logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

calvities
ನಾಮವಾಚಕ
(ಬಹುವಚನ) ಬೊಕ್ಕತಲೆ; ಬೋಳುತಲೆ; ಪಟ್ಟತಲೆ.

calvous
ಗುಣವಾಚಕ
ಬೊಕ್ಕ; ಬೋಳು; ತಲೆಕೂದಲು ಪೂರ್ಣವಾಗಿ ಯಾ ಆಂಶಿಕವಾಗಿ ಉದುರಿಹೋದ.

calx
ನಾಮವಾಚಕ
ಭಸ್ಮ; ಲೋಹಭಸ್ಮ; ಲೋಹಬೂದಿ; ಲೋಹವನ್ನೋ ಖನಿಜ ಪದಾರ್ಥವನ್ನೋ ಗಾಳಿಯಲ್ಲಿ ಚೆನ್ನಾಗಿ ಸುಟ್ಟಾಗ ಉಳಿಯುವ ಪುಡಿ.

calyc-
ಸಮಾಸ ಪೂರ್ವಪದ
ಪುಷ್ಪಪಾತ್ರದ, ಪುಷ್ಪಪಾತ್ರಕ್ಕೆ ಸಂಬಂಧಿಸಿದ ಎಂಬರ್ಥದ ಪೂರ್ವಪ್ರತ್ಯಯ: calycoid.

calyci-
ಸಮಾಸ ಪೂರ್ವಪದ
=calyc-.

calycifloral
ಗುಣವಾಚಕ
ಪುಷ್ಪಪಾತ್ರದಳದ; ಪುಂಕೇಸರಗಳು ಪುಷ್ಪಪಾತ್ರಕ್ಕೆ ಅಂಟಿಕೊಂಡಿರುವ.

calyciflorate
ಗುಣವಾಚಕ
=calycifloral.

calyciflorous
ಗುಣವಾಚಕ
=calyciflorate.

calyciform
ಗುಣವಾಚಕ
ಪುಷ್ಪಪಾತ್ರಾಕಾರದ; ಹೂಬಟ್ಟಲಿನಂಥ.

calycinal
ಗುಣವಾಚಕ
ಪುಷ್ಪಪಾತ್ರದಂಥ ಯಾ ಅದಕ್ಕೆ ಸಂಬಂಧಿಸಿದ.


logo