logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

malefic
ಗುಣವಾಚಕ
(ಮಂತ್ರ ಮಾಟಗಳ ವಿಷಯದಲ್ಲಿ) ಕೆಡಕು ಮಾಡುವ; ಪೀಡೆಯ; ಅರಿಷ್ಟದ; ಹಾನಿಕರ; ಉಪದ್ರವಕಾರಿ; ಪೀಡೆಯನ್ನುಂಟು ಮಾಡುವ.

maleficence
ನಾಮವಾಚಕ
  • ಕೇಡಿಗತನ; ಕೆಡಕು ಮಾಡುವ ಸ್ವಭಾವ, ಪ್ರವೃತ್ತಿ; ಹಾನಿಕರ ಲಕ್ಷಣ.
  • ಅಪರಾಧ ಪ್ರವೃತ್ತಿ; ಅಪರಾಧ ಮಾಡುವ ಸ್ವಭಾವ, ಮನೋವೃತ್ತಿ; ದುಷ್ಕೃತ್ಯದ ಒಲವು.

  • maleficent
    ಗುಣವಾಚಕ
  • ಕೆಡಕು ಮಾಡುವ; ಅರಿಷ್ಟದ; ಹಾನಿಕರ.
  • ಅಪರಾಧದ; ತಕ್ಸೀರಿನ; ಅಪರಾಧ ಸ್ವರೂಪದ.

  • maleic acid
    ನಾಮವಾಚಕ
    (ರಸಾಯನವಿಜ್ಞಾನ) ಮಲೇಯಿಕ್‍ ಆಮ್ಲ; ಸಾಮಾನ್ಯವಾಗಿ ಬೆನ್ಸಿ ನ್‍ ಯಾ ನ್ಯಾಹ್ತಲೀನಿನ ಉತ್ಕರ್ಷಣದಿಂದ ತಯಾರಿಸುವ, ಜ್ಯಾಮಿತೀಯ ಸಮಾಂಗತೆಗೆ ಅತ್ಯುತ್ತಮ ನಿದರ್ಶನವಾಗಿರುವ, ಅಪರ್ಯಾಪ್ತ ಡೈಕಾರ್ಬಾಕ್ಸಿಲಿಕ್‍ ಆಮ್ಲ, ${\rm C}_4{\rm H}_4$ ${\rm O}_4$.

    malemute
    ನಾಮವಾಚಕ
    = malamute.

    maleness
    ನಾಮವಾಚಕ
    ಪುಂಸ್ತ್ವ; ಪುರುಷತ್ವ; ಗಂಡಸುತನ; ಪುರುಷತ್ವವನ್ನು ತೋರಿಸುವ ಲಕ್ಷಣಗಳು (ಉದಾಹರಣೆಗೆ ರೂಪ, ದೈಹಿಕ ಕ್ರಿಯೆ, ವರ್ತನೆ).

    malevolence
    ನಾಮವಾಚಕ
  • (ಇತರರಿಗೆ) ಕೇಡೆಣಿಕೆ; ಕೇಡನ್ನು ಬಗೆಯುವಿಕೆ, ಬಯಸುವಿಕೆ.
  • ಕೇಡನ್ನು, ಹಾನಿಯನ್ನು ಉಂಟುಮಾಡುವಿಕೆ.

  • malevolent
    ಗುಣವಾಚಕ
  • (ಇತರರಿಗೆ) ಕೇಡೆಣಿಸುವ; ಕೇಡನ್ನು – ಬಗೆಯುವ, ಬಯಸುವ.
  • ಕೇಡನ್ನು, ಹಾನಿಯನ್ನು ಉಂಟುಮಾಡುವ; ಕೆಡಕು ಮಾಡುವ; ಹಾನಿಕರ.

  • malevolently
    ಕ್ರಿಯಾವಿಶೇಷಣ
  • (ಇತರರಿಗೆ) ಕೇಡೆಣಿಸುವ – ಮನೋವೃತ್ತಿಯಿಂದ, ಉದ್ದೇಶದಿಂದ, ಬುದ್ಧಿಯಿಂದ.
  • ಕೇಡನ್ನು, ಹಾನಿಯನ್ನು – ಉಂಟುಮಾಡುವ ರೀತಿಯಲ್ಲಿ.

  • malfeasance
    ನಾಮವಾಚಕ
    (ನ್ಯಾಯಶಾಸ್ತ್ರ) ದುಷ್ಕೃತ್ಯ; ದುಷ್ಕರ್ಮ; ಅಕೃತ್ಯ ಮಾಡುವುದು (ಮುಖ್ಯವಾಗಿ ಅಧಿಕಾರದ ದುರುಪಯೋಗ, ದುರ್ವರ್ತನೆ).


    logo