logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

de-ice
ಸಕರ್ಮಕ ಕ್ರಿಯಾಪದ
ಹಿಮ ಕಳೆ; ಮಂಜುಗಡ್ಡೆ ತೆಗೆ; ವಿಮನದ ರೆಕ್ಕೆ, ಗಾಳಿತಡೆ, ಮೊದಲಾದವುಗಳ ಮೇಲೆ ಘನೀಕರಣರೋಧಕದಿಂದ ಯಾ ಬೇರೆ ವಿಧಾನದಿಂದ ಮಂಜುಗಡ್ಡೆ ಕಟ್ಟಿಕೊಳ್ಳದಂತೆ ಮಾಡು.

de-icer
ನಾಮವಾಚಕ
ಹಿಮಗಳೆಕ; ಹಿಮನಿವಾರಕ.

de-oxygenate
ಸಕರ್ಮಕ ಕ್ರಿಯಾಪದ
ನಿರಾಕ್ಸಿಜನೀಕರಿಸು; (ನೀರು, ರಕ್ತ, ಮೊದಲಾದವುಗಳಿಂದ) ಆಕ್ಸಿಜನ್ನನ್ನು ತೆಗೆ.

de-sex
ಸಕರ್ಮಕ ಕ್ರಿಯಾಪದ
ನಿರ್ಲಿಂಗೀಕರಿಸು; ನಿರ್ಲಿಂಗಗೊಳಿಸು:
  • ಬೀಜ ಒಡೆ; ಹಿಡ ಮಾಡು; ಪುಂಸ್ತ್ವ ಕಳೆ; ನಪುಂಸಕವಾಗಿಸು.
  • (ಹೆಣ್ಣಿನ ಯಾ ಹೆಣ್ಣು ಪ್ರಾಣಿಯ) ಅಂಡಾಶಯ ತೆಗೆದುಹಾಕು.
  • ಲೈಂಗಿಕ ಲಕ್ಷಣಗಳನ್ನು ಯಾ ಆಕರ್ಷಣೆಗಳನ್ನು ಕಳೆ, ತೆಗೆದುಹಾಕು.

  • deacon
    ನಾಮವಾಚಕ
    ಡೀಕನ್ನು:
  • (ಪ್ರಾಚೀನ ಚರ್ಚಿನ) ಧರ್ಮಾಧಿಕಾರಿ.
  • (ಎಪಿಸ್ಕೋಪಲ್‍ ಚರ್ಚಿನ) ಬಿಷಪ್ಪಿಗೂ ಪಾದರಿಗೂ ಕೆಳಗಿನ, ಮೂರನೆ ದರ್ಜೆಯ ಅಧಿಕಾರಿ.
  • (ಪ್ರೆಸ್ಬಿಟೇರಿಯನ್‍ ಕ್ರೈಸ್ತಮಂಡಲಿಯ) ಲೌಕಿಕ ವ್ಯವಹಾರದ ಅಧಿಕಾರಿ.

  • deacon
    ಸಕರ್ಮಕ ಕ್ರಿಯಾಪದ
    (ಅಮೆರಿಕನ್‍ ಪ್ರಯೋಗ)
  • (ಸ್ತೋತ್ರ ಮೊದಲಾದವನ್ನು) ಹೇಳಿಕೊಡು; ಚರ್ಚಿನಲ್ಲಿ ನೆರೆದ ಭಕ್ತವೃಂದ ಹಾಡುವ ಮುನ್ನ ಗಟ್ಟಿಯಾಗಿ ಪ್ರತಿಯೊಂದು ಸಾಲನ್ನೂ ಹೇಳಿಕೊಡು.
  • ಸ್ವಲ್ಪ ಮಟ್ಟಿಗೆ ಮೋಸಮಾಡು; ಕೊಂಚ ವಂಚಿಸು.

  • deaconate
    ನಾಮವಾಚಕ
    = diaconate.

    deaconess
    ನಾಮವಾಚಕ
    ಮಹಿಳಾ ಡೀಕನ್ನು; ಪ್ರಾಚೀನ ಮತ್ತು ಕೆಲವು ಆಧುನಿಕ ಚರ್ಚುಗಳಲ್ಲಿ ಡೀಕನ್ನನು ನಿರ್ವಹಿಸುವಂಥ ಕಾರ್ಯಗಳನ್ನು ನಡೆಸುವ ಸ್ತ್ರೀ.

    deaconship
    ನಾಮವಾಚಕ
    ಡೀಕನ್‍ – ಹುದ್ದೆ, ಪದವಿ; ಡೀಕನ್‍ಗಿರಿ.

    deactivate
    ಸಕರ್ಮಕ ಕ್ರಿಯಾಪದ
  • ನಿಷ್ಕ್ರಿಯಗೊಳಿಸು; ನಿಶ್ಚೇಷ್ಟಿತಗೊಳಿಸು; ಪರಿಣಾಮ ಬೀರದಂತಾಗಿಸು; ನಿಷ್ಫಲಗೊಳಿಸು.
  • (ಸೇನಾ ತುಕಡಿಯನ್ನು) ವಿಸರ್ಜಿಸು.
  • (ಮುಖ್ಯವಾಗಿ ಹ್ಯೂಸ್‍ ಕಳಚಿ ಬಾಂಬು, ಷೆಲ್ಲು, ಮೊದಲಾದವುಗಳನ್ನು ) ನಿಷ್ಕ್ರಿಯಗೊಳಿಸು.
  • (ರಸಾಯನವಿಜ್ಞಾನ) (ಸಾಮಾನ್ಯವಾಗಿ ರಾಸಾಯನಿಕ, ವೇಗವರ್ಧಕ, ಮೊದಲಾದವುಗಳ ವಿಷಯದಲ್ಲಿ) ನಿಷ್ಪಟುಗೊಳಿಸು; ಚುರುಕು ಕಳೆ; ನಿಷ್ಕ್ರಿಯಗೊಳಿಸು; ಪಟುತ್ವ ಇಲ್ಲದಂತೆ ಮಾಡು ಯಾ ಕಡಿಮೆ ಮಾಡು.


  • logo