ದುರ್ಬಲ; ಶಕ್ತಿ ಗುಂದಿದ; ನಿಸ್ಸತ್ತ್ವ; ಸತ್ತ್ವಹೀನವಾದ: dead law ದುರ್ಬಲ ಕಾನೂನು.
ನಿಶ್ಚಲ; ಚಟುವಟಿಕೆಯಿಲ್ಲದ; ಕೆಲಸವಿಲ್ಲದ; ಚಲಿಸದ; ಸ್ತಬ್ಧ; ತಟಸ್ಥ; ನಿಷ್ಕ್ರಿಯ; ನಿಶ್ಚೇಷ್ಟ; wind falls dead ಗಾಳಿ ನಿಶ್ಚಲವಾಗುತ್ತದೆ.
(ಚಲನೆ ಯಾ ಕ್ರಿಯೆಯ ವಿಷಯದಲ್ಲಿ) ಥಟ್ಟನೆ, ಇದ್ದಕ್ಕಿದ್ದಂತೆ – ಆದ; ಹಠಾಟ್ ದಿಢೀರ್; ಏಕ್‍ದಂ: dead stop ಹಠಾತ್ ನಿಲ್ಲಿಸುವಿಕೆ.
ತೀರ; ಪೂರ; ಪೂರ್ತಿ; ಸಂಪೂರ್ಣ: a dead faint ಪೂರ್ಣ ಮೂರ್ಛೆ; ಹೆಣದಂತೆ ಬಿದ್ದಿರುವುದು. a dead calm ಸಂಪೂರ್ಣ ಸ್ತಬ್ಧತೆ; ನೀರವ ಶಾಂತಿ. dead silence ಪೂರ್ಣ ನಿಶ್ಯಬ್ದ; ವ್ಯತ್ಯಾಸವಿಲ್ಲದ; ನಿರ್ವಿಶೇಷ; ಒಂದೇ ಬಗೆಯ.
ನಿಷ್ಕೃಷ್ಟ; ನಿಖರ; ಖಚಿತ; ಕರಾರುವಾಕ್ಕಾದ ; ನಿಶ್ಚಿತ: the dead centre of a circle ವೃತ್ತದ ನಿಖರವಾದ ಕೇಂದ್ರ.