(ಗಣಕಯಂತ್ರಗಳ ವಿಷಯದಲ್ಲಿ) ಗ್ರಾಹಕಾಲ; ಶೇಖರಿಸಿದ ಸಂಗ್ರಹದಿಂದ ವಿಷಯವೊಂದನ್ನು ಕೇಳಿದ ಸಮಯಕ್ಕೂ ಆ ವಿಷಯವನ್ನು ಒದಗಿಸಿದ ಸಮಯಕ್ಕೂ ನಡುವೆ ತೆಗೆದುಕೊಂಡ ಕಾಲ.
acciaccatura
ನಾಮವಾಚಕ
(ಸಂಗೀತ) (ಎತ್ತುಗಡೆಯ) ಹುಸಿ ಸ್ವರ; ಗೀತದ ಎತ್ತುಗಡೆಗಿಂತ ಮುಂಚೆ ಹಾಡುವ ಯಾ ನುಡಿಸುವ, ತಾಳದ ಲೆಕ್ಕಕ್ಕೆ ಸೇರಿಸದ ಸ್ವರ.
accidence
ನಾಮವಾಚಕ
ವಿಭಕ್ತಿ ಪ್ರಕರಣ; ವಿಭಕ್ತಿ ಪ್ರತ್ಯಯಗಳನ್ನೂ ಆಖ್ಯಾತ ಪ್ರತ್ಯಯಗಳನ್ನೂ ವಿವರಿಸುವ ವ್ಯಾಕರಣ ಭಾಗ.
(ಯಾವುದೇ ವಿಷಯದ) ಮೂಲಾಂಶಗಳು; ಮೂಲಸೂತ್ರಗಳು.
accident
ನಾಮವಾಚಕ
ಪದಗುಚ್ಛ
ಆಕಸ್ಮಿಕ; ಅನಿರೀಕ್ಷಿತ ಘಟನೆ; ಯಾದೃಚ್ಛಿಕ ಘಟನೆ.
ಅಪಘಾತ; ವಿಪತ್ತು; ಪ್ರಮಾದ.
ಅದೃಷ್ಟ; ದೈವಯೋಗ.
(ಭೂದೃಶ್ಯ ಮೊದಲಾದವುಗಳ ಮೇಲ್ಮೈ ವಿಷಯದಲ್ಲಿ) ಕ್ರಮರಹಿತ–ವಿನ್ಯಾಸ, ರಚನೆ; ಉಬ್ಬು ತಗ್ಗು: accidents of the moon ಚಂದ್ರನ ಮೇಲ್ಮೈಯ ಉಬ್ಬು ತಗ್ಗು.
ಆಗಂತುಕ ಲಕ್ಷಣ; ಪದಾರ್ಥವೊಂದರ ಸ್ವರೂಪದ ಭಾಗವಲ್ಲವೆಂದು ಭಾವಿತವಾಗಿರುವ ಅಂಶ ಯಾ ಗುಣ, ಉದಾಹರಣೆಗೆ ಪ್ರಭುಭೋಜನ ಕೂಟದಲ್ಲಿ ಪ್ರಸಾದವಾಗಿ ನೀಡುವ ಬ್ರೆಡ್ಡು ಮತ್ತು ಮದ್ಯ ಏಸುಕ್ರಿಸ್ತನ ದೇಹ ಮತ್ತು ರಕ್ತವಾಗಿ ರೂಪಾಂತರಗೊಂಡಾಗ ಅವುಗಳಲ್ಲಿ ಉಳಿದುಕೊಂಡಿರುವ ಭೌತಿಕದ್ರವ್ಯದ ಅಂಶಗಳು ಯಾ ಲಕ್ಷಣಗಳು.
ಗೌಣಾಂಶ; ಅಮುಖ್ಯಾಂಶ; ಅಪ್ರಧಾನಾಂಶ.
ದುರದೃಷ್ಟಕರ ಘಟನೆ; ದುರ್ಘಟನೆ; ಮುಖ್ಯವಾಗಿ ಹಾನಿಯನ್ನು ಯಾ ನಷ್ಟವನ್ನು ಉಂಟುಮಾಡುವ ಘಟನೆ.
(ಸಂಗೀತ) ಸ್ವರ ನಕ್ಷೆಯಲ್ಲಿ ಮಂದ್ರ, ಮಧ್ಯಮ, ತಾರಸ್ಥಾಯಿಗಳ ಭೇದವನ್ನು ಸೂಚಿಸುವ ಯಾ ಸೂಚಿಸಲು ಹಾಕುವ ಚಿಹ್ನೆಯ: accidental sharp ತಾರಚಿಹ್ನೆ. accidental flat ಮಂದ್ರಚಿಹ್ನೆ. accidental natural ಮಧ್ಯಮ ಚಿಹ್ನೆ.