logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Macassar
ನಾಮವಾಚಕ
ಮಕ್ಯಾಸರ್‍ ತೈಲ; ಒಂದು ಬಗೆಯ ಕೂದಲೆಣ್ಣೆ, ಕೇಶತೈಲ.

Macassar oil
ನಾಮವಾಚಕ
= 1Macassar.

macaw
ನಾಮವಾಚಕ
(ಬೆಡಗಿನ ಗರಿಯುಳ್ಳ) ದಕ್ಷಿಣ ಅಮೆರಿಕದ ಹವು ಜಾತಿಯ ಗಿಣಿ; ಮಕಾ ಗಿಣಿ.

macaw
ನಾಮವಾಚಕ
(ದಕ್ಷಿಣ ಅಮೆರಿಕದ) ಹಲವು ಜಾತಿಯ ತಾಳೆಯ ಮರ; ಮಕಾ ತಾಳೆ ಮರ.

Macc.
ಸಂಕ್ಷಿಪ್ತ
Maccabees (Apocrypha).

Maccabean
ಗುಣವಾಚಕ
ಮೆಕಾಬಿಗಳ; ಆಂಟಿಯೋಕನ್‍ ಎಪಿಹೇನಸ್‍ ಎಂಬುವನ ದಬ್ಬಾಳಿಕೆಯಿಂದ ಜ್ಯೂಡಿಯ ಪಟ್ಟಣವನ್ನು ಕ್ರಿಸ್ತಪೂರ್ವ 170ರಲ್ಲಿ ವಿಮುಕ್ತಗೊಳಿಸಿದ ಮೆಕಾಬಿನ್‍ ಯೆಹೂದಿ ರಾಜಮನೆತನದ.

Maccabees
ಗುಣವಾಚಕ
(ಬಹುವಚನ) ಮ್ಯಾಕಬೀಸ್‍; ಯೆಹೂದಿ ಚರಿತ್ರೆ ಮತ್ತು ದೇವತಾ ಶಾಸ್ತ್ರದ ನಾಲ್ಕು ಪುಸ್ತಕಗಳು.

mace
ನಾಮವಾಚಕ
  • (ಚರಿತ್ರೆ) ಶಂಕುಗಳುಳ್ಳ ಗದೆ ಯಾ ಮುಸಲ; ಲೋಹದ ತಲೆಯೂ, ಅದರಲ್ಲಿ ಅನೇಕ ವೇಳೆ ಲೋಹದ ಮುಳ್ಳುಗಳೂ ಉಳ್ಳ ಭಾರವಾದ ದಂಡ.
  • (ಕೆಲವು ದೊಡ್ಡ ಅಧಿಕಾರಿಗಳ ಮುಂದುಗಡೆ ಹೊತ್ತುಕೊಂಡು ಹೋಗುವ, ಮುಖ್ಯವಾಗಿ ಬ್ರಿಟನ್ನಿನ ಕಾಮನ್ಸ್‍ ಶಾಸನಸಭೆಯ ಸ್ಪೀಕರನ ಅಧಿಕಾರ ಲಾಂಛನವಾಗಿರುವ, ಇದನ್ನು ಹೋಲುವ) ಅಧಿಕಾರ ದಂಡ; ರಾಜ ದಂಡ.
  • ಬ್ಯಾಗಟೆಲ್‍ ಎಂಬ ಆಟದಲ್ಲಿಯ ದಾಂಡು.
  • = mace-bearer.

  • mace
    ನಾಮವಾಚಕ
    ಜಾ(ಯಿ)ಪತ್ರೆ; ಜಾಯಿಕಾಯಿಯ ಮೇಲಿನ, ಒಣಗಿಸಿದ ಸಿಪ್ಪೆ.

    mace-bearer
    ನಾಮವಾಚಕ
    ದಂಡಧಾರಿ; ದಂಡವಾಹಕ; ಶಾಸನಸಭೆ ಮೊದಲಾದವುಗಳಲ್ಲಿ ಅಧಿಕಾರ ದಂಡವನ್ನು ಹೊತ್ತುಕೊಂಡು ಹೋಗುವ ಅಧಿಕಾರಿ.


    logo