logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

malarkey
ನಾಮವಾಚಕ
(ಆಡುಮಾತು) ಅಬದ್ಧ; ಅರ್ಥವಿಲ್ಲದ ಮಾತು ಯಾ ಬರವಣಿಗೆ.

malathion
ನಾಮವಾಚಕ
ಮ್ಯಾಲತಯನ್‍; ಸಸ್ಯಗಳಿಗೆ ಕಡಿಮೆ ವಿಷಕರವಾದ ರಂಜಕವುಳ್ಳ, ಒಂದು ಬಗೆಯ ಕ್ರಿಮಿನಾಶಕ.

Malay
ಗುಣವಾಚಕ
  • (ಮಲಯ ಮತ್ತು ಇಂಡೋನೀಸಿಯಗಳ ಪ್ರಧಾನ ನಿವಾಸಿಗಳಾದ) ಮಲಯ ಬುಡಕಟ್ಟಿನವನ.
  • ಮಲಯಾ ಭಾಷೆಯ.

  • Malay
    ನಾಮವಾಚಕ ಪದಗುಚ್ಛ
    Malay fowl ಮಲಯಾ ಕೋಳಿ; ಮನೆಗಳಲ್ಲಿ ಸಾಕುವ, ಒಂದು ಬಗೆಯ ದೊಡ್ಡ ಕೋಳಿ.
  • ಮಲಯಾದವನು; ಮಲಯಾ ಬುಡಕಟ್ಟಿನವನು.
  • ಮಲಯಾ ಭಾಷೆ; ಮಲಯಾ ಮತ್ತು ಇಂಡೋನೀಸಿಯಗಳ ಪ್ರಧಾನ ನಿವಾಸಿಗಳಾದ ಮಲಯಾ ಜನರ, ಮಲೇಷಿಯಾ ದೇಶದ ಅಧಿಕೃತ ಭಾಷೆ.

  • Malayalam
    ನಾಮವಾಚಕ
    ಮಲಯಾಳಿ; ಭಾರತದ ದ್ರಾವಿಡ ಭಾಷೆಗಳಲ್ಲೊಂದಾದ ಕೇರಳದ ಭಾಷೆ.

    Malayan
    ನಾಮವಾಚಕ
    ಮಲಯಾ ದೇಶದವ(ಳು); ಮಲಯಾ ದೇಶದಲ್ಲಿ ಹುಟ್ಟಿದವ(ಳು) ಯಾ ವಾಸಿಸುವವ(ಳು).

    Malayan
    ಗುಣವಾಚಕ
  • ಮಲಯಾದ; ಮಲಯಾ ದೇಶದ ಯಾ ಅದಕ್ಕೆ ಸಂಬಂಧಿಸಿದ.
  • ಮಲಯನರ; ಮಲಯಾ ಬುಡಕಟ್ಟಿನ ಜನರ ಯಾ ಅವರಿಗೆ ಸಂಬಂಧಿಸಿದ.

  • Malayo-
    ಸಮಾಸ ಪೂರ್ವಪದ
    ಮಲಯೋ-; ಮಲಯಾದ ಮತ್ತು ಎಂಬ ಅರ್ಥದಲ್ಲಿ ಬಳಸುವ ಪೂರ್ವಪ: Malayo-Chinese ಮಲಯೋ ಚೈನಾದ; ಮಲಯ ಮತ್ತು ಚೀನಾದ.

    malcontent
    ಗುಣವಾಚಕ
    ಅಸಂತುಷ್ಟ; ಅತೃಪ್ತ; ಸಮಾಧಾನವಿಲ್ಲದ; ಒಳಗೇ ಕುದಿಯುತ್ತಿರುವ.

    malcontent
    ನಾಮವಾಚಕ
    ಅಸಂತುಷ್ಟ; ಅತೃಪ್ತ:
  • ಅಸಮಾಧಾನದಿಂದ ತುಂಬಿದ ವ್ಯಕ್ತಿ; ತನಗೆ ಏನೋ ಅನ್ಯಾಯವಾಗಿದೆ ಎಂಬ ಭಾವನೆಯಿಂದ ಯಾ ಯಾವುದೋ ಮಹಾತ್ವಾಕಾಂಕ್ಷೆಯಿಂದ ಒಳಗೇ ಕುದಿಯುತ್ತಿರುವವನು.
  • ನೆಲೆಗೊಂಡಿರುವ ವ್ಯವಸ್ಥೆಯಲ್ಲಿ ಸಮಾಧಾನವಿಲ್ಲದವನು.
  • ಎದುರುಬೀಳುವ ಯಾ ದಂಗೆ ಏಳುವ ಪ್ರವೃತ್ತಿಯುಳ್ಳವನು.


  • logo