logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ball-proof
ಗುಣವಾಚಕ
ಗುಂಡುಹೊಗದ; ಗುಂಡಿಗೆ – ಸಗ್ಗದ, ಅಭೇದ್ಯವಾದ.

ballad
ನಾಮವಾಚಕ
  • ಪದ; ಹಾಡು; ಕಿರುಗೀತೆ; ಅಪ್ರಧಾನವಾದ ಪಕ್ಕವಾದ್ಯಗಳುಳ್ಳ, ಒಂದೇ ರಾಗದಲ್ಲಿ ಹಾಡುವ, ಅನೇಕ ಪಾದಗಳಿಂದ ಕೂಡಿದ, ಭಾವೋದ್ದೀಪಕವಾದ ಯಾ ರಮ್ಯವಾದ ಯಾ ಕಥಾರೂಪವಾದ ರಚನೆ.
  • ಲಾವಣಿ; ಹಾಡುಕಥೆ; ನಾಡಪದ; ಜನಪ್ರಿಯ ಕಥೆಯನ್ನು ಸಣ್ಣ ಸಣ್ಣ ಪದ್ಯಗಳಲ್ಲಿ ಹೇಳುವ ಕವಿತೆ.

  • ballad metre
    ನಾಮವಾಚಕ
    = common metre.

    ballad stanza
    ನಾಮವಾಚಕ
    (ಒಂದು ಮತ್ತು ಮೂರನೇ ಪಾದಗಳಲ್ಲಿ ನಾಲ್ಕು ಗಣಗಳು, ಎರಡು ಮತ್ತು ನಾಲ್ಕನೇ ಪಾದಗಳಲ್ಲಿ ಮೂರು ಗಗಳುಳ್ಳ ಮತ್ತು ಅಂತ್ಯಪ್ರಾಸವಿರುವ) ಚೌಪದಿ; ಲಾವಣಿ ವೃತ್ತ.

    ballad-monger
    ನಾಮವಾಚಕ
  • (ಸಾಮಾನ್ಯವಾಗಿ, ಹೀನಾರ್ಥಕ ಪ್ರಯೋಗ) ಲಾವಣಿಕಾರ; ಲಾವಣಿ ಕಟ್ಟುವವನು ಯಾ ಲಾವಣಿ ವ್ಯಾಪಾರಿ.
  • ಕೀಳು ಮಟ್ಟದ ಕವಿ.

  • ballade
    ನಾಮವಾಚಕ
  • ಬಲಾಡ್‍; ಒಂದು ಪದ್ಯ ಜಾತಿ; ಒಂದೇ ಅಂತ್ಯಪಲ್ಲವಿ ಮತ್ತು ಮುಕ್ತಾಯ ಪದ್ಯಗಳುಳ್ಳ, ಏಳು ಯಾ ಎಂಟು ಯಾ ಹತ್ತು ಸಾಲುಗಳುಳ್ಳ, ಒಂದು ಯಾ ಒಂದಕ್ಕಿಂತ ಹೆಚ್ಚು ಪದ್ಯತ್ರಯಗಳಿರುವ ಕವಿತೆ.
  • (ಸಾಮಾನ್ಯವಾಗಿ) ಏಳು ಯಾ ಎಂಟು ಸಾಲುಗಳ ಪದ್ಯಗಳುಳ್ಳ ಕವಿತೆ.
  • (ಸಂಗೀತ) (ಮುಖ್ಯವಾಗಿ ಸೋಲೋ, ಪಿಯಾನೋ, ಆರ್ಕೆಸ್ಟ್ರಾಗಳಿಗಾಗಿ ಹಾಡುವ) ಸ್ವತಂತ್ರ ಶೈಲಿಯ ರೊಮ್ಯಾಂಟಿಕ್‍ ಗೀತೆ.

  • ballade royal
    ನಾಮವಾಚಕ
    ರಾಜಲಾವಣಿ; ಹತ್ತು ಗಣಗಳ ಎಳೋ ಎಂಟೋ ಸಾಲುಗಳುಳ್ಳ ಪದ್ಯಜಾತಿ.

    balladeer
    ನಾಮವಾಚಕ
    ಲಾವಣಿ ಗಾಯಕ; ಲಾವಣಿ ಹಾಡುವವನು.

    balladist
    ನಾಮವಾಚಕ
    ಲಾವಣಿಕಾರ; ಲಾವಣಿ; ಕವಿ; ಲಾವಣಿ ರಚಿಸುವವನು.

    balladize
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಲಾವಣಿ ಕಟ್ಟು; ಲಾವಣಿಯಾಗಿ ಮಾಡು ಯಾ ರಚಿಸು. ಲಾವಣಿ, ಪದ – ಬರೆ.


    logo