logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

male
ಗುಣವಾಚಕ ಪದಗುಚ್ಛ
  • (ಮನುಷ್ಯ, ಪ್ರಾಣಿ, ಸಸ್ಯಗಳ ವಿಷಯದಲ್ಲಿ) ಗಂಡು; ಪುರುಷ; ಗಂಡಿನ: male child ಗಂಡು ಮಗು. male dog ಗಂಡುನಾಯಿ.
  • ಗಂಡಸಿನ ಯಾ ಗಂಡುಪ್ರಾಣಿಯ ಯಾ ಗಂಡು ಸಸ್ಯದ: the male sex ಪುರುಷವರ್ಗ. a male (-voice) choir ಪುರುಷ(ದನಿಗಳ) ಗಾಯಕ ವೃಂದ.
  • (ಯಂತ್ರಭಾಗಗಳ ವಿಷಯದಲ್ಲಿ) ಗಂಡು ಭಾಗದ; ಪುರುಷಭಾಗದ; ರಂಧ್ರದಂಥ ಭಾಗಕ್ಕೆ ಹೋಗುವಂತೆ ಮಾಡಿದ ಬೆಣೆಯಂಥ ಭಾಗದ: male screw ಗಂಡು ತಿರುಪು.
  • (ಸಸ್ಯಗಳ ಯಾ ಅವುಗಳ ಅಂಗಗಳ ವಿಷಯದಲ್ಲಿ) ಗಂಡು:
    1. ಬಣ್ಣ, ಆಕಾರ, ಮೊದಲಾದವುಗಳಿಂದಾಗಿ ಗಂಡು ಎಂದು ಭಾವಿಸಲಾದ.
    2. ರೇತಾಣುಗಳನ್ನೊದಗಿಸಿ ಗರ್ಭಾಧಾನ ಮಾಡಬಲ್ಲ.

  • male
    ನಾಮವಾಚಕ
  • ಗಂಡಸು; ಪುರುಷ.
  • ಗಂಡು ಪ್ರಾಣಿ.

  • male fern
    ನಾಮವಾಚಕ
    ಗಂಡು ಜರೀಗಿಡ; ಡ್ರೈಯಾಪ್ಟರಿಸ್‍ ಹಿಲಿಕ್ಸ್‍ಮಸ್‍ ಕುಲದ ಒಂದು ಬಗೆಯ ಜರೀಗಿಡ.

    male menopause
    ನಾಮವಾಚಕ
    ಪುರುಷ ಋತುಬಂಧ; ಪುರುಷತ್ವ ಹಾನಿ, ಹೀನತೆ; ಗಂಡಸುತನದ ಸಂಧಿ ಕಾಲ; ನಡುವಯಸ್ಸಿನಲ್ಲಿ ಗಂಡಸರನ್ನು ಬಾಧಿಸುವುದೆನ್ನಲಾದ, ಪುರುಷತ್ವ ಯಾ ಗಂಡಸುತನ, ಆತ್ಮವಿಶ್ವಾಸ, ಮೊದಲಾದವುಗಳು ಕುಂದಿದ ವಿಷಮ ಪರಿಸ್ಥಿತಿ.

    male rhyme
    ನಾಮವಾಚಕ
    = masculine rhyme.

    malediction
    ನಾಮವಾಚಕ
  • ಶಾಪ.
  • ಶಾಪೋಚ್ಚಾರ; ಶಾಪ ಹಾಕುವುದು; ಶಾಪವನ್ನು ಉಚ್ಚರಿಸುವುದು, ನುಡಿಯುವುದು.

  • maledictive
    ಗುಣವಾಚಕ
    = maledictory.

    maledictory
    ಗುಣವಾಚಕ
    ಶಾಪಸ್ವರೂಪದ; ಶಾಪಾತ್ಮಕವಾದ.

    malefaction
    ನಾಮವಾಚಕ
  • ಕೇಡಿಗತನ; ದುಷ್ಕೃತ್ಯ.
  • ಕೆಡಕು; ಉಪದ್ರವ; ಕೇಡು; ಅಪಕಾರ.

  • malefactor
    ನಾಮವಾಚಕ
  • ಕೇಡಿಗ; ಉಪದ್ರವಿ; ಕೇಡುಮಾಡುವವನು; ದುಷ್ಕರ್ಮಿ.
  • ಅಪರಾಧಿ; ತಕ್ಸೀರುದಾರ.


  • logo