(ರಾಜಕೀಯದಲ್ಲಿ) ಪಿತೂರಿತಂಡ; ಪಿತೂರಿಗಾರರ ಕೂಟ; ಸಂಚುಕೂಟ; ಪಿತೂರಿ, ಸ್ವಾರ್ಥ, ಉಪದ್ರವ, ಮೊದಲಾದವುಗಳಿಗಾಗಿ ಕೆಲಸ ಮಾಡುವ ಗುಂಪು.
(ಚರಿತ್ರೆ) ಸಚಿವಪಂಚಕ; ಮಂತ್ರಿಪಂಚಕ ಮಂಡಲಿ; ಇಂಗ್ಲಂಡಿನ ಎರಡನೆಯ ಚಾರ್ಲ್ಸ್‍ನ ಆಳ್ವಿಕೆಯಲ್ಲಿ ವಿದೇಶ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ, C,A,B,A, ಮತ್ತು Lಗಳಿಂದ ಕ್ರಮವಾಗಿ ಪ್ರಾರಂಭವಾಗುವ ಕುಲನಾಮಗಳನ್ನು ಹೊಂದಿದ್ದ, ಇಂದಿನ ಸಚಿವ ಸಂಪುಟಗಳ ಮೂಲವಾದ, ಐದು ಜನ ಮಂತ್ರಿಗಳನ್ನೊಳಗೊಂಡ ಸಮಿತಿ.
cabal
ಅಕರ್ಮಕ ಕ್ರಿಯಾಪದ
ಪಿತೂರಿ ಹೂಡು; ಒಳಸಂಚು ನಡೆಸು; ಒಳಕೂಟ ಕಟ್ಟು.
cabala
ನಾಮವಾಚಕ
= cabbala.
caballer
ನಾಮವಾಚಕ
ಪಿತೂರಿಗ; ಪಿತೂರಿಗಾರ; ಸಂಚುಗಾರ; ಹೊಂತಗಾರ.
caballero
ನಾಮವಾಚಕ
(ಸ್ಪೇನ್ ದೇಶದ) ಸಭ್ಯ; ಮಹಾಶಯ; ಘನಸ್ಥ; ದೊಡ್ಡ ಮನುಷ್ಯ.
cabana
ನಾಮವಾಚಕ
(ಅಮೆರಿಕನ್ ಪ್ರಯೋಗ) (ಸಮುದ್ರದಂಡೆಯ ಯಾ ಈಜುಕೊಳದ ಬಳಿಯ) ಮರೆದಾಣ; ಮರೆಕೋಣೆ; ಕೋಣೆಯ ಯಾ ಗುಡಾರದ ರೀತಿಯ ಕಟ್ಟಡ.
cabaret
ನಾಮವಾಚಕ
(ಹ್ರಾನ್ಸಿನಲ್ಲಿ) ಪಾನಗೃಹ; ಮದ್ಯದಂಗಡಿ.
(ಇಂಗ್ಲಂಡು, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ) ಕ್ಯಾಬರೆ; ಭೋಜನವಿನೋದ; ಭೋಜನೋಲ್ಲಾಸ; ಊಟದವರಿಗಾಗಿ ಹೋಟೆಲು ಮೊದಲಾದವುಗಳಲ್ಲಿ ಊಟದ ಜತೆಗೆ ಏರ್ಪಡಿಸುವ ನೃತ್ಯ, ಗಾಯನ, ಮೊದಲಾದ ಕಾರ್ಯಕ್ರಮಗಳು.
cabbage
ನಾಮವಾಚಕ
ಪದಗುಚ್ಛ
sea cabbage
(ತರಕಾರಿಯಾಗಿ ಬಳಸುವ) ಎಲೆಕೋಸು ಯಾ ಅದರ ಗಿಡ.
ಕೋಸಿನ – ಗೊಂಡೆ, ತಲೆ.
(ಆಡುಮಾತು) ಮಹತ್ತ್ವಾಕಾಂಕ್ಷೆ ಯಾ ಆಸಕ್ತಿಗಳಿಲ್ಲದ–ವ್ಯಕ್ತಿ.
(ಅಶಿಷ್ಟ) (ಹಣದ) ನೋಟು.
cabbage butterfly
ನಾಮವಾಚಕ
ಕೋಸುಚಿಟ್ಟೆ; ಮರಿಹುಳುಗಳಾಗಿದ್ದಾಗ ಕೋಸಿನ ಎಲೆಗಳನ್ನು ತಿನ್ನುವ, ಅನೇಕ ಬಗೆಯ ಬಿಳಿಚಿಟ್ಟೆ.