logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

land-mine
ನಾಮವಾಚಕ
  • ಭೂಸ್ಫೋಟಕ; ನೆಲಸಿಡಿ (ಗುಂಡು); ಭೂಮಿಯೊಳಗೆ ಹುದುಗಿಸಿದ ಯಾ ಭೂಮಿಯ ಮೇಲೆ ಇಟ್ಟ – ಸಿಡಿಗುಂಡು, ಸ್ಫೋಟಕ.
  • ಪ್ಯಾರಾಷೂಟ್‍ ಸ್ಫೋಟಕ; ಪ್ಯಾರಾಷೂಟಿನಿಂದ ನೆಲಕ್ಕಿಳಿಸುವ ಸಿಡಿಗುಂಡು.

  • land-office business
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಭಾರಿ ವ್ಯಾಪಾರ; ಭರ್ಜರಿ ವ್ಯಾಪಾರ.

    land-service
    ನಾಮವಾಚಕ
    ಭೂಸೈನಿಕ ವೃತ್ತಿ.

    land-shark
    ನಾಮವಾಚಕ
  • ಕರೆಸುಲಿಗೆಗಾರ; ತೀರದಲ್ಲಿಳಿಯುವ ನಾವಿಕರನ್ನು ಸುಲಿಗೆ ಮಾಡಿ ಜೀವಿಸುವವ.
  • = land-grabber.

  • land-slater
    ನಾಮವಾಚಕ
    ಮರಹೇನು; ಹಳೆಯ ಮರದ ಕೊರಡು ಮೊದಲಾದವುಗಳಲ್ಲಿ ವಾಸಿಸುವ ಒಂದು ಬಗೆಯ ಕೀಟ.

    land-swell
    ನಾಮವಾಚಕ
    ಹೆಬ್ಬಲೆಯುರುಳು; ಉರುಳುವ ಹೆಬ್ಬಲೆ; ಸಮುದ್ರತೀರದ ಮೇಲೆ ದೊಡ್ಡ ಅಲೆಗಳ ಉರುಳು.

    land-tax
    ನಾಮವಾಚಕ
    (ಚರಿತ್ರೆ) ನೆಲತೆರಿಗೆ; ಭೂಕಂದಾಯ; ಭೂಸ್ವತ್ತಿನ ಆಧಾರದ ಮೇಲೆ ಹಾಕಿದ ಕಂದಾಯ.

    land-tie
    ನಾಮವಾಚಕ
    ನೆಲಬಿಗಿ; ಸಿಪಾಯಿ ಕಂಬ; ಗೋಡೆ ಮೊದಲಾದವು ಭದ್ರವಾಗಿರುವಂತೆ ಅವನ್ನು ನೆಲಕ್ಕೆ ಬಂಧಿಸಿರುವ ತೊಲೆ, ದೂಲ, ಕಂಬಿ.

    landau
    ನಾಮವಾಚಕ
    ಲ್ಯಾಂಡಾ – ಗಾಡಿ, ಬಂಡಿ; ತೆಗೆದಿಡಬಲ್ಲ ಮುಂದಿನ ಚಾವಣಿ ಮತ್ತು ಮೇಲಕ್ಕೆ ಕೆಳಕ್ಕೆ ಸರಿಸಬಲ್ಲ ಹಿಂದಿನ ಚಾವಣಿ ಇರುವ, ನಾಲ್ಕು ಚಕ್ರದ, ಆವೃತ ಸವಾರಿ ಬಂಡಿ, ಸಾರೋಟು.

    landaulet
    ನಾಮವಾಚಕ
  • ಸಣ್ಣ ಲ್ಯಾಂಡಾ ಬಂಡಿ, ಗಾಡಿ.
  • (ಚರಿತ್ರೆ) ಹಿಂದಿನ ಆಸನಗಳ ಮೇಲೆ, ಮಡಿಚಬಲ್ಲ ಚಾವಣಿ ಇರುವ ಒಂದು ಕಾರು.


  • logo