logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

landaulette
ನಾಮವಾಚಕ
= landaulet.

landdrost
ನಾಮವಾಚಕ
(ಚರಿತ್ರೆ) (ದಕ್ಷಿಣಆಹ್ರಿಕದ ಹಳ್ಳಿಗಾಡಿನ) ಮ್ಯಾಜಿಸ್ಟ್ರೇಟು; ನ್ಯಾಯಾಧೀಶ.

landed
ಗುಣವಾಚಕ
  • ಬಂದು – ಇಳಿದ, ಸೇರಿದ, ತಲುಪಿದ, ಮುಟ್ಟಿದ: newly-landed ಆಗತಾನೇ ಬಂದಿಳಿದ; ಹೊಸದಾಗಿ ಬಂದು ತಲುಪಿದ.
  • ದಡ – ತಲುಪಿದ, ಸೇರಿದ, ಮುಟ್ಟಿದ: newly-landed ಹೊಸದಾಗಿ ದಡ ತಲುಪಿದ.

  • landed
    ಗುಣವಾಚಕ ಪದಗುಚ್ಛ
  • ಭೂಸ್ವಾಮ್ಯವುಳ್ಳ; ಭೂಮಿಯ ಹಕ್ಕನ್ನು ಪಡೆದಿರುವ: landed gentry ಭೂಸ್ವಾಮ್ಯವುಳ್ಳ ಕುಲೀನರು.
  • ಭೂಮಿ ಕಾಣಿಯುಳ್ಳ; ಜಮೀನುಳ್ಳ; ಭೂಸ್ವತ್ತುಳ್ಳ: landed property ಭೂಸ್ವತ್ತು.

  • lander
    ನಾಮವಾಚಕ
  • ದಡ ಸೇರುವವನು ಯಾ ನೆಲ ತಲುಪುವವನು.
  • ಗ್ರಹನೌಕೆ; ಗ್ರಹದ ಮೇಲೆ ಹೋಗಿ ಇಳಿದ ಯಾ ಇಳಿಯುವಂತೆ ಯೋಜಿಸಿದ ಗಗನನೌಕೆ.

  • Lander
    ನಾಮವಾಚಕ
    3Land ಪದದ ಬವ.

    landfall
    ನಾಮವಾಚಕ ಪದಗುಚ್ಛ
  • (ನೌಕಾಯಾನ)
    1. ಕರೆಗಾಣ್ಕೆ; ನೆಲಗಾಣ್ಕೆ; ತೀರದರ್ಶನ; ಭೂದರ್ಶನ; ಕಡಲ ಪ್ರಯಾಣದಲ್ಲಿ ಯಾ ವಾಯುಯಾನದಲ್ಲಿ ಮುಖ್ಯವಾಗಿ ಮೊದಲನೆಯ ಸಲ ನೆಲ ಕಾಣುವುದು.
    2. ಭೂಸಮೀಪನ; ತೀರ ಸಮೀಪನ; ಹಡಗು ದಡವನ್ನು ಮುಟ್ಟುವುದಕ್ಕಿಂತ, ವಿಮಾನ ನೆಲ ಮುಟ್ಟುವುದಕ್ಕಿಂತ ಮುಂಚಿನ ಹಂತ.
  • ಭೂ ಕುಸಿತ; ನೆಲಕುಸಿತ.

  • landfill
    ನಾಮವಾಚಕ
    ನೆಲಭರ್ತಿ; ಭೂಭರ್ತಿ;
  • ಭೂಮಿಯ ಒಳಗೆ ಕೆಲಸಕ್ಕೆ ಬಾರದ, ಬೇಡದ ವಸ್ತುಗಳನ್ನು ಹೂತುಹಾಕುವುದು.
  • ಹೀಗೆ ಹೂತುಹಾಕಿದ ವಸ್ತು.

  • landgrave
    ನಾಮವಾಚಕ
    (ಸ್ತ್ರೀಲಿಂಗ landgravine ಉಚ್ಚಾರಣೆ ಲ್ಯಾನ್ಡ್‍ಗ್ರವೀನ್‍). (ಚರಿತ್ರೆ) ಲ್ಯಾಂಡ್‍ಗ್ರೇವ್‍:
  • ಒಂದು ಪ್ರದೇಶದ ಮೇಲೆ ಅಧಿಕಾರವ್ಯಾಪ್ತಿಯುಳ್ಳ ಶ್ರೀಮಂತ, ‘ಕೌಂಟ್‍’.
  • ಕೆಲವು ಜರ್ಮನ್‍ ಕುಲೀನ ವರ್ಗದವರ ಪದವಿ.

  • landgraviate
    ನಾಮವಾಚಕ
    (ಚರಿತ್ರೆ) ‘ಲ್ಯಾಂಡ್‍ಗ್ರೇವ್‍’ನ ಸ್ಥಾನ, ಅಧಿಕಾರವ್ಯಾಪ್ತಿ ಯಾ ಪ್ರಾಂತ.


    logo