logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

egad
ಭಾವಸೂಚಕ ಅವ್ಯಯ
ದೇವರಾಣೆ! ಅಯ್ಯೋ ದೇವರೇ!

egalitarian
ಗುಣವಾಚಕ
ಸಮಾನತಾವಾದದ; ಮಾನವಕೋಟಿಯ ಸಮಾನತೆಯಲ್ಲಿ ನಂಬಿಕೆಯಿರುವ.

egalitarian
ನಾಮವಾಚಕ
ಸಮಾನತಾವಾದಿ; ಮನುಷ್ಯರ ಸಮಾನತೆಯಲ್ಲಿ ನಂಬಿಕೆ ಇರುವವನು; ಅವಕಾಶಗಳು ಮತ್ತು ಹಕ್ಕುಗಳು ಮಾನವರೆಲ್ಲರಿಗೂ ಸಮಾನವಾಗಿರಬೇಕೆಂದು ನಂಬಿರುವವನು.

egalitarianism
ನಾಮವಾಚಕ
ಸಮಾನತಾಸಿದ್ಧಾಂತ; ಸಮಾನತಾವಾದ; ಹಕ್ಕು, ಅವಕಾಶ, ಮೊದಲಾದವುಗಳು ಮಾನವರೆಲ್ಲರಿಗೂ ಸಮಾನವಾಗಿರಬೇಕೆನ್ನುವುದರಲ್ಲಿ ನಂಬಿಕೆ ಇಟ್ಟಿರುವುದು.

Egeria
ನಾಮವಾಚಕ
  • ಮನೆದೇವರು; ಹದೇವತೆ; ಕುಲದೇವತೆ; ರಕ್ಷಕದೇವತೆ.
  • (ಒಬ್ಬನ) ರಕ್ಷಕಿ; ಪೋಷಣೆ ಮತ್ತು ಬುದ್ಧಿವಾದ ಕೊಡುವವಳು.

  • egg
    ನಾಮವಾಚಕ ಪದಗುಚ್ಛ ನುಡಿಗಟ್ಟು
  • (ಹಕ್ಕಿ, ಆಮೆ, ಸರೀಪ, ಮೊದಲಾದವುಗಳ) ಮೊಟ್ಟೆ; ತತ್ತಿ; ಅಂಡ; ಗುಡ್ಡು.
  • (ಮುಖ್ಯವಾಗಿ ತಿನ್ನಲು ಬಳಸುವ) ಕೋಳಿಯ ಮೊಟ್ಟೆ.
  • (ಪ್ರಾಣಿವಿಜ್ಞಾನ) ಸ್ತ್ರೀ ಅಂಡಾಣು.
  • (ಜನಸಾಮಾನ್ಯ ಪ್ರಯೋಗದಲ್ಲಿ ಇರುವೆ ಮೊದಲಾದವುಗಳ) ಪೊರೆಹುಳು; ಕೋಶಹುಳು.
  • (ಅಶಿಷ್ಟ) ವ್ಯಕ್ತಿ; ಆಸಾಮಿ; ಗಿರಾಕಿ; ಇಸಮು: tough egg ಜಗ್ಗದ ವ್ಯಕ್ತಿ.
  • (ಅಶಿಷ್ಟ) ವಸ್ತು; ಪದಾರ್ಥ.
  • (ಅಶಿಷ್ಟ) ಸ್ಫೋಟಕ; ಬಾಂಬು ಯಾ ನೆಲದಡಿಯ ಸಿಡಿಗುಂಡು.

  • egg
    ಸಕರ್ಮಕ ಕ್ರಿಯಾಪದ ಪದಗುಚ್ಛ
    (ಒಬ್ಬನನ್ನು ಒಂದು ಕೆಲಸಕ್ಕೆ) ಹುರಿದುಂಬಿಸು; ಪ್ರೇರಿಸು; ಪ್ರಚೋದಿಸು; ಪ್ರೇರೇಪಿಸು; ಪ್ರೋತ್ಸಾಹಿಸು; ಉಬ್ಬಿಸು. egg on = 2egg.

    egg albumin
    ನಾಮವಾಚಕ
    ಮೊಟ್ಟೆ ಆಲ್ಬುಮಿನ್‍; ಮೊಟ್ಟೆಯ ಬಿಳಿಯ ಭಾಗದಲ್ಲಿರುವ ಆಲ್ಬುಮಿನ್‍ ವರ್ಗದ ಪ್ರೋಟಿನು.

    egg cell
    ನಾಮವಾಚಕ
    ಅಂಡಾಣು; ಸಂತಾನೋತ್ಪತ್ತಿಗಾಗಿ ತಾಯಿ ಒದಗಿಸುವ (ತಂದೆಯಿಂದ ಒದಗುವ ರೇತ್ರಾಣುವಿನೊಂದಿಗೆ ಮಿಲನಗೊಳ್ಳುವ) ಜೀವಕೋಶ.

    egg custard
    ನಾಮವಾಚಕ
    = custard(1).


    logo