logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

babble
ನಾಮವಾಚಕ
  • ತೊದಲು (ನುಡಿ).
  • ಗೊಡ್ಡು, ಕಾಡು – ಹರಟೆ; ಗಳಪು.
  • ಅರ್ಥ ಹೀನವಾದ, ದಡ್ಡ, ಕೆಲಸಕ್ಕೆ ಬಾರದ – ಮಾತು.
  • (ನೀರು ಮೊದಲಾದವುಗಳ) ಮರ್ಮರ; ಗುಳುಗುಳು ಸದ್ದು.
  • (ಟೆಲಿಹೋನ್‍) ಮರ್ಮರ; (ಹಲವಾರು ಬೇರೆ ಬೇರೆ ಮಂಡಲಗಳಲ್ಲಿ ಸಂಭಾಷಣೆಗಳಾಗುತ್ತಿರುವುದರಿಂದ) ಯಾವುದೇ ಒಂದು ದೂರವಾಣಿ ಸಂಭಾಷಣೆಯ ಮಧ್ಯೆ ಕೇಳಿಬರುವ ಅನಾವಶ್ಯಕ ಗದ್ದಲ, ಮರ್ಮರಶಬ್ದ.

  • babblement
    ನಾಮವಾಚಕ
    = 2babble(1, 2).

    babbler
    ನಾಮವಾಚಕ
  • ಹರಟೆಮಲ್ಲ.
  • ಒಡಕುಬಾಯಿ; ಬಾಯಿ ಭದ್ರವಿಲ್ಲದವ; ಹರಕು ಬಾಯಿಯವ; ಗುಟ್ಟನ್ನು ಹೇಳಿಬಿಡುವವ.
  • ಹರಟೆಹಕ್ಕಿ; ಒದರಬಡುಕ, ಜೋರಾಗಿ ಚಿಲಿಪಿಲಿಗುಟ್ಟುವ, ಗುಬ್ಬಚ್ಚಿಯಂಥ ಪಕ್ಷಿ.
  • ಅತಿಯಾಗಿ ಬೊಗಳುವ ಬೇಟೆನಾಯಿ.

  • babbling
    ನಾಮವಾಚಕ
  • ಗೊಡ್ಡುಹರಟೆ; ಅತಿಮಾತು; ಅಸಂಬದ್ಧ ಪ್ರಲಾಪ; ಕೆಲಸಕ್ಕೆ ಬಾರದ ಮಾತು.
  • (ಹಸುಗೂಸುಗಳ) ತೊದಲುನುಡಿ; ಮಕ್ಕಳ ಆಲಾಪ.

  • babbling
    ಗುಣವಾಚಕ
  • ಹರಟುವ; ಕೆಲಸಕ್ಕೆ ಬಾರದ ಮಾತಾಡುವ.
  • (ಹಸುಗೂಸುಗಳ ವಿಷಯದಲ್ಲಿ) ತೊದಲು ನುಡಿಯುವ.

  • babe
    ನಾಮವಾಚಕ ಪದಗುಚ್ಛ ನುಡಿಗಟ್ಟು
    babes and sucklings ಹಸುಗೂಸುಗಳು; ಕಂದಮ್ಮಗಳು; ಎಳೆ ಮರಿಗಳು.
  • (ಕಾವ್ಯಪ್ರಯೋಗ) ಹಸುಳೆ; ಹಸುಗೂಸು; ಎಳೆಗೂಸು; ಹೂ ಮಗು; ಎಳೆಮಗು; ಶಿಶು.
  • ಮುಗ್ಧ; ನಿಷ್ಕಪಟಿ; ಏನೂ ಅರಿಯದವ.
  • (ಅಮೆರಿಕನ್‍ ಪ್ರಯೋಗ, ಅಶಿಷ್ಟ) ತರುಣಿ; ಯುವತಿ.

  • babel
    ನಾಮವಾಚಕ ಪದಗುಚ್ಛ
    tower of Babel = babel(1, 3).
  • ಬೇಬಲ್‍; ಪ್ರಾಚೀನ ಶಿನಾರ್‍ ನಗರದ ಗೋಪುರ; ಸ್ವರ್ಗ ಮುಟ್ಟಲು ಕಟ್ಟಿದ ದೊಡ್ಡ ಗೋಪುರ.
  • ಬಹಳ ಎತ್ತರದ ಕಟ್ಟಡ; ಅತ್ಯುನ್ನತ ಪ್ರಾಸಾದ.
  • ಗಾಳಿಗೋಪುರ; ಕನಸಿನ ಗೋಪುರ; ಹೇರಾಸೆಯ ಯೋಜನೆ.
  • ಗೊಂದಲದ ದೃಶ್ಯ, ಸ್ಥಳ.
  • (ಬೇರೆಬೇರೆ ಧ್ವನಿ, ಭಾವನೆ, ಭಾಷೆಗಳ) ಗೊಂದಲ; ಗಲಿಬಿಲಿ.
  • ಗೊಂದಲಕೂಟ; ಗಲಿಬಿಲಿ ಸಭೆ; ಗುಜುಗುಜು ಸಂತೆ.
  • ಗುಲ್ಲು; ಅರ್ಥಹೀನ – ಗದ್ದಲ, ಗಲಿಬಿಲಿ.

  • babelise
    ಸಕರ್ಮಕ ಕ್ರಿಯಾಪದ
    (ಹಲವಾರು ಭಾಷೆಗಳನ್ನು ಮಾತನಾಡುವುದು, ಮೊದಲಾದವುಗಳಿಂದ) ಗೊಂದಲವುಂಟುಮಾಡು; ಗಲಿಬಿಲಿಗೊಳಿಸು.

    babelism
    ನಾಮವಾಚಕ
    (ಭಾಷೆ, ಭಾವನೆ, ಮೊದಲಾದವುಗಳ) ಗೊಂದಲ; ಗಲಿಬಿಲಿ.

    babelize
    ಸಕರ್ಮಕ ಕ್ರಿಯಾಪದ
    = babelise.


    logo