logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

accentual
ಗುಣವಾಚಕ
(ಛಂದಸ್ಸು) (ಉಚ್ಚಾರಣೆಯ) ಸ್ವರಘಾತೀಯ; ಸ್ವರಕ್ಕೆ ಸಂಬಂಧಪಟ್ಟ.

accentual prosody
ನಾಮವಾಚಕ
ಸ್ವರಾಘಾತೀಯ ಛಂದಸ್ಸು.

accentual verse
ನಾಮವಾಚಕ
= accentual prosody.

accentually
ಕ್ರಿಯಾವಿಶೇಷಣ
(ಛಂದಸ್ಸು) ಸ್ವರಘಾತೀಯವಾಗಿ.

accentuate
ಸಕರ್ಮಕ ಕ್ರಿಯಾಪದ
  • ಸ್ವರ ಹಾಕು; ಒತ್ತಿ ಉಚ್ಚರಿಸು.
  • ಒತ್ತಿಹೇಳು; ಒತ್ತುಕೊಡು; ಪ್ರಾಧಾನ್ಯ ನೀಡು; ಹೆಚ್ಚು ಮಹತ್ತ್ವ ಕೊಡು.
  • ಎದ್ದು ಕಾಣುವಂತೆ ಮಾಡು; ಸ್ಪಷ್ಟವಾಗಿ ಗೋಚರಿಸುವಂತೆ ಮಾಡು; ಸ್ಫುಟಗೊಳಿಸು.

  • accentuation
    ನಾಮವಾಚಕ
  • (ಛಂದಸ್ಸು) ಸ್ವರಘಾತ; ಉಚ್ಚಾರಾಂಶವನ್ನು ಒತ್ತಿ ಉಚ್ಚರಿಸುವುದು.
  • (ಛಂದಸ್ಸು) ಒತ್ತು ಚಿಹ್ನೆ; ಸ್ವರಾಂಕ; ಸ್ವರಘಾತಸೂಚಿ.
  • ಉಚ್ಚಾರಣೆ; ಉಚ್ಚರಿಸುವ–ರೀತಿ, ವಿಧಾನ.
  • ಪ್ರಾಮುಖ್ಯ; ಪ್ರಾಮುಖ್ಯ ಕೊಡುವಿಕೆ; ಹೆಚ್ಚು ಮಾಡುವಿಕೆ.

