logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

immateriality
ನಾಮವಾಚಕ
  • ಅದ್ರವ್ಯತೆ; ಅಶರೀರತೆ.
  • ಅಮುಖ್ಯತೆ; ಅಪ್ರಾಧಾನ್ಯ.

  • immaterialize
    ಸಕರ್ಮಕ ಕ್ರಿಯಾಪದ
    ಅದ್ರವ್ಯವಾಗಿಸು; ಅಮೂರ್ತಗೊಳಿಸು.

    immature
    ಗುಣವಾಚಕ
    ಬಲಿತಿಲ್ಲದ; ಬೆಳೆದಿಲ್ಲದ; ಅಪಕ್ವ: the immature minds of young children ಎಳೆಯ ಮಕ್ಕಳ ಅಪಕ್ವ ಮನಸ್ಸು.

    immaturity
    ನಾಮವಾಚಕ
    ಬಲಿತಿಲ್ಲದಿರುವಿಕೆ; ಅಪಕ್ವತೆ.

    immeasurability
    ನಾಮವಾಚಕ
    ಅಮೇಯತೆ; ಅಪಾರತೆ; ಅಳೆಯಲಾಗದಿರುವಿಕೆ.

    immeasurable
    ಗುಣವಾಚಕ
  • ಅಮೇಯ; ಅಪಾರ, ಅಪರಿಮಿತ; ಅಪರಿಮೇಯ; ಆಳವಿಲ್ಲದ; ಅಳೆಯಲಾಗದ; ಅಳತೆಗೆ – ಈರಿದ, ಎಟುಕದ.
  • ತೀರ; ಭಾರಿ; ವಿಪರೀತ.

  • immeasurableness
    ನಾಮವಾಚಕ
    = immeasurability.

    immeasurably
    ಕ್ರಿಯಾವಿಶೇಷಣ
  • ಅಳೆಯಲಾಗದಷ್ಟು; ಅಪಾರವಾಗಿ; ಅಪರಿಮಿತವಾಗಿ.
  • ವಿಪರೀತವಾಗಿ; ಭಾರಿಯಾಗಿ.

  • immediacy
    ನಾಮವಾಚಕ
  • ಪ್ರತ್ಯಕ್ಷವಾಗಿರುವಿಕೆ; ನೇರಸಂಬಂಧ; ನೇರತನ; ನೇರವಾಗಿರುವುದು; ಸಾಕ್ಷಾತ್ತಾಗಿರುವುದು; ಮಧ್ಯವರ್ತಿಯಿಲ್ಲದ್ದು.
  • (ತರ್ಕಶಾಸ್ತ್ರ) ಅವ್ಯವಹಿತತ್ವ; ಮಧ್ಯಮಪದದ ವ್ಯವಧಾನವಿಲ್ಲದೆ ಒಂದೇ ಪ್ರತಿಜ್ಞೆಯಿಂದ ಅನುಮಾನ ಪಡೆಯುವ ವಿಧಾನ.
  • (ತತ್ತ್ವಶಾಸ್ತ್ರ) (ಅರಿಯಬೇಕಾದ ವಿಷಯದ ಯಾ ವಸ್ತುವಿನ) ಪ್ರತ್ಯಕ್ಷತೆ; ತರ್ಕ ಮೊದಲಾದ ಯಾವ ಮಧ್ಯವರ್ತಿಗಳೂ ಇಲ್ಲದೆ ನೇರವಾಗಿ ಮನಸ್ಸಿಗೆ ಗೋಚರವಾಗುವ ಸ್ಥಿತಿ.
  • ಒಡನೆಯೇ ಸಂಭವಿಸುವಿಕೆ; ಕೂಡಲೇ ಆಗುವಿಕೆ.

  • immediate
    ಗುಣವಾಚಕ
  • (ವ್ಯಕ್ತಿ ಯಾ ವಸ್ತುವಿಗೆ ಮತ್ತೊಂದರೊಡನೆ ಇರುವ ಸಂಬಂಧದ ವಿಷಯದಲ್ಲಿ) ನೇರ; ಪ್ರತ್ಯಕ್ಷ; ಸಾಕ್ಷಾತ್ತಾದ; ಮಧ್ಯವರ್ತಿಯಿಲ್ಲದ; ನಡುವೆ ಏನೂ ಇಲ್ಲದ; ಅವ್ಯವಹಿತ: the immediate cause of death ಸಾವಿನ ಪ್ರತ್ಯಕ್ಷ ಕಾರಣ.
  • (ಸಂಬಂಧದ ಯಾ ಕ್ರಿಯೆಯ ವಿಷಯದಲ್ಲಿ) ನೇರವಾದ; ಸಾಕ್ಷಾತ್‍; ಮಧ್ಯವರ್ತಿಯಿಲ್ಲದ; ಸಮಕ್ಷ: they rest upon the immediate testimony of consciousness ಅವು ಚೇತನದ ನೇರವಾದ ರುಜುವಾತನ್ನು ಅವಲಂಬಿಸಿವೆ.
  • ಅತಿ ಸಮೀಪದ; ಅತ್ಯಂತ ನಿಕಟವಾದ; ನೆರೆಯ; ಮಗ್ಗುಲಿನ; ಪಕ್ಕದ: my immediate neighbour ನನ್ನ ಮಗ್ಗುಲಿನ ನೆರೆಯವನು.
  • ತತ್‍ಕ್ಷಣದ; ತುರ್ತಾದ; ಜರೂರಾದ; ಒಡನೆಯೇ ಸಂಭವಿಸುವ; ಕೂಡಲೇ ನಡೆಯುವ; ತಡವಿಲ್ಲದ: an immediate reply ತಡವಿಲ್ಲದ ಉತ್ತರ; ಒಡನೆಯೇ ಕೊಟ್ಟ ಜವಾಬು. our immediate concern was to get him to hospital ಅವನನ್ನು ಆಸ್ಪತ್ರೆಗೆ ಒಯ್ಯುವುದು ನಮ್ಮ ತುರ್ತು ಕೆಲಸವಾಗಿತ್ತು.
  • (ಜ್ಞಾನದ ವಿಷಯದಲ್ಲಿ) ನೇರವಾದ; ಪ್ರತ್ಯಕ್ಷವಾದ; ಅಪರೋಕ್ಷ; ತರ್ಕದ ನೆರವಿಲ್ಲದೆ ಪಡೆದ.


  • logo