logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oddly
ಕ್ರಿಯಾವಿಶೇಷಣ
ವಿಚಿತ್ರವಾಗಿ; ವಿಲಕ್ಷಣವಾಗಿ; ವಿಚಿತ್ರ ರೀತಿಯಲ್ಲಿ.

oddment
ನಾಮವಾಚಕ
  • ಒಂಟಿ; ಜೋಡಿಗೆ ಸೇರದ ವಸ್ತು; ಬಿಡಿ ಪದಾರ್ಥ.
  • ಉಳಿಕೆ; ಶೇಷ; ಉಳಿದುಹೋದದ್ದು.
  • (ಬಹುವಚನ ದಲ್ಲಿ) ಚೂರುಪಾರುಗಳು; ಚಿಲ್ಲರೆಪಲ್ಲರೆ; ಉಳಿಕೆಪಳಿಕೆ.

  • oddness
    ನಾಮವಾಚಕ
    ವೈಲಕ್ಷಣ್ಯ; ವೈಚಿತ್ರ್ಯ; ವಿಚಿತ್ರವಾಗಿರುವಿಕೆ; ವಿಲಕ್ಷಣವಾಗಿರುವಿಕೆ.

    odds
    ನಾಮವಾಚಕ ಪದಗುಚ್ಛ
    (ಬಹುವಚನ)
  • (ಎರಡೂ ಕಡೆಗೂ ಇರುವ ನಿರೀಕ್ಷಿತ ಸಂಭಾವ್ಯತೆಯನ್ನು ಅವಲಂಬಿಸಿ, ಪಂಥಗಾರರು ಒಡ್ಡುವ) ಪಣದ ಅನುಪಾತ ಯಾ ಅದರ ಪ್ರಮಾಣ: give (or lay) odds of three to one ಒಂದಕ್ಕೆ ಮೂರರಷ್ಟು (ಪಣ) ಒಡ್ಡು.
  • ಹೆಚ್ಚು ಸಂಭವ; ಅಧಿಕ ಸಂಭಾವ್ಯತೆ; ಯಾವುದೇ ಪರಿಣಾಮ ಆಗುವ ಅಸಂಭವನೀಯತೆಗಿಂತ ಇರುವ ಹೆಚ್ಚಿನ ಸಂಭವನೀಯತೆ: the odds are that he will do it ಅವನು ಅದನ್ನು ಮಾಡುವ ಸಂಭವವೇ ಹೆಚ್ಚು: the odds are that it will rain ಮಳೆಯಾಗುವ ಸಂಭವವೇ ಹೆಚ್ಚು.
  • ಪ್ರತಿಕೂಲಕ್ಕಿಂತ ಹೆಚ್ಚಿನ ಅನುಕೂಲ; the odds are in oue favour ನಮಗೆ ಪ್ರತಿಕೂಲವೇ ಹೆಚ್ಚಾಗಿದೆ. I have fought against longer odds ಇದಕ್ಕಿಂತ ಹೆಚ್ಚಿನ ಪ್ರತಿಕೂಲಗಳನ್ನು ಎದುರಿಸಿದ್ದೇನೆ (ಎಂದರೆ ಈಗ ಪ್ರತಿಕೂಲ ಅಷ್ಟೇನೂ ಹೆಚ್ಚಿಲ್ಲ), won the against all the adds ಎಲ್ಲ ಪ್ರತಿಕೂಲಗಳಿದ್ದರೂ, ಎಲ್ಲ ಪ್ರತಿಕೂಲಗಳ ವಿರುದ್ಧ ಗೆದ್ದ. the adds are against him ಅವನು ಗೆಲ್ಲುವ ಸಾಧ್ಯತೆ ಕಡಮೆ.
  • (ಸ್ಪರ್ಧಿಗಳಲ್ಲಿ ದುರ್ಬಲನಾದವನಿಗೆ ಇತರರೊಡನೆ ಸಮ ಅವಕಾಶ ಕಲ್ಪಿಸಿಕೊಡಲು ನೀಡುವ) ರಿಯಾಯಿತಿ: give adds(ದುರ್ಬಲ ಸ್ಪರ್ಧಿಗೆ) ರಿಯಾಯಿತಿ ನೀಡಿ ಸಮಾವಕಾಶ ಕಲ್ಪಿಸಿಕೊಡು.
  • (ಅನುಕೂಲಕರ) ವ್ಯತ್ಯಾಸ: what is the adds? ಅದರಿಂದೇನು? ಅದರಿಂದೇನು ತೊಂದರೆ? it makes no adds ಅದರಿಂದ ಏನೂ ವ್ಯತ್ಯಾಸವಾಗದು.
  • (ಪ್ರಾಚೀನ ಪ್ರಯೋಗ) ಹೆಚ್ಚುಕಡಮೆ; ವೈಷಮ್ಯ; ಅಸಮತೆ: make adds even ಹೆಚ್ಚು ಕಡಿಮೆ ಇಲ್ಲದಂತೆ ಮಾಡು; ಸರಿಸಮ ಮಾಡು.
  • ವಿರೋಧ; ಹೋರಾಟ; ಪ್ರತಿಕೂಲ: they are at adds with fate ಅವರು ವಿಧಿಯೊಡನೆ, ಅದೃಷ್ಟದೊಡನೆ ಹೋರಾಡುತ್ತಿದ್ದಾರೆ.

  • odds-on
    ನಾಮವಾಚಕ
    (ಮುಖ್ಯವಾಗಿ ಪಣ ಒಡ್ಡುವಾಗ) ಗೆಲ್ಲುವ ಸಂಭವ; ಸೋಲಿಗಿಂತ ಗೆಲುವು ಹೆಚ್ಚು ಸಂಭವನೀಯವಾಗಿರುವ ಸ್ಥಿತಿ.

    ode
    ನಾಮವಾಚಕ ಪದಗುಚ್ಛ
    choral ade (ಗ್ರೀಕ್‍ ನಾಟಕ ಮೊದಲಾದವುಗಳಲ್ಲಿಯ) ಮೇಳದ ಹಾಡು; ಮೇಳಗೀತೆ; ಮೇಳದವರು ಹಾಡುವ ಹಾಡು, ಪದ್ಯ.
  • ಪ್ರಗಾಥ; ಪ್ರಾಸವುಳ್ಳ, ಅಪರೂಪವಾಗಿ ಪ್ರಾಸವಿಲ್ಲದ, ಸಾಮಾನ್ಯವಾಗಿ ಪದ್ಯದ ವಸ್ತುವನ್ನು ಸಂಬೋಧಿಸಿ ಸ್ತುತಿಸುವ, ಉದಾತ್ತವೂ ಭಾವಪೂರ್ಣವೂ ಆದ ಶೈಲಿಯುಳ್ಳ, ಹಲವೊಮ್ಮೆ ವಿವಿಧವಾದ ಯಾ ಅನಿರ್ದಿಷ್ಟ ರೂಪದ ಛಂದಸ್ಸುಗಳಲ್ಲಿ ಬರೆದ ಭಾಗಗಳನ್ನೊಳಗೊಂಡ, ಸಾಮಾನ್ಯವಾಗಿ 50ರಿಂದ 200ರಷ್ಟು ಪಂಕ್ತಿಗಳುಳ್ಳ ಭಾವಗೀತೆ.
  • (ಚರಿತ್ರೆ) ಹಾಡು; ಗೀತ; ಹಾಡುಗಬ್ಬ; ಹಾಡುವುದಕ್ಕಾಗಿ ರಚಿಸಿದ ಪದ್ಯ.

  • odeum
    ನಾಮವಾಚಕ
    (ಮುಖ್ಯವಾಗಿ ಪುರಾತನ ಗ್ರೀಕರ ಮತ್ತು ರೋಮನರ) ಸಂಗೀತಶಾಲೆ; ಗಾಯನ ಮಂದಿರ; ಸಂಗೀತ ಕಚೇರಿಗಳಿಗಾಗಿ ಕಟ್ಟಿದ ಕಟ್ಟಡ.

    odic
    ಗುಣವಾಚಕ
    ‘ಆಡ್‍’ ಎಂಬ ಶಕ್ತಿಯ; ನಿಸರ್ಗದಲ್ಲೆಲ್ಲ ವ್ಯಾಪಿಸಿ, ಕಾಂತತ್ವ, ಸ್ಫಟಿಕೀಭವನ, ರಾಸಾಯನಿಕ ಕ್ರಿಯೆ, ಸಂಮೋಹನ, ಮೊದಲಾದವುಗಳಿಗೆ ಕಾರಣವಾಗಿದೆಯಂದು ಊಹಿಸಲಾದ ಒಂದು ಶಕ್ತಿವಿಶೇಷಕ್ಕೆ ಸಂಬಂಧಿಸಿದ.

    odious
    ಗುಣವಾಚಕ
    ದ್ವೇಷ ಕೆರಳಿಸುವ; ದ್ವೇಷ್ಯ; ಹೇಸಿಕೆ ಹುಟ್ಟಿಸುವ; ಅಸಹ್ಯಕರ(ವಾದ); ಜುಗುಪ್ಸೆಯಉಂಟುಮಾಡುವ.

    odiously
    ಕ್ರಿಯಾವಿಶೇಷಣ
    ದ್ವೇಷ ಕೆರಳಿಸುವಂತೆ; ಜುಗುಪ್ಸಾವಹವಾಗಿ; ಹೇಸಿಕೆ ಹುಟ್ಟಿಸುವ ರೀತಿಯಲ್ಲಿ; ಅಸಹ್ಯಕರವಾಗಿ.


    logo