logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

labiate
ನಾಮವಾಚಕ
(ಸಸ್ಯವಿಜ್ಞಾನ) ಓಷ್ಠಿತ(ಸಸ್ಯ); ತುಟಿಗಳಂತೆ ಒಂದು ದಳ ಇನ್ನೊಂದರ ಮೇಲೆ ಚಾಚಿಕೊಂಡಿರುವ, ಇಪ್ಪಾಲಾದ ಪುಷ್ಪಪಾತ್ರೆ ಯಾ ದಳವೃತ್ತ ಉಳ್ಳ ಸಸ್ಯ.

labiate
ಗುಣವಾಚಕ
  • (ಸಸ್ಯವಿಜ್ಞಾನ) ಓಷ್ಠಿತ; ಓಷ್ಠರೂಪಿ; ತುಟಿಯಾಕಾರದ; ಅಧರಾಕೃತಿಯ; ನಳಿಕೆಯಾಕಾರದ ದಳವೃತ್ತ ಯಾ ಪುಷ್ಪಪಾತ್ರೆಯು ಇಪ್ಪಾಲಾಗಿದ್ದು, ಒಂದು ದಳದ ಮೇಲೆ ಇನ್ನೊಂದು ಚಾಚಿಕೊಂಡಿರುವ.
  • (ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) ಓಷ್ಠಿತ; ಓಷ್ಠಾಕಾರದ; ಅಧರರೂಪಿ; ಅಧರಾಕಾರದ; ತುಟಿಯಂಥ; ತುಟಿಯಾಕಾರದ.

  • labile
    ಗುಣವಾಚಕ
    (ರಸಾಯನವಿಜ್ಞಾನ) ಅಸ್ಥಿರ; ಭಂಗುರ; (ಅಣುವಿನಲ್ಲಿರುವ ಪರಮಾಣು ಯಾ ಪರಮಾಣು ಗುಚ್ಛದ ವಿಷಯದಲ್ಲಿ) ಸುಲಭವಾಗಿ ಬದಲಾಯಿಸುವ ಯಾ ಪಲ್ಲಟಿಸಬಹುದಾದ.

    lability
    ನಾಮವಾಚಕ
    (ರಸಾಯನವಿಜ್ಞಾನ) ಭಂಗುರತೆ; ಅಸ್ಥಿರತೆ; ಸ್ಥಾನಚ್ಯುತಿ ಯಾ ಬದಲಾವಣೆಯನ್ನು ಹೊಂದುವಿಕೆ.

    labio-
    ಸಮಾಸ ಪೂರ್ವಪದ
    ಓಷ್ಠ್ಯ ಯಾ ಸೋಷ್ಠ; “ತುಟಿಗಳ ಯಾ”, “ತುಟಿಗಳು ಮತ್ತು” ಎಂಬ ಅರ್ಥಗಳ ಶಬ್ದಗಳ ರಚನೆಯಲ್ಲಿ ಬಳಸುವ ಸಮಾಸ ಪೂರ್ವಪದ.

    labiodental
    ಗುಣವಾಚಕ
    (ಧ್ವನಿಯ ವಿಷಯದಲ್ಲಿ) ದಂತೋಷ್ಠ್ಯ; ತುಟಿ ಮತ್ತು ಹಲ್ಲುಗಳಿಂದ ಹುಟ್ಟುವ, ಉದಾಹರಣೆಗೆ: f, v.

    labiovelar
    ಗುಣವಾಚಕ
    (ಧ್ವನಿಯ ವಿಷಯದಲ್ಲಿ) ಓಷ್ಠತಾಲವ್ಯ; ತುಟಿಗಳು ಮತ್ತು ತಾಲುವಿನ ಹಿಂಭಾಗದ ಸಹಾಯದಿಂದ ಹುಟ್ಟುವ, ಉದಾಹರಣೆಗೆ w.

    labium
    ನಾಮವಾಚಕ
    (ಬಹುವಚನ labia ಉಚ್ಚಾರಣೆ ಲೇಬಿಅ).
  • (ಸಾಮಾನ್ಯವಾಗಿ ಬಹುವಚನ ದಲ್ಲಿ) (ಅಂಗರಚನಾಶಾಸ್ತ್ರ) ಯೋನಿತುಟಿ(ಗಳು); ಭಗೋಷ್ಠ(ಗಳು); ಯೋನಿಯ ಮುಖದಲ್ಲಿರುವ ತುಟಿಯಂಥ ಮಡಿಕೆ(ಯ ಭಾಗ).
  • ಲೇಬಿಯಮ್‍; ತುಟಿ; ಓಷ್ಠ:
    1. ಕೀಟಗಳ ಮತ್ತು ಚಿಪ್ಪುಜೀವಿಗಳ ಬಾಯಿಯ ತಳ.
    2. ಉದರಪಾದಿಗಳ ಚಿಪ್ಪಿನ ಬಾಯಿಯಲ್ಲಿ ಕಾಣುವ ಒಳತುಟಿಯಂಥ ಬಾಗ.
    3. (ಸಸ್ಯವಿಜ್ಞಾನ) ತುಟಿಗಳಂತಿರುವ ದಳವಲಯದಲ್ಲಿಯ (ಮುಖ್ಯವಾಗಿ ಕೆಳಗಿನ) ತುಟಿ.

  • labor
    ನಾಮವಾಚಕ
    (ಅಮೆರಿಕನ್‍ ಪ್ರಯೋಗ, ಆಸ್ಟ್ರೇಲಿಯ) = 1labour.

    labor
    ಕ್ರಿಯಾಪದ
    (ಅಮೆರಿಕನ್‍ ಪ್ರಯೋಗ, ಆಸ್ಟ್ರೇಲಿಯ) = 2labour.


    logo