(ನೌಕಾಯಾನ) ಕಿವಿದಾರ; ಹಾಯಿ ಪಟದ ಮೇಲ್ಮೂಲೆಯನ್ನು ಕೂವೆ ಮರದ ಅಡ್ಡಕ್ಕೆ ಬಿಗಿಯುವ (ಹಲವು ಹಗ್ಗಗಳಲ್ಲಿ) ಸಣ್ಣ — ಹಗ್ಗ, ಮಿಣಿ.
earl
ನಾಮವಾಚಕ
(ಸ್ತ್ರೀಲಿಂಗ countess) ಅರ್ಲ್; ‘ಮಾರ್ಕ್ವಿಸ್’ ಹಾಗೂ ‘ವೈಕೌಂಟ್’ ಪದವಿಗಳ ಮಧ್ಯವರ್ತಿ ಪದವಿಯ ಶ್ರೀಮಂತ.
Earl Marshal
ನಾಮವಾಚಕ
(ಬ್ರಿಟಿಷ್ ಪ್ರಯೋಗ) ಅರ್ಲ್ ಮಾರ್ಷಲ್; ಕಾಲೇಜ್ ಆಹ್ ಆರ್ಮ್ಸ್ ಯಾ ವಂಶಲಾಂಛನ ಸಂಸ್ಥೆಯ ಮುಖ್ಯಾಧಿಕಾರಿ, ಅಧ್ಯಕ್ಷ.
earldom
ನಾಮವಾಚಕ
ಅರ್ಲ್‍ಗಿರಿ; ಅರ್ಲನ ಆಧಿಪತ್ಯ ಯಾ ಪದವಿ.
earless
ಗುಣವಾಚಕ
ಕಿವಿಯಿಲ್ಲದಿರುವ; ಕಿವಿಯಿಲ್ಲದ; ಕರ್ಣರಹಿತ.
(ಸಂಗೀತದ ವಿಷಯದಲ್ಲಿ) ಕಿವಿಯಿಲ್ಲದ; ಸ್ವರನಾದಗಳನ್ನು ಗ್ರಹಿಸದ; ಸಂಗೀತ ಜ್ಞಾನವಿಲ್ಲದ; ಸ್ವರಜ್ಞಾನವಿಲ್ಲದ; ನಾದ ಸಂವೇದನೆಯಿಲ್ಲದ.
earliness
ನಾಮವಾಚಕಮುಂಚಿತವಾಗಿರುವಿಕೆ; ಶೀಘ್ರವಾಗಿರುವಿಕೆ.
early
ಗುಣವಾಚಕ
ಪದಗುಚ್ಛ
ನುಡಿಗಟ್ಟು
keep early hours ಬೇಗ ಮಲಗಿ ಬೇಗ ಏಳು.
ಮುಂಚಿನ; ಹೊತ್ತಿಗೆ ಮುಂಚಿನ; ಮೊದಲಿನ; ಬೇಗನೆಯ; ಮುಂಚಿತವಾದ: an early visit ಹೊತ್ತಿಗೆ ಮುಂಚಿನ ಭೇಟಿ. early risers ಬೆಳಿಗ್ಗೆ ಬೇಗ ಯಾ ಹೊತ್ತಿಗೆ ಮುಂಚೆ ಏಳುವವರು.
ಮುಂಬೆಳೆಯುವ; ಕಾಲಕ್ಕೆ ಮುಂಚೆ ಬಿಡುವ: early peaches ಮುಂಬೆಳೆ ಪೀಚ್ ಹಣ್ಣುಗಳು; ಕಾಲಕ್ಕೆ ಮುಂಚೆ ಬಿಟ್ಟ ಪೀಚ್ ಹಣ್ಣುಗಳು.
(ಕಾಲ, ಅವಧಿ, ಬೆಳವಣಿಗೆ, ಮೊದಲಾದವುಗಳ) ಹತ್ತಿರದ; ಸಮೀಪದ: fix an early date ಒಂದು ಹತ್ತಿರದ ದಿನವನ್ನು ಗೊತ್ತುಮಾಡು.
ಮೊದಲ(ನೆಯ); ಆದಿ; ಆರಂಭದ; ಶುರುವಿನ: the early part of the century ಶತಮಾನದ ಆದಿಭಾಗ. the early spring ವಸಂತದ ಆದಿಭಾಗ. the early morning ಪ್ರಾತಃಕಾಲದ ಆರಂಭ; ಮುಂಜಾನೆ.
ಪ್ರಾಚೀನ; ಪುರಾತನ; ಆದಿಕಾಲದ: early man ಆದಿಮಾನವ. early art form ಪ್ರಾಚೀನ ಕಲಾರೂಪ.
early
ಕ್ರಿಯಾವಿಶೇಷಣ
ಪದಗುಚ್ಛ
ಮೊದಲೇ; ಬೇಗನೆ; ಶೀಘ್ರವಾಗಿ; ಮುಂಚೆ; ಮುಂಚಿತವಾಗಿ: awoke early in the morning ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದ. the train arrived early ರೈಲು ಮುಂಚಿತವಾಗಿ ಬಂತು. earlier on (later on ಎನ್ನುವಂತೆ)
ಇನ್ನೂ ಮುಂಚೆಯೇ; ಮೊದಲೇ; ಹಿಂದೆಯೇ.
ಆರಂಭದಲ್ಲಿಯೇ; ಶುರುವಿನಲ್ಲಿಯೇ; ಪ್ರಾರಂಭದ ಹಂತದಲ್ಲಿಯೇ: he realised earlier on that it was impossible ಅದು ಆಸಾಧ್ಯವೆಂದು ಅವನು ಪ್ರಾರಂಭದಲ್ಲಿಯೇ ತಿಳಿದುಕೊಂಡ.
early bird
ನಾಮವಾಚಕ
ನುಡಿಗಟ್ಟು
(ಹಾಸ್ಯ ಪ್ರಯೋಗ) ಹೊತ್ತಿಗೆ ಮುಂಚೆ ಏಳುವವನು, ಬರುವವನು, ಮೊದಲಾದವು. the early bird catches the worm ಬೇಗ ಏಳುವ ಹಕ್ಕಿಗೆ ಬೇಕಾದಷ್ಟು ಹುಳು ಹುಪ್ಪಟೆ; ಚುರುಕು ಮನುಷ್ಯನಿಗೆ ಬಯಸಿದ್ದು ಸಿಕ್ಕುತ್ತದೆ.