  • accept
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಅಂಗೀಕರಿಸಲು, ಸ್ವೀಕರಿಸಲು, ತೆಗೆದುಕೊಳ್ಳಲು) ಒಪ್ಪು; ಒಪ್ಪಿಕೊ; ಸಮ್ಮತಿಸು: accept an apology ಕ್ಷಮಾಪಣೆಯನ್ನು ಅಂಗೀಕರಿಸು. accepted lower wages ಕಡಮೆ ಕೂಲಿಯನ್ನು ಒಪ್ಪಿಕೊಂಡ.
  • (ಒಪ್ಪಿಗೆಯಿಂದ) ತೆಗೆದುಕೊ; ಸ್ವೀಕರಿಸು: accept a gift ಉಡುಗೊರೆಯನ್ನು ತೆಗೆದುಕೊ.
  • (ಆಮಂತ್ರಣವನ್ನು, ಮದುವೆಯಾಗಲು ವರನನ್ನು) ಅಂಗೀಕರಿಸು; ಸ್ವೀಕರಿಸು; ಆಗಲಿ ಎನ್ನು; ಒಪ್ಪು: when he asked her to marry him, she accepted him ತನ್ನನ್ನು ಮದುವೆಯಾಗೆಂದು ಅವನು ಕೇಳಿದಾಗ ಅವಳು ಆಗಲಿ ಎಂದಳು (ಅವನನ್ನು ಒಪ್ಪಿದಳು). please accept my invitation ದಯವಿಟ್ಟು ನನ್ನ ಆಹ್ವಾನವನ್ನು ಅಂಗೀಕರಿಸು.
  • (ತಾಳ್ಮೆಯಿಂದ ವಿರೋಧಿಸದೆ) ಸಹಿಸಿಕೊ; ತಾಳಿಕೊ; ಒಪ್ಪಿಕೊ: accept the umpire’s decision ಅಂಪೈರ್‍ನ ತೀರ್ಮಾನಕ್ಕೆ ಬದ್ಧನಾಗು.
  • (ಸಮರ್ಪಕವೆಂದು, ನ್ಯಾಯವಾಗಿದೆಯೆಂದು, ಸರಿಯೆಂದು) ಒಪ್ಪು; ಅಂಗೀಕರಿಸು; ಸ್ವೀಕರಿಸು: will accept your explanation ನಿನ್ನ ವಿವರಣೆಯನ್ನು ಒಪ್ಪಿಕೊಳ್ಳುತ್ತೇನೆ. slot machine accepts only coins ಸ್ಲಾಟ್‍ ಯಂತ್ರವು ನಾಣ್ಯಗಳನ್ನು ಮಾತ್ರ ಸ್ವೀಕರಿಸುತ್ತದೆ. accept service of writ ಕೋರ್ಟಿನ ಖಟ್ಲೆಯನ್ನು ನ್ಯಾಯವೆಂದು ಅಂಗೀಕರಿಸು.
  • ನಿಜವೆಂದು ಒಪ್ಪಿಕೊ; ಸತ್ಯವೆಂದು–ಗ್ರಹಿಸು, ಅಂಗೀಕರಿಸು, ನಂಬು: accepted opinion ಅಂಗೀಕೃತಾಭಿಪ್ರಾಯ; ಸರ್ವಸಮ್ಮತಾಭಿಪ್ರಾಯ; ಸಾರ್ವತ್ರಿಕಾಭಿಪ್ರಾಯ; ಸರಿಯೆಂದು ಎಲ್ಲರೂ ಭಾವಿಸಿರುವ ಅಭಿಪ್ರಾಯ.
  • (ಹುದ್ದೆಯನ್ನು, ಅಧಿಕಾರವನ್ನು) ಅಂಗೀಕರಿಸು; ವಹಿಸಿಕೊ; ಒಪ್ಪಿಕೊ.
  • ಹೊಣೆ ಹೊತ್ತುಕೊ; ಜವಾಬ್ದಾರಿ ವಹಿಸಿಕೊ; ಒಪ್ಪಿಕೊ : accept bill of exchange ಹುಂಡಿಯನ್ನು ಒಪ್ಪಿಕೊ; ಹುಂಡಿಯ ಹಣವನ್ನು ತೆರುವ ಹೊಣೆ ಹೊತ್ತುಕೊ.
  • (ಪದ, ವಾಕ್ಯ, ಹೇಳಿಕೆ, ಸಂದರ್ಭ, ಮೊದಲಾದವುಗಳ ವಿಷಯದಲ್ಲಿ ಅವುಗಳ) ಅರ್ಥ ಗ್ರಹಿಸು; ಸೂಚನೆಯನ್ನು ಅರ್ಥ ಮಾಡಿಕೊ.
  • (ಮುಖ್ಯವಾಗಿ ಸಾಕಿದ ಹೆಣ್ಣು ಪ್ರಾಣಿಯ ವಿಷಯದಲ್ಲಿ) ಕೂಡಗೊಡು; ಮೈಥುನಕ್ಕೆ ಆಸ್ಪದ ಕೊಡು.

  • acceptability
    ನಾಮವಾಚಕ
    ಗ್ರಾಹ್ಯತೆ; ಅಂಗೀಕಾರಾರ್ಹತೆ; ಸ್ವೀಕಾರಾರ್ಹತೆ.

    acceptable
    ಗುಣವಾಚಕ
  • ಒಪ್ಪಬಹುದಾದ; ಒಪ್ಪತಕ್ಕ; ಗ್ರಾಹ್ಯ; ಸ್ವೀಕಾರ್ಯ; ಸ್ವೀಕಾರಯೋಗ್ಯ; ಅಂಗೀಕಾರಾರ್ಹ: no compromise could ever be acceptable ಯಾವ ರಾಜಿಯೂ ಅಂಗೀಕಾರಾರ್ಹವಲ್ಲ.
  • ಹಿತವಾದ; ಇಷ್ಟವಾದ; ಪ್ರಿಯವಾದ; ತೃಪ್ತಿಕರವಾದ.
  • ಸಹಿಸಬಲ್ಲ; ತೆಗೆದುಕೊಳ್ಳಬಲ್ಲ; ತಾಳಿಕೊಳ್ಳಬಲ್ಲ: acceptable risk ಸಹಿಸಿಕೊಳ್ಳಬಲ್ಲ–ನಷ್ಟ, ಅಪಾಯ.
  • ಕೇವಲ ತೃಪ್ತಿಕರ ಎನ್ನಬಹುದಾದ; ಪರವಾಗಿಲ್ಲವೆನ್ನಬಹುದಾದ: the paintings varied from excellent to acceptable ಆ ವರ್ಣಚಿತ್ರಗಳ ವೈವಿಧ್ಯ ಅತ್ಯುತ್ತಮ ಮಟ್ಟದಿಂದ ಕೇವಲ ತೃಪ್ತಿಕರವೆಂಬಷ್ಟರವರೆಗೂ ಇತ್ತು.

  • acceptableness
    ನಾಮವಾಚಕ
    = acceptability.


    logo