(ವ್ಯಕ್ತಿಯ ಯಾ ಕಾರ್ಯದ ವಿಷಯದಲ್ಲಿ) ದ್ವೇಷ ಹುಟ್ಟಿಸುವ ಲಕ್ಷಣ; ಹೇವರಿಕೆ ಹುಟ್ಟಿಸುವಂತಿರುವಿಕೆ; ಜುಗುಪ್ಸೆಯುಂಟುಮಾಡುವಂತಿರುವುದು; ಅಸಹ್ಯಕರವಾಗಿರುವುದು: exposed me to odium ನನ್ನನ್ನು (ಜನರ) ಹೇವರಿಕೆಗೆ, ದ್ವೇಷಕ್ಕೆ ಗುರಿ ಮಾಡಿತು. the odium of the transaction ಆ ವ್ಯವಹಾರದ ಹೇಸಿಕೆ, ಅಸಹ್ಯಕರವಾದ ಸ್ವರೂಪ.
odium theologicum
ನಾಮವಾಚಕ
ಮತಧರ್ಮೀಯ ದ್ವೇಷ, ಕಟುತ್ವ; ಧರ್ಮವನ್ನು ಕುರಿತ ವಾದವಿವಾದದಿಂದ ಹುಟ್ಟಿದ ಯಾ ಅಂಥ ವಾದವಿವಾದದ ಲಕ್ಷಣವಾದ ಕಹಿ ಮನೋಭಾವ ಮತ್ತು ವರ್ತನೆ.