forced landing ಬಲವಂತದ ಇಳಿತ; ಅನಿವಾರ್ಯದ ಅವರೋಹ; ವಿಮಾನ ಮೊದಲಾದವು ಅನಿವಾರ್ಯವಾಗಿ ಇಳಿಯುವುದು ಯಾ ಅವುಗಳನ್ನು ಬಲವಂತದಿಂದ ಇಳಿಸುವುದು.
ದಡಸೇರುವುದು; ದಡ ಮುಟ್ಟುವಿಕೆ.
ದಡ ಸೇರಿದ್ದು.
ಇಳಿದಾಣ; ವಿಮಾನ, ಹಡಗು, ಮೊದಲಾದವುಗಳಿಂದ ಇಳಿಯುವ ಸ್ಥಳ.
ಲ್ಯಾಂಡಿಂಗು:
ನಡುನಿಲ್ಲೆಡೆ; ಮಹಡಿ ಮೆಟ್ಟಲಿನ ಚೌಕಿ; ನಿಲ್ಲೆಡೆ ಮೆಟ್ಟಿಲು; ಒಂದರಿಂದೊಂದಕ್ಕೆ ಏರಿ ಹೋಗುವ ಮೆಟ್ಟಿಲು ಸಾಲುಗಳ ಮಧ್ಯೆ ಯಾ ಮೇಲೆ ಯಾ ಕೆಳಗಡೆ ಇರುವ ಜಗುಲಿ.
ಮಹಡಿ ಮೇಲಿನ ಕೋಣೆಗಳಿಗೆ ಒಯ್ಯುವ ನಡವೆ, ಓಣಿ.
landing-craft
ನಾಮವಾಚಕ
ಇಳಿಸು ದೋಣಿ; ಅವರೋಹ ದೋಣಿ; (ಮುಖ್ಯವಾಗಿ ಸೈನ್ಯ ಹಾಗೂ ಸಾಮಾನು ಸರಂಜಾಮುಗಳನ್ನು) ದಡಕ್ಕೆ ಒಯ್ಯುವ, ಸಾಗಿಸುವ ಹಲವಾರು ರೀತಿಯ ದೋಣಿ ಯಾ ನಾವೆಗಳಲ್ಲೊಂದು.
landing-gear
ನಾಮವಾಚಕ
ಇಳಿಗೇರು; ಅವರೋಹ ಗೇರು; ಲ್ಯಾಂಡಿಂಗ್ ಗೇರು; ವಿಮಾನವನ್ನು ನೆಲಕ್ಕಿಳಿಸಲು ಅದರ ತಳದಲ್ಲಿ ಒದಗಿಸಿರುವ, ಚಕ್ರವುಳ್ಳ ರಚನೆ [ಇದು ವಿಮಾನ ಇಳಿಯುವಾಗ ಮಾತ್ರ ಹೊರಬಂದು ಇಳಿತದ ಆಘಾತವನ್ನು ತಡೆದುಕೊಳ್ಳುತ್ತದೆ. ಉಳಿದ ಸಮಯದಲ್ಲಿ (ಹಾರಾಟದಲ್ಲಿ) ವಿಮಾನದ ಒಡಲೊಳಕ್ಕೆ ಸೇರುತ್ತದೆ].
landing-net
ನಾಮವಾಚಕ
ಇಳಿಸುಬಲೆ; ಹಿಡಿದ ದೊಡ್ಡ ಮೀನುಗಳನ್ನು ದಡಕ್ಕೆ ಒಯ್ಯುವ ಬಲೆ.