವಾಗಿ ಕಾದು ಓಟ್‍.
  • (ಕಾವ್ಯಪ್ರಯೋಗ).
    1. ಓಟ್‍ ಕಾಂಡ; ಸಾಮಾನ್ಯವಾಗಿ ಹಳ್ಳಿಯ ಯಾ ಗ್ರಾಮೀಣ ಕಾವ್ಯದಲ್ಲಿ ಕುರುಬರು ಮೊದಲಾದವರು ಕೊಳಲಾಗಿ ಬಳಸುವ, ಒಟ್‍ ಗಿಡದ ಕಾಂಡ.
    2. ಹಳ್ಳಿಯ ಹಾಡು, ಕವನ; ಗ್ರಾಮೀಣ ಕಾವ್ಯ; ಗ್ರಾಮ ಜೀವನವನ್ನು ಕುರಿತ ಪದ್ಯ, ಕಾವ್ಯ.
  • (ಬಹುವಚನದಲ್ಲಿ) (ಅಶಿಷ್ಟ) ಲೈಂಗಿಕ ಸುಖ ತೃಪ್ತಿ.

  • oat-grass
    ನಾಮವಾಚಕ
    ಓಟ್‍ ಹುಲ್ಲು ಮುಖ್ಯವಾಗಿ ಅರ್‍ಹೆನತೀರಮ್‍ ಕುಲದ ಹುಲ್ಲು.


    logo