logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

egg-and-spoon race
ನಾಮವಾಚಕ
ಚಮಚೆ ಮೊಟ್ಟೆ ಓಟ; ಚಮಚೆ ತತ್ತಿ ಓಟ; ಚಮಚದಲ್ಲಿ ಮೊಟ್ಟೆಯನ್ನಿಟ್ಟುಕೊಂಡು ಓಡುವ ಪಂದ್ಯ.

egg-beater
ನಾಮವಾಚಕ
  • ಮೊಟ್ಟೆಮಂತು; ಮೊಟ್ಟೆಕಡೆಗೋಲು; ಮೊಟ್ಟೆಯ ಲೋಳೆಯನ್ನು ಕಲಸುವ ಯಾ ಕಡೆಯುವ ಸಾಧನ.
  • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹೆಲಿಕಾಪ್ಟರು.

  • egg-cosy
    ನಾಮವಾಚಕ
    ಮೊಟ್ಟೆ ಮುಚ್ಚಳ; ಬೇಯಿಸಿದ ಮೊಟ್ಟೆಯನ್ನು ತಿನ್ನುವವರೆಗೆ ಬಿಸಿಯಾಗಿಡಲು ಬಳಸುವ ಮುಚ್ಚಳ.

    egg-cup
    ನಾಮವಾಚಕ
    ಮೊಟ್ಟೆ ಕಪ್ಪು; ಮೊಟ್ಟೆ ಬಟ್ಟಲು; (ಚಿಪ್ಪುಸಹಿತ ಬೇಯಿಸಿದ) ಮೊಟ್ಟೆಯನ್ನು ಇಟ್ಟುಕೊಳ್ಳುವ ಬಟ್ಟಲು.

    egg-flip
    ನಾಮವಾಚಕ
    ಮೊಟ್ಟೆಯ ಪಾನ; ಬಿಸಿ ಯಾ ತಣ್ಣನೆ ಬಿಯರ್‍, ಸೈಡರ್‍, ವೈನ್‍, ಮೊದಲಾದ ಮದ್ಯಗಳಲ್ಲಿ ಮೊಟ್ಟೆ ಮತ್ತು ಸಾಮಾನ್ಯವಾಗಿ ಹಾಲನ್ನು ಬೆರೆಸಿದ ಪಾನ.

    egg-nog
    ನಾಮವಾಚಕ
    = egg-flip.

    egg-plant
    ನಾಮವಾಚಕ
    (ಸಸ್ಯವಿಜ್ಞಾನ)
  • ಬಿಳಿಬದನೆ (ಗಿಡ); ನೆಲಗುಳ್ಳ; ಸೋಲಾನಮ್‍ ಮೆಲಂಜಿನ ಕುಲದ, ಕಡುನೇರಳೆ ಬಣ್ಣದ ಯಾ ಕೆಲವೊಮ್ಮೆ ಬಿಳಿ ಯಾ ಹಳದಿ ಬಣ್ಣದ ಕಾಯಿ ಬಿಡುವ ಗಿಡ. Figure: egg-plant
  • ಈ ಗಿಡದ ಹಣ್ಣು ಯಾ ಕಾಯಿ.

  • egg-plum
    ನಾಮವಾಚಕ
    ಮೊಟ್ಟೆಪ್ಲಮ್‍; ಮೊಟ್ಟೆಯಾಕಾರದ, ಚಿಕ್ಕ ಹಳದಿ ಪ್ಲಮ್‍ ಹಣ್ಣು.

    egg-slice
    ನಾಮವಾಚಕ
    ಮಗಚುಕೈ; ಚುಚ್ಚುಗ; ಕಾವಲಿಯಿಂದ ಆಮ್ಲೆಟನ್ನು ತೆಗೆಯುವ ಸಾಧನ.

    egg-spoon
    ನಾಮವಾಚಕ
    ಮೊಟ್ಟೆ ಚಮಚ; ಬೇಯಿಸಿದ ಮೊಟ್ಟೆಯನ್ನು ತಿನ್ನಲು ಬಳಸುವ, ಸಣ್ಣ ಚಮಚ.


    logo