ಮೆಚ್ಚಿಕೆ; ಅನುಮೋದನೆ; ಅಂಗೀಕಾರ: the theory found wide acceptance ಆ ಸಿದ್ಧಾಂತಕ್ಕೆ ವ್ಯಾಪಕವಾದ ಅನುಮೋದನೆ ದೊರೆಯಿತು.
ಸಹಿಸಿಕೊಳ್ಳುವಿಕೆ; ತಾಳಿಕೊಳ್ಳುವುದು.
(ಬಹುವಚನದಲ್ಲಿ) (ಬ್ರಿಟಿಷ್ ಪ್ರಯೋಗ) (ಕುದುರೆ ಪಂದ್ಯದಲ್ಲಿ ಕುದುರೆಗಳ ಬಲಾಬಲಗಳನ್ನು ಸಮಗೊಳಿಸಲು ಬಲಿಷ್ಠ ಕುದುರೆಗಳ ಮೇಲೆ ಹೆಚ್ಚು ಭಾರ ಹೊರಿಸುವುದಕ್ಕಾಗಿ ಮಾಲೀಕರಿಂದ ಯಾ ಅವರ ಏಜಂಟರಿಂದ ಪಡೆದ) ಲಿಖಿತ ಒಪ್ಪಿಗೆಗಳು; ಒಪ್ಪಿಗೆ ಕರಾರುಗಳು.
acceptant
ಗುಣವಾಚಕ
ಪದಗುಚ್ಛ
(ಕೊಟ್ಟದ್ದನ್ನು) ಮನಃಪೂರ್ವಕವಾಗಿ, ಒಪ್ಪಿಗೆಯಿಂದ–ತೆಗೆದುಕೊಳ್ಳುವ, ಸ್ವೀಕರಿಸುವ.acceptant of = acceptant.
acceptation
ನಾಮವಾಚಕ
ರೂಢಾರ್ಥ; ಸಾಮಾನ್ಯವಾಗಿ ಒಂದು ಪದದ ಅಂಗೀಕೃತವಾದ ಅರ್ಥ.
=acceptance(1).
accepted
ಗುಣವಾಚಕ
ಒಪ್ಪಿದ; ಸ್ವೀಕೃತ; ಅಂಗೀಕೃತ.
ಬಳಕೆಯ; ಅಂಗೀಕೃತ; ರೂಢ: the accepted pronunciation ಅಂಗೀಕೃತ ಉಚ್ಚಾರಣೆ.
acceptedly
ಕ್ರಿಯಾವಿಶೇಷಣ
ಅಂಗೀಕರಿಸಿದಂತೆ.
ರೂಢವಾಗಿ.
accepter
ನಾಮವಾಚಕ
ಪಡೆಯುವಾತ; ಅಂಗೀಕರ್ತ; ಸ್ವೀಕರ್ತ.
acceptor
ನಾಮವಾಚಕ
ಪರಿಗ್ರಾಹಕ; ಹುಂಡಿಗ್ರಾಹಕ; ಹುಂಡಿಗೆ ಹಣ ಕೊಡಲು ಒಪ್ಪಿಕೊಂಡವನು.
(ರಸಾಯನವಿಜ್ಞಾನ) ಆದಾತ; ಒಂದು ಪದಾರ್ಥದೊಡನೆ ಯಾ ಒಂದು ಕಣದೊಡನೆ–ಮುಖ್ಯವಾಗಿ ಒಂದು ಉಪಪರವಾಣು ಕಣದೊಡನೆ–ಸಂಯೋಗವಾಗಬಲ್ಲ ಪದಾರ್ಥ ಯಾ ಕಣ: wool is a dye acceptor ಉಣ್ಣೆಯು ವರ್ಣದ್ರವ್ಯದ ಆದಾತ. ammonia is a proton acceptor ಅಮೋನಿಯವು ಪ್ರೊಟಾನ್ ಆದಾತ.
(ದೂರ ಸಂಪರ್ಕ) ಪರಿಗ್ರಾಹಕ; ನಿರ್ದಿಷ್ಟ ಆವರ್ತನದ ಸಂಜ್ಞೆಯನ್ನು ಗ್ರಹಿಸುವ ಸಾಮರ್ಥ್ಯವುಳ್ಳ ಮಂಡಲ.
access
ನಾಮವಾಚಕ
ಪದಗುಚ್ಛ
(ಪ್ರವೇಶಕ್ಕೆ, ತಲಪುವುದಕ್ಕೆ) ಹಾದಿ; ದಾರಿ; ಮಾರ್ಗ; ಬಾಟೆ: the new road gives access to the sea ಹೊಸ ರಸ್ತೆಯು ಸಮುದ್ರಕ್ಕೆ ಪ್ರವೇಶಮಾರ್ಗ ಒದಗಿಸುತ್ತದೆ.
ಸೇರಿಕೆ; ಕೂಡಿಕೆ; ಸಂಕಲನ: sudden access of wealth ಇದ್ದಕ್ಕಿದ್ದಂತೆ ಆದ ಐಶ್ವರ್ಯದ ಸೇರಿಕೆ.
ಪ್ರವೇಶದ–ಅಧಿಕಾರ, ಹಕ್ಕು, ಅವಕಾಶ, ಅಪ್ಪಣೆ, ಅನುಮತಿ: access to the prime minister ಪ್ರಧಾನಿಯವರ ಬಳಿಗೆ ಹೋಗಲು ಅನುಮತಿ. access to good books ಒಳ್ಳೆಯ ಪುಸ್ತಕಗಳನ್ನು ಓದಲು ಅವಕಾಶ.
ಸುಲಭಗಮ್ಯತೆ; ಸರ್ವಸುಲಭವಾಗಿರುವಿಕೆ; ಯಾರು ಬೇಕಾದರೂ ಹತ್ತಿರ ಬರಲು, ಸಮೀಪಿಸಲು ಅವಕಾಶ ಕೊಡುವ ಗುಣ ಯಾ ಅವಕಾಶ ಕೊಡುವಿಕೆ